Lucky Spices: ಅಡುಗೆ ಮನೆಯಲ್ಲಿರುವ ಈ ಮಸಾಲೆ ನಿಮ್ಮ ಅದೃಷ್ಟವನ್ನೇ ಚೇಂಜ್ ಮಾಡುತ್ತೆ
Lucky Spices: ಸಾವಿರಾರು ವರ್ಷಗಳಿಂದ ನಾವು ನಮ್ಮ ಅಡುಗೆಯ ಭಾಗವಾಗಿ ಮಸಾಲೆಗಳನ್ನು ಬಳಕೆ ಮಾಡುತ್ತೇವೆ. ಇದರಿಂದ ಆಹಾರದ ರುಚಿ ಹಾಗೂ ಪರಿಮಳ ಹೆಚ್ಚಾಗುತ್ತದೆ. ಆದರೆ ಈ ಮಸಾಲೆಗಳು ನಿಮ್ಮ ಜೀವನವನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ. ನಿಮ್ಮ ಅದೃಷ್ಟವನ್ನು ಹೆಚ್ಚಿಸಲು ಈ ಮಸಾಲೆಗಳನ್ನು ಹೇಗೆ ಬಳಕೆ ಮಾಡಬೇಕು ಎಂಬುದು ಇಲ್ಲಿದೆ.
ಸಾವಿರಾರು ವರ್ಷಗಳಿಂದ ನಾವು ನಮ್ಮ ಅಡುಗೆಯ ಭಾಗವಾಗಿ ಮಸಾಲೆಗಳನ್ನು ಬಳಕೆ ಮಾಡುತ್ತೇವೆ. ಇದರಿಂದ ಆಹಾರದ ರುಚಿ ಹಾಗೂ ಪರಿಮಳ ಹೆಚ್ಚಾಗುತ್ತದೆ. ಆದರೆ ಈ ಮಸಾಲೆಗಳು ನಿಮ್ಮ ಜೀವನವನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ.
2/ 8
ನಿಮ್ಮ ಮನೆಯಲ್ಲಿರುವ ಕೆಲ ಮಸಾಲೆಗಳನ್ನು ವಿವಿಧ ರೀತಿಯಲ್ಲಿ ಬಳಸುವುದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಹರಡದಂತೆ ತಡೆಯುತ್ತದೆ. ಅಲ್ಲದೇ ಇದರಿಂದ ಹಣದ ಸಮಸ್ಯೆ, ಆರೋಗ್ಯದ ಸಮಸ್ಯೆ ಸಹ ದೂರವಾಗುತ್ತದೆ.
3/ 8
ಲವಂಗ: ಲವಂಗ ಕೆಟ್ಟ ದೃಷ್ಟಿ ಬೀಳದಂತೆ ತಡೆಯುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಇದನ್ನು ಯಾವಾಗಲೂ ನಿಮ್ಮ ವ್ಯಾಲೆಟ್ನಲ್ಲಿ ಇಟ್ಟುಕೊಳ್ಳಲು ಸಲಹೆ ನೀಡಲಾಗುತ್ತದೆ. ಅಲ್ಲದೇ ಇದನ್ನು ದೇವರಿಗೆ ಆರತಿ ಮಾಡುವಾಗ ಇದನ್ನು ಹಾಕಿದರೆ ಒಳ್ಳೆಯದಾಗುತ್ತದೆ.
4/ 8
ಅರಿಶಿನ: ಇದು ನಿಮ್ಮ ಕೆಲಸದ ಅಡೆ-ತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಸ್ನಾನ ಮಾಡುವಾಗ ನೀರಿಗೆ ಅರಿಶಿನವನ್ನು ಬಳಸುವುದು ಕೆಲಸವನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ.
5/ 8
ಏಲಕ್ಕಿ: ನಿಮ್ಮ ವೃತ್ತಿ ಜೀವನದಲ್ಲಿ ಬೆಳವಣಿಗೆಗೆ ಈ ಏಲಕ್ಕಿ ಸಹಾಯ ಮಾಡುತ್ತದೆ. ದಿಂಬಿನ ಕೆಳಗೆ ಏಲಕ್ಕಿ ಇಟ್ಟುಕೊಂಡು ಮಲಗುವುದು ನಿಮ್ಮ ಕೆಲಸದಲ್ಲಿ ಯಶಸ್ಸು ನೀಡುತ್ತದೆ. ಹಾಗೆಯೇ ಇದನ್ನು ತಿನ್ನುವುದರಿಂದ ಸಹ ಆರ್ಥಿಕವಾಗಿ ಶಕ್ತಿ ಹೆಚ್ಚಾಗುತ್ತದೆ.
6/ 8
ದಾಲ್ಷಿನ್ನಿ: ಅದೃಷ್ಟವನ್ನು ಹೆಚ್ಚಿಸಲು ನೀವು ಈ ದಾಲ್ಷಿನ್ನಿಯನ್ನು ಬಳಕೆ ಮಾಡಬಹುದು. ಇದರ ಪುಡಿಯನ್ನು ಮನೆಯ ಮೂಲೆಗಳಿಗೆ ಹರಡುವುದರಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಹಾಗೆಯೇ ಆರೋಗ್ಯ, ಆರ್ಥಿಕ ಸ್ಥಿತಿ ಬೆಳವಣಿಗೆಗೆ ಸಹಾಯ ಮಾಡುತ್ತದೆ.
7/ 8
ಬೇ ಎಲೆ: ಈ ಮಸಾಲೆ ಎಲೆ ಸಹ ನಿಮ್ಮ ಬದುಕಿನಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ಇದರ ಮೇಲೆ ಕಲರ್ ಪೆನ್ನಿಂದ ನಿಮ್ಮ ಆಸೆಯನ್ನು ಬರೆದರೆ ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಹಾಗೆಯೇ ಇದನ್ನು ಆಹಾರಗಳಲ್ಲಿ ಸಹ ಬಳಸಿದರೆ ಲಾಭ ಹೆಚ್ಚಿದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)