Kitchen Vastu Tips: ನಿಮ್ಮ ಅಡುಗೆ ಮನೆಯ ವಾಸ್ತು ಹೀಗಿರಬೇಕಂತೆ
Kitchen Vastu Tips: ಮನೆಯಲ್ಲಿ ವಾಸ್ತು ಸರಿಯಿಲ್ಲದಿದ್ದರೆ ಹಲವಾರು ಸಮಸ್ಯೆಗಳು ಬರುತ್ತದೆ. ನೆಮ್ಮದಿ ಇರುವುದಿಲ್ಲ, ಆರ್ಥಿಕವಾಗಿ ನಷ್ಟವಾಗುತ್ತದೆ. ಹಾಗಾಗಿ ಮನೆಯಲ್ಲಿ ವಾಸ್ತು ಬಹಳ ಮುಖ್ಯ. ಮನೆಯ ಮುಖ್ಯವಾದ ಸ್ಥಳ ಎಂದರೆ ಅದು ಅಡುಗೆ ಮನೆ. ನಮ್ಮ ಆರೋಗ್ಯ ಇರುವುದೇ ಅಲ್ಲಿ. ಈ ಅಡುಗೆ ಮನೆಯ ವಾಸ್ತು ಹೇಗಿರಬೇಕು ಎಂಬುದು ಇಲ್ಲಿದೆ.
ಅಡುಗೆ ಮನೆಯ ವಾಸ್ತು ಹೇಗಿರಬೇಕು ಎಂದು ನಿರ್ಧಾರ ಮಾಡುವ ಮೊದಲು ಅಡುಗೆ ಮನೆ ಯಾವ ದಿಕ್ಕಿನಲ್ಲಿ ಇರಬೇಕು ಎಂಬುದು ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ ಅಡುಗ ಮನೆ ಪೂರ್ವ ಹಾಗೂ ಆಗ್ನೇಯ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದಂತೆ.
2/ 8
ಅಡುಗೆ ಮನೆಯ ಪ್ರತಿ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಡುತ್ತೀರಿ ಎಂಬುದು ಬಹಳ ಮುಖ್ಯ. ನೀವು ಅಡುಗೆ ಮಾಡುವಾಗ ನಿಮ್ಮ ಗ್ಯಾಸ್ ಪೂರ್ವ ದಿಕ್ಕಿನಲ್ಲಿ ಇದ್ದರೆ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ.
3/ 8
ನಿಮ್ಮ ಅಡುಗೆ ಮನೆಯ ಟೈಲ್ಸ್ ಬಣ್ಣಗಳು ಸಹ ಮುಖ್ಯ, ಬಿಳಿ ಶಾಂತಿಯ ಪ್ರತೀಕವಾಗಿದ್ದು, ನಿಮ್ಮ ಅಡುಗೆ ಮನೆಯ ಟೈಲ್ಸ್ ಬಿಳಿ ಬಣ್ಣದಲ್ಲಿ ಇದ್ದರೆ ಸೂಕ್ತ. ಹಾಗೆಯೇ ಹಸಿರು ಬಣ್ಣ ಸಹ ಪ್ರಕೃತಿಯ ಸಂಕೇತವಾಗಿದ್ದು ಟೈಲ್ಸ್ಗಳು ಹಸಿರು ಬಣ್ಣದಲ್ಲಿ ಇದ್ದರೆ ಉತ್ತಮ.
4/ 8
ನೀವು ಕುಡಿಯುವ ನೀರಿನ ಕ್ಯಾನ್ ಅಥವಾ ಫಿಲ್ಟರ್ ಅನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು. ಅಲ್ಲದೇ, ಅದೇ ದಿಕ್ಕಿನಲ್ಲಿ ಬೇಕಾದರೆ ನೀವು ಸಿಂಕ್ ಅನ್ನು ಸಹ ಇಡಬಹುದು. ಆದರೆ ಯಾವಾಗಲೂ ಸ್ವಚ್ಛವಾಗಿರಬೇಕು.
5/ 8
ಫ್ರಿಜ್ ಸಹ ಅಡುಗೆ ಮನೆಯ ಬಹಳ ಮುಖ್ಯವಾದ ಒಂದು ವಸ್ತು. ಇದರಲ್ಲಿ ನಮ್ಮ ಬಹುತೇಕ ಆಹಾರಗಳಿರುತ್ತದೆ. ಹಾಗಾಗಿ ಇದನ್ನು ಪಶ್ಚಿಮ ದಿಕ್ಕಿನಲ್ಲಿ ಇಡುವುದು ಬಹಳ ಸಹಾಯ ಮಾಡುತ್ತದೆ.
6/ 8
ಫ್ರಿಜ್ ರೀತಿಯೇ ಮೈಕ್ರೋವೇವ್ ಸಹ ಈಗ ಅತಿ ಹೆಚ್ಚು ಬಳಸುವ ವಸ್ತು. ಇದನ್ನು ಕೂಡ ಯಾವ ದಿಕ್ಕಿನಲ್ಲಿ ಇಡುತ್ತೀರ ಎನ್ನುವುದು ಮುಖ್ತವಾಗುತ್ತದೆ. ಇದನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ.
7/ 8
ಮನೆ ಸಣ್ಣ ಇದ್ದಾಗ ನಾವೆಲ್ಲರೂ ಮಾಡುವ ದೊಡ್ಡ ತಪ್ಪು ಎಂದರೆ ಅಡುಗೆ ಮನೆಯಲ್ಲಿ ದೇವರ ಮನೆ ಮಾಡುವುದು. ಇದು ಭವಿಷ್ಯದಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ನೀವು ದೇವರ ಫೋಟೋ ಇಡಲು ಬೇರೆ ಸ್ಥಳ ಹುಡುಕಿ.
8/ 8
ಇನ್ನು ಅಡುಗೆ ಮನೆಯ ಮತ್ತೊಂದು ಬಹು ಮುಖ್ಯವಾದ ವಸ್ತು ಎಂದರೆ ಡೈನಿಂಗ್ ಟೇಬಲ್. ಇದನ್ನು ನಾವು ಸಾಮಾನ್ಯವಾಗಿ ಅಡುಗೆ ಮನೆಯ ಹೊರಭಾಗದಲ್ಲಿ ಇಡುತ್ತೇವೆ. ಆದರೆ ಇದನ್ನು ವಾಯುವ್ಯ ದಿಕ್ಕಿನಲ್ಲಿ ಇಡಬೇಕು.