Kitchen Vastu: ಮನೆಯಲ್ಲಿ ಉಪ್ಪು ಚೆಲ್ಲಬಾರದು ಎಂಬುದು ಇದೇ ಕಾರಣಕ್ಕೆ!
ವಾಸ್ತು ಪ್ರಕಾರ (Vastu), ಮನೆಯನ್ನು ಅನೇಕ ವಸ್ತುಗಳ ಬಳಕೆ ಮಾಡುವ ಮುನ್ನ ಜಾಗ್ರತೆವಹಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಅಡುಗೆಮನೆಯಲ್ಲಿನ (Kitchen Vastu) ಕೆಲ ವಾಸ್ತುದೋಷವು ದೀರ್ಘಕಾಲದವರೆಗೆ ತೊಂದರೆ ನೀಡುತ್ತವೆ. ಹಾಗಾಗಿ ಅಡುಗೆ ಮನೆಯ ವಾಸ್ತುವಿನ ಬಗ್ಗೆ ಸ್ವಲ್ಪ ಜಾಗ್ರತೆ ವಹಿಸುವ ಅಗತ್ಯವಿದೆ. ವಾಸ್ತು ಶಾಸ್ತ್ರದಲ್ಲಿ, ಅಡುಗೆಮನೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳ ಬಗ್ಗೆ ಎಚ್ಚರವಹಿಸುವುದು ಅಗತ್ಯ
ಯಾವುದೇ ಅಡುಗೆ ಆಗಲಿ ಉಪ್ಪು ಇಲ್ಲದೇ ಸಾಗುವುದಿಲ್ಲ. ಅಂತಹ ಉಪ್ಪಿನ ಕುರಿತು ಕೆಲವು ನಂಬಿಕೆಗಳಿವೆ. ಉಪ್ಪನ್ನು ಚೆಲ್ಲುವುದು ಒಳಿತಲ್ಲ ಎಂಬ ನಂಬಿಕೆ ವಾಸ್ತು ಶಾಸ್ತ್ರದಲ್ಲಿದೆ. ಉಪ್ಪನ್ನು ಚೆಲ್ಲಿದರೆ ಅದು ವಾಸ್ತು ದೋಷಕ್ಕೂ ಕಾರಣವಾಗುತ್ತದೆ
2/ 5
ಉಪ್ಪು ಶುಕ್ರ ಮತ್ತು ಚಂದ್ರನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಮತ್ತು ಉಪ್ಪು ಬಿದ್ದರೆ, ಎರಡೂ ಗ್ರಹಗಳಿಗೆ ಸಂಬಂಧಿಸಿದ ಅಶುಭ ಫಲಿತಾಂಶಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಇದರಿಂದ ವ್ಯಕ್ತಿಯನ್ನು ಅನೇಕ ರೀತಿಯಲ್ಲಿ ತೊಂದರೆಗೊಳಿಸುತ್ತವೆ.
3/ 5
ಉಪ್ಪನ್ನು ಅಶುದ್ಧ ಕೈಯಿಂದ ಮುಟ್ಟಬಾರದು ಎಂಬ ನಂಬಿಕೆ ಇದೆ. ಒಬ್ಬ ವ್ಯಕ್ತಿಯು ಇದನ್ನು ಮಾಡಿದರೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
4/ 5
ಉಪ್ಪನ್ನು ತುಳಿಯುವುದು ಕೂಡ ಅಶುಭದ ಸಂಕೇತ ಎನ್ನಲಾಗಿದೆ. ಆದ್ದರಿಂದ, ಉಪ್ಪು ನೆಲದ ಮೇಲೆ ಬಿದ್ದಾಗ, ಅದನ್ನು ಪಾದಗಳಿಂದ ಸ್ವಚ್ಛಗೊಳಿಸ ಬಾರದು ಬದಲಿಗೆ ಒದ್ದೆಯಾದ ಬಟ್ಟೆಯಿಂದ ಶುಚಿಗೊಳಿಸಬೇಕು
5/ 5
ಇನ್ನು ಈ ಉಪ್ಪನ್ನು ತಿಂಗಳಿಗೊಮ್ಮೆ ಮನೆಯ ಮೂಲೆಗಳಿಗೆ ಸಿಂಪಡಿಸಬೇಕು. ತಿಂಗಳ ನಂತರ, ಹಳೆಯ ಉಪ್ಪನ್ನು ತೆಗೆದು ಹೊಸ ಉಪ್ಪು ಹಾಕಬೇಕು ಇದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ಹೋಗುತ್ತದೆ. ಶಾಂತಿ ನೆಲೆಸುತ್ತದೆ