Vastu Tips: ಮನೆಯ ಬಾಗಿಲಿನ ಮುಂದೆ ಈ 5 ವಸ್ತುಗಳನ್ನು ಇಟ್ಟರೆ ಅದೃಷ್ಟ ಖುಲಾಯಿಸುತ್ತೆ
ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಶುಭ ಕೆಲಸಗಳಿಗೂ ವಾಸ್ತು ಸಲಹೆಗಳನ್ನು ಪಡೆಯುತ್ತೇವೆ. ಮನೆ ಕಟ್ಟುವಾಗ ಮುಖ್ಯದ್ವಾರವನ್ನು ವಾಸ್ತು ಪ್ರಕಾರವೇ ನಿರ್ದಿಷ್ಟ ದಿಕ್ಕಿಗೆ ಇಡುತ್ತೇವೆ. ಇಷ್ಟೇ ಅಲ್ಲ ಮನೆ ಎದುರು ಕೆಲವೊಂದು ವಸ್ತುಗಳನ್ನು ಇಡುವುದು ಕೂಡ ವಾಸ್ತು ಪ್ರಕಾರ ಲಾಭಕರ. ಆ ಬಗ್ಗೆ ತಿಳಿಯೋಣ ಬನ್ನಿ.
ಮನೆಯ ಮುಖ್ಯ ದ್ವಾರವನ್ನು ಸಮೃದ್ಧಿಯ ಬಾಗಿಲು ಎನ್ನಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ವಾಸಿಸುವ ಸದಸ್ಯರ ಜೀವನವನ್ನು ಬಾಗಿಲಿನ ದಿಕ್ಕಿನ ಮೂಲಕ ನಿರ್ಧರಿಸಬಹುದಂತೆ. ಹೀಗಾಗಿ ಮುಖ್ಯ ದ್ವಾರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಕೊಳಕಾಗಿದ್ದರೆ ದೇವತೆಗಳು ಬರುವುದಿಲ್ಲವಂತೆ.
2/ 8
ಮುಖ್ಯ ಬಾಗಿಲು ಸರಿ ಇಲ್ಲದಿದ್ದರೆ ಮನೆಯಲ್ಲಿ ನೆಮ್ಮದಿ ನೆಲಸುವುದಿಲ್ಲ. ಬಾಗಿಲಿನ ಬಳಿ ಈ ವಸ್ತುಗಳನ್ನು ಇಟ್ಟರೆ ಅದೃಷ್ಟ ಖುಲಾಯಿಸುತ್ತಂತೆ. ಯಾವುದು ಆ ವಸ್ತುಗಳು ಎಂದು ತಿಳಿಯೋಣ ಬನ್ನಿ.
3/ 8
1) ಸ್ವಸ್ತಿಕ್ ಚಿಹ್ನೆ : ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಸ್ವಸ್ತಿಕ ಚಿಹ್ನೆಗಳನ್ನು ಇಡುವುದು ಶುಭಕರ. ಇದು ಕೆಂಪು ಬಣ್ಣದಲ್ಲಿ ಇರಬೇಕು. ಇದರಿಂದ ಆರೋಗ್ಯ ಭಾಗ್ಯ ಸಿಗುತ್ತದೆ.
4/ 8
2) ಕಳಶ : ಯಾವುದೇ ಪೂಜೆಗೆ ಪುರೋಹಿತರು ಮೊದಲು ಕಳಶವನ್ನು ಸ್ಥಾಪಿಸಿ ಪೂಜೆಯನ್ನು ಪ್ರಾರಂಭಿಸುವುದನ್ನು ನೀವು ಹೆಚ್ಚಾಗಿ ನೋಡಿದ್ದೀರಿ. ಮನೆಯ ಪ್ರವೇಶದ್ವಾರದಲ್ಲಿ ಕಲಶವನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಇದನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ
5/ 8
3) ಹೂವು: ಮನೆಯ ಮುಖ್ಯ ದ್ವಾರವನ್ನು ಹೂವಿನ ಹಾರದಿಂದ ಅಲಂಕರಿಸುವುದು ಸಕಾರಾತ್ಮಕ ಶಕ್ತಿಯ ಸಂವಹನದ ಸಂಕೇತವಾಗಿದೆ. ನಿಮ್ಮ ಮುಖ್ಯ ದ್ವಾರವನ್ನು ಹಣ್ಣು ಮತ್ತು ಎಲೆಗಳಿಂದ ಮಾಡಿದ ಮಾಲೆಯನ್ನು ಅಲಂಕರಿಸಿದರೆ ಸಮೃದ್ಧಿಯನ್ನು ತರುತ್ತದೆ. ಒಣಗಿದ ಹೂವುಗಳೊಂದಿಗೆ ಹಾರವನ್ನು ತೆಗೆದುಹಾಕಬೇಕು ಎಂದು ನೆನಪಿಡಿ.
6/ 8
4) ತುಳಸಿ : ಮನೆ ಎದುರು ತುಳಸಿಯನ್ನು ಇಡುವುದರಿಂದ ವಾಸುದೇವನು ಪ್ರಸನ್ನನಾಗುತ್ತಾನೆ. ತುಳಸಿ ಗಿಡವೂ ಸಂಪತ್ತನ್ನು ಹೆಚ್ಚಿಸುತ್ತದೆ.
7/ 8
5) ಗಣೇಶನ ಪ್ರತಿಮೆ: ಗಣೇಶನು ಎಲ್ಲಾ ಸಂಕಷ್ಟಗಳನ್ನು ನಿವಾರಿಸುವ ದೇವರು. ಆದರಿಂದ ಮನೆಯ ಬಾಗಿಲಿನಲ್ಲಿ ಗಣೇಶನ ಫೋಟೋ ಇಲ್ಲವೇ ವಿಗ್ರಹ ಇಟ್ಟರೆ ಯಾವುದೇ ಕಷ್ಟಗಳು ಬರುವುದಿಲ್ಲ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)