Vastu Tips: ಮನೆಯ ಬಾಗಿಲ ಎದುರಿಗೆ ಈ ವಸ್ತುಗಳನ್ನು ಇಟ್ರೆ ಲಕ್ಷ್ಮೀ ಕೃಪೆ ಇರುತ್ತಂತೆ
Main Door Vastu Tips: ನಾವು ಮನೆಯ ಮೊದಲ ಬಾಗಿಲ ಎದುರಿಗೆ ಹಲವಾರು ವಸ್ತುಗಳನ್ನು ಇಡುತ್ತೇವೆ. ಆದರೆ ಕೆಲವೊಂದು ವಸ್ತುಗಳು ನಮ್ಮ ಮನೆಗೆ ಸಮಸ್ಯೆ ತರುತ್ತದೆ, ಇನ್ನೂ ಕೆಲವೊಂದು ಒಳ್ಳೆಯದನ್ನ ಮಾಡುತ್ತದೆ. ಹಾಗಾಗಿ ಯಾವ ವಸ್ತುಗಳನ್ನು ಇಡಬೇಕು ಎನ್ನುವ ಬಗ್ಗೆ ಎಚ್ಚರ ಇರಬೇಕು. ನಿಮ್ಮ ಮನೆಗೆ ಒಳ್ಳೆಯದಾಗಬೇಕು ಎಂದರೆ ಯಾವ ವಸ್ತುಗಳನ್ನು ಮನೆಯ ಬಾಗಿಲ ಎದುರಿಗೆ ಇಡಬೇಕು ಎಂಬುದು ಇಲ್ಲಿದೆ.
ಹೂವಿನ ಗಿಡಗಳು: ಮನೆಯ ಮುಂದೆ ಹೂವಿನ ಗಿಡಗಳನ್ನು ಇಡುವುದು ಮನೆಗೆ ಒಳ್ಳೆಯದು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ಪ್ರತಿದಿನ ಈ ಗಿಡಗಳಿಗೆ ನೀರನ್ನು ಸಹ ಹಾಕುವುದನ್ನ ಮರೆಯಬಾರದು. ಇದರಿಂದ ಮನೆಯ ಒಳಗೆ ನೆಗೆಟಿವ್ ಎನರ್ಜಿ ಸಹ ಬರುವುದಿಲ್ಲ.
2/ 8
ತೋರಣ: ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತೋರಣಕ್ಕೆ ಬಹಳ ಮಹತ್ವವಿದೆ. ಯಾವುದಾದರೂ ಕಾರ್ಯಕ್ರಮವಿದ್ದಾಗ ಮನೆಯ ಮುಂದೆ ತೋರಣ ಕಟ್ಟುವುದು ಸಾಮಾನ್ಯ, ಆದರೆ ಪ್ರತಿದಿನ ಮನೆಯ ಮುಂದೆ ತೋಣ ಇದ್ದರೆ ಬಹಳ ಉತ್ತಮ. ಮಾರುಕಟ್ಟೆಯಲ್ಲಿ ಸಹ ವಿವಿಧ ತೋರಣಗಳು ಲಭ್ಯವಿದೆ, ಅದನ್ನು ನೀವು ತಂದು ಕಟ್ಟಬಹುದು.
3/ 8
ಲಕ್ಮೀಯ ಪಾದ ಅಥವಾ ಮೂರ್ತಿ: ನೀವು ನಿಮ್ಮ ಸ್ವಂತ ಮನೆಯ ಬಾಗಿಲ ಬಳಿ ಲಕ್ಷ್ಮೀಯ ಮೂರ್ತಿಯನ್ನು ಅಥವಾ ಪಾದವನ್ನು ಇಡಬಹುದು. ಬಾಡಿಗೆ ಮನೆ ಆಗಿದ್ದರೆ ಬಾಗಿಲ ಮೇಲೆ ಫೋಟೋ ಅಂಟಿಸಬಹುದು.
4/ 8
ಸ್ವಸ್ತಿಕ್: ತೋರಣ ರೀತಿಯೇ ಸ್ವಸ್ತಿಕ್ ಸಹ ಬಹಳ ಮುಖ್ಯ. ಮನೆಯ ಬಾಗಿಲ ಬಳಿ ಸ್ವಸ್ತಿಕ್ ಬರೆಯುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಹಾಗೂ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.
5/ 8
ದೊಡ್ಡ ಬಾಗಿಲು: ಮನೆಯ ಪ್ರವೇಶ ದ್ವಾರ ಅಂದರೆ ಮೊದಲ ಬಾಗಿಲು ದೊಡ್ಡದಾಗಿರಬೇಕು. ಅಲ್ಲದೇ, ಮನೆಯ ಒಳಗೆ ಬೆಳಕು ಸಹ ಚೆನ್ನಾಗಿ ಬರುವಂತೆ ನೋಡಿಕೊಳ್ಳಬೇಕು. ಇದರಿಂದ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಆಗುತ್ತದೆ.
6/ 8
ಡ್ರೀಮ್ ಕ್ಯಾಚರ್: ಡ್ರೀಮ್ ಕ್ಯಾಚರ್ ಅನ್ನು ಮನೆಯ ಬಾಗಿಲ ಬಳಿ ಹಾಕಿದರೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಬರುವುದಿಲ್ಲ ಮತ್ತು ನಿಮ್ಮ ಕೆಲಸಗಳಿಗೆ ಸಹ ಯಾವುದೇ ತೊಂದರೆ ಆಗುವುದಿಲ್ಲ ಎನ್ನುವ ನಂಬಿಕೆ ಇದೆ.
7/ 8
ನೀರು: ಮನೆಯ ಬಾಗಿಲ ಬಾಳಿ ನೀರು ಇರುವುದು ಸಹ ಶೂಭ ಎಂದು ಹೇಳಲಾಗುತ್ತದೆ. ಒಂದು ಗ್ಲಾಸ್ ಅಥವಾ ಮಣ್ಣಿನ ಪಾತ್ರೆಯಲ್ಲಿ ನೀರನ್ನು ಹಾಕಿ, ಅದರಲ್ಲಿ ಹೂವುಗಳನ್ನು ಹಾಕಿ ಇಡಿ. ಈ ನೀರನ್ನು ಮತ್ತು ಹೂವನ್ನು 2 ದಿನಗಳಿಗೊಮ್ಮೆ ಬದಲಾಯಿಸಿ.
8/ 8
ಈ ಮೇಲಿನ ವಸ್ತುಗಳು ಮನೆಯ ಮುಂದೆ ಇದ್ದರೆ ಒಳ್ಳೆಯದಾಗುತ್ತದೆ, ಹಾಗೆಯೇ ಮನೆಯ ಬಾಗಿಲ ಬಳಿ ಕಸ ಅಥವಾ ಕಸ್ ಬುಟ್ಟಿ ಇದ್ದರೆ ಅದು ಸಾವಿರಾರು ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ ಎಂದು ಹೇಳಲಾಗುತ್ತದೆ.