Money: ಈ ಮನಿ ಪ್ಲಾಂಟ್​ಗಳು ನಿಮ್ಮ ಮನೆಯಲ್ಲಿದ್ರೆ ಅದೃಷ್ಟ ಹುಡುಕಿ ಬರುತ್ತೆ

ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಅನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ ಮತ್ತು ಅದರ ಸ್ಥಿತಿ ಮತ್ತು ದಿಕ್ಕು ಸರಿಯಾಗಿದ್ದರೆ ನಿಮ್ಮ ಮನೆ ಹಣದಿಂದ ತುಂಬುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಮನೆಗೆ ಅದೃಷ್ಟ ತರುವ 8 ವಿವಿಧ ರೀತಿಯ ಮನಿ ಪ್ಲಾಂಟ್‌ಗಳು ಯಾವುವು ಅಂತಾ ನೋಡೋಣ.

First published:

  • 19

    Money: ಈ ಮನಿ ಪ್ಲಾಂಟ್​ಗಳು ನಿಮ್ಮ ಮನೆಯಲ್ಲಿದ್ರೆ ಅದೃಷ್ಟ ಹುಡುಕಿ ಬರುತ್ತೆ

    ಮನಿಪ್ಲಾಂಟ್‌ ಪ್ರಸ್ತುತ ಹಲವಾರು ಜನಕ್ಕೆ ಪರಿಚಯವಿರುವಂತಹ ಸಸ್ಯ. ಅದೃಷ್ಟದ ಸಂಕೇತ, ಹಣದ ಹರಿವಿನ ಹೆಚ್ಚಳ, ನೆಮ್ಮದಿ, ಮನೆಯಲ್ಲಿ ಸಮೃದ್ಧಿ ಹೀಗೆ ಹಲವು ವಿಚಾರಗಳಿಗೆ ಹೆಸರುವಾಸಿಯಾಗಿರುವ ಈ ಗಿಡವನ್ನು ಮನೆಯಲ್ಲಿ ಇರಿಸಿದರೆ ಎಲ್ಲವೂ ಒಳ್ಳೆಯದ್ದೇ ಆಗುತ್ತದೆ ಎಂಬ ನಂಬಿಕೆ ಇದೆ. ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಅನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ ಮತ್ತು ಅದರ ಸ್ಥಿತಿ ಮತ್ತು ದಿಕ್ಕು ಸರಿಯಾಗಿದ್ದರೆ ನಿಮ್ಮ ಮನೆ ಹಣದಿಂದ ತುಂಬುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಮನೆಗೆ ಅದೃಷ್ಟ ತರುವ 8 ವಿವಿಧ ರೀತಿಯ ಮನಿ ಪ್ಲಾಂಟ್‌ಗಳು ಯಾವುವು ಅಂತಾ ನೋಡೋಣ.

    MORE
    GALLERIES

  • 29

    Money: ಈ ಮನಿ ಪ್ಲಾಂಟ್​ಗಳು ನಿಮ್ಮ ಮನೆಯಲ್ಲಿದ್ರೆ ಅದೃಷ್ಟ ಹುಡುಕಿ ಬರುತ್ತೆ

    * ಚೈನೀಸ್ ಮನಿ ಪ್ಲಾಂಟ್
    ಚೈನೀಸ್ ಮನಿ ಪ್ಲಾಂಟ್ ಅನ್ನು ನಾಣ್ಯ ಸಸ್ಯ ಎಂದು ಕರೆಯಲಾಗುತ್ತದೆ. ಏಕೆಂದರೆ ಅದರ ಎಲೆಗಳು ನಾಣ್ಯಗಳನ್ನು ಹೋಲುತ್ತವೆ. ಈ ಮನಿ ಪ್ಲಾಂಟ್ ಕಡಿಮೆ ನಿರ್ವಹಣೆಯನ್ನು ಹೊಂದಿದ್ದು ಪ್ರಕಾಶಮಾನವಾದ ಬೆಳಕನ್ನು ಹೊಂದಿರುವ ಸ್ಥಳದಲ್ಲಿ ಇಡಬೇಕು. ಮನೆಗೆ ಅದೃಷ್ಟ, ಸಮೃದ್ಧಿ ತರುವ ಪ್ರಮುಖ ಮನಿಪ್ಲಾಂಟ್‌ ಆಗಿದೆ.

    MORE
    GALLERIES

  • 39

    Money: ಈ ಮನಿ ಪ್ಲಾಂಟ್​ಗಳು ನಿಮ್ಮ ಮನೆಯಲ್ಲಿದ್ರೆ ಅದೃಷ್ಟ ಹುಡುಕಿ ಬರುತ್ತೆ

    * ಗೋಲ್ಡನ್ ಪೊಥೋಸ್
    ಗೋಲ್ಡನ್ ಪೊಥೋಸ್ ಮನಿ ಪ್ಲಾಂಟ್‌ ವಿಧಗಳಲ್ಲಿ ಅತ್ಯಂತ ಜನಪ್ರಿಯ ವಿಧವಾಗಿದೆ. ಇದನ್ನು ಡೆವಿಲ್ಸ್ ಐವಿ ಎಂದೂ ಕರೆಯುತ್ತಾರೆ. ಇದರ ಎಲೆ ಗೋಲ್ಡನ್/ಹಳದಿ ಬಣ್ಣಗಳಿಂದ ಕೂಡಿರುತ್ತದೆ. ಇದು ದೇಶದ ಹೆಚ್ಚಿನ ಭಾಗಗಳಲ್ಲಿ ನೀವು ನೋಡಬಹುದಾದ ಪ್ರಚಲಿತ ವಿಧವಾಗಿದ್ದು, ಇದನ್ನು ಅತ್ಯಂತ ಮಂಗಳಕರ ಸಸ್ಯವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಸಮೃದ್ಧಿ, ಅದೃಷ್ಟ ಮತ್ತು ಆರ್ಥಿಕ ಸಮೃದ್ಧಿಯನ್ನು ಸಂಕೇತಿಸುತ್ತದೆ. ಗೋಲ್ಡನ್ ಪೊಥೋಸ್ ಸಸ್ಯವನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿ ಬೆಳೆಸಬಹುದು. ಇದನ್ನು ಬೆಳೆಸುವುದು ತುಂಬಾ ಸುಲಭವಾಗಿದ್ದು ಸಸ್ಯವನ್ನು ಬೆಳೆಸಲು ಮಣ್ಣು ಮತ್ತು ನೀರು ಸಾಕು.

    MORE
    GALLERIES

  • 49

    Money: ಈ ಮನಿ ಪ್ಲಾಂಟ್​ಗಳು ನಿಮ್ಮ ಮನೆಯಲ್ಲಿದ್ರೆ ಅದೃಷ್ಟ ಹುಡುಕಿ ಬರುತ್ತೆ

    * ಸ್ಪ್ಲಿಟ್ ಲೀಫ್ ಮನಿ ಪ್ಲಾಂಟ್
    ಸ್ಪ್ಲಿಟ್ ಲೀಫ್ ಮನಿ ಪ್ಲಾಂಟ್ ಅಥವಾ ಮಾನ್‌ಸ್ಟೆರಾ ಡೆಲಿಸಿಯೋಸಾ ಎಂಬುದು ದೊಡ್ಡ-ಎಲೆ ವಿಧದ ಮನಿ ಪ್ಲಾಂಟ್‌ ಆಗಿದೆ. ಇದನ್ನು ಕೂಡ ಅದೃಷ್ಟದ ಸಂಕೇತ ಎಂದು ಭಾವಿಸಲಾಗಿದೆ. ಈ ಸಸ್ಯವನ್ನು ಬೆಳೆಸಲು ಸ್ವಲ್ಪ ಹೆಚ್ಚಿನ ಮುಂಜಾಗ್ರತೆ ವಹಿಸಬೇಕಾಗುತ್ತದೆ. ಸಸ್ಯ ಸಸಿಯಾಗಿರುವಾಗ ಇದಕ್ಕೆ ಸಾಕಷ್ಟು ಪೋಷಕಾಂಶಗಳ ಅಗತ್ಯತೆ ಇದೆ. ಈ ಸಸ್ಯವು ಅತ್ಯಂತ ವೇಗವಾಗಿ ಬೆಳೆಯುತ್ತದೆ ಮತ್ತು ಇತರ ಹಣ ಸಸ್ಯಗಳಂತೆ, ಈ ಸಸ್ಯವು ಕಡಿಮೆ ಸೂರ್ಯನ ಬೆಳಕಿನಲ್ಲಿ ಬದುಕಬಲ್ಲದು.

    MORE
    GALLERIES

  • 59

    Money: ಈ ಮನಿ ಪ್ಲಾಂಟ್​ಗಳು ನಿಮ್ಮ ಮನೆಯಲ್ಲಿದ್ರೆ ಅದೃಷ್ಟ ಹುಡುಕಿ ಬರುತ್ತೆ

    * ಜೇಡ್ ಸಸ್ಯ
    ಗಾಢ ಹಸಿರು ಬಣ್ಣದಲ್ಲಿರುವ ಈ ಸಸ್ಯ ದುಂಡಗಿರುವ ಎಲೆಗಳನ್ನೊಳಗೊಂಡ ಸಮೃದ್ಧ ಸಸ್ಯವಾಗಿದೆ. ಡಾಲರ್ ಪ್ಲಾಂಟ್ ಎಂಬ ಹೆಸರೂ ಈ ಸಸ್ಯಕ್ಕಿದೆ. ಮನೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ ಎಂಬ ನಂಬಿಕೆ ಇದೆ. ಫೆಂಗ್ ಶೂಯಿ ಕೂಡ ಜೇಡ್ ಸಸ್ಯವು ನಮ್ಮ ಜೀವನದಲ್ಲಿ ಅದೃಷ್ಟವನ್ನು ತರುತ್ತದೆ ಮತ್ತು ದೀರ್ಘಾಯುಷ್ಯವನ್ನು ಉತ್ತೇಜಿಸುತ್ತದೆ ಎಂದು ಹೇಳುತ್ತದೆ.

    MORE
    GALLERIES

  • 69

    Money: ಈ ಮನಿ ಪ್ಲಾಂಟ್​ಗಳು ನಿಮ್ಮ ಮನೆಯಲ್ಲಿದ್ರೆ ಅದೃಷ್ಟ ಹುಡುಕಿ ಬರುತ್ತೆ

    * ಮಾರ್ಬಲ್ ಕ್ವೀನ್ ಮನಿ ಪ್ಲಾಂಟ್
    ಮಾರ್ಬಲ್ ಕ್ವೀನ್ ಮನಿ ಪ್ಲಾಂಟ್ ಬಿಳಿ ಮತ್ತು ಹಸಿರು ಎಲೆಗಳನ್ನು ಹೊಂದಿರುವ ಅದ್ಭುತವಾದ ಮನಿ ಪ್ಲಾಂಟ್‌ ಆಗಿದೆ. ಇದಕ್ಕೆ ದಿನದಲ್ಲಿ ಸುಮಾರು 4 ರಿಂದ 6 ಗಂಟೆಗಳ ಕಾಲ ಸೂರ್ಯನ ಬೆಳಕಿನ ಅಗತ್ಯವಿದೆ. ಈ ಸಸ್ಯವನ್ನೂ ಸಹ ಅದೃಷ್ಟದ ಅಂಕೇತವಾಗಿ ಪರಿಗಣಿಸಲಾಗಿದೆ.

    MORE
    GALLERIES

  • 79

    Money: ಈ ಮನಿ ಪ್ಲಾಂಟ್​ಗಳು ನಿಮ್ಮ ಮನೆಯಲ್ಲಿದ್ರೆ ಅದೃಷ್ಟ ಹುಡುಕಿ ಬರುತ್ತೆ

    * ಸಿಲ್ವರ್ ಮನಿ ಪ್ಲಾಂಟ್
    ಸಿಲ್ವರ್ ಮನಿ ಪ್ಲಾಂಟ್ ಅಥವಾ ಸಿಂಡಾಪ್ಸಸ್ ಪಿಕ್ಟಸ್ ಅನ್ನು ಸ್ಯಾಟಿನ್ ಪೊಥೋಸ್ ಎಂದೂ ಕರೆಯುತ್ತಾರೆ. ಈ ಮನಿ ಪ್ಲಾಂಟ್‌ ಹಸಿರು ಎಲೆಗಳ ಮೇಲೆ ಮಿನುಗುವ ಬೆಳ್ಳಿಯ ಬಣ್ಣದ ಮಾದರಿಗಳನ್ನು ಹೊಂದಿದ್ದು, ಎಲೆಗಳಿಂದಲೇ ಹೆಚ್ಚು ಆಕರ್ಷಿತವಾಗಿದೆ. ಇದಕ್ಕೆ ನೇರವಾಗಿ ಸೂರ್ಯನ ಬೆಳಕು ಬೀಳಬಾರದು, ಹೀಗಾಗಿ ಇದನ್ನು ಒಳಾಂಗಣದಲ್ಲಿ ಬೆಳೆಯುವುದು ಉತ್ತಮ. ಇದು ಮನೆಗೆ ಅತ್ಯಂತ ಆಕರ್ಷಣೀಯವಾಗಿ ಕಾಣುವುದರ ಜೊತೆಗೆ ಮನೆಗೆ ಸಮೃದ್ಧಿ ಸಹ ತರುತ್ತದೆ.

    MORE
    GALLERIES

  • 89

    Money: ಈ ಮನಿ ಪ್ಲಾಂಟ್​ಗಳು ನಿಮ್ಮ ಮನೆಯಲ್ಲಿದ್ರೆ ಅದೃಷ್ಟ ಹುಡುಕಿ ಬರುತ್ತೆ

    * ಲಕ್ಕಿ ಬಿದಿರು
    ಫೆಂಗ್ ಶೂಯಿ ಮತ್ತು ವಾಸ್ತು ಶಾಸ್ತ್ರದಲ್ಲಿ ಇದು ಅತ್ಯಂತ ಆರಾಧನೆಯ ಸಸ್ಯಗಳಲ್ಲಿ ಒಂದಾಗಿದೆ. ಇದು ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ.

    MORE
    GALLERIES

  • 99

    Money: ಈ ಮನಿ ಪ್ಲಾಂಟ್​ಗಳು ನಿಮ್ಮ ಮನೆಯಲ್ಲಿದ್ರೆ ಅದೃಷ್ಟ ಹುಡುಕಿ ಬರುತ್ತೆ

    * ಸ್ವಿಸ್ ಚೀಸ್ ಮನಿ ಪ್ಲಾಂಟ್
    ಸ್ವಿಸ್ ಚೀಸ್ ಮನಿ ಪ್ಲಾಂಟ್ ಅದರ ಕಾಂತೀಯ ದೊಡ್ಡ ವೈವಿಧ್ಯಮಯ ಎಲೆಗಳಿಗೆ ಹೆಸರುವಾಸಿಯಾಗಿದೆ, ಅದು ಚೀಸ್ ತರಹದ ರಂಧ್ರ ಮಾದರಿಯನ್ನು ಹೊಂದಿರುತ್ತದೆ. ಇದನ್ನು ನೇರವಾದ ಸೂರ್ಯನ ಬೆಳಕು ಅಥವಾ ಕಡಿಮೆ ಬೆಳಕಲ್ಲೂ ಬೆಳೆಯಬಹುದಾಗಿದ್ದರಿಂದ ಈ ಸಸ್ಯ ಹೊರಗೆ ಮತ್ತು ಒಳಗೆ ಎರಡೂ ಕಡೆ ಇಡಬಹುದು.

    MORE
    GALLERIES