Vastu: ಮನೆಯಲ್ಲಿ ಪಂಚಮುಖಿ ಹನುಮಂತನ ಫೋಟೋ ಹಾಕುವ ಕಾರಣ ಇದು
ಜೀವನದ ಸುಖ ಸಮೃದ್ಧಿಗೆ ವಾಸ್ತು ಶಾಸ್ತ್ರ (Vastu Shastra) ಮಹತ್ವದ್ದಾಗಿದೆ. ಮನೆಯಲ್ಲಿನ ಕೆಲವು ವಾಸ್ತು ದೋಷಗಳಿಂದಾಗಿ ಅನೇಕ ಸಮಸ್ಯೆ ಕಾಡುವುದು ಸುಳ್ಳಲ್ಲ. ಇದೇ ಕಾರಣಕ್ಕೆ ಇಂತಹ ದೋಷ ಕಂಡು ಬಂದರೆ ಸರಳ ಪರಿಹಾರವನ್ನು ಕೂಡ ನೀಡಲಾಗಿದೆ
ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿನ ಮನೆಯ ಮುಖ್ಯದ್ವಾರ ಇರಬಾರದು. ಒಂದು ವೇಳೆ ಮನೆ ಬಾಗಿಲು ದಕ್ಷಿಣಾಭಿಮುಖವಾಗಿದ್ದರೆ, ಮನೆಯ ಮುಂಬಾಗಿಲಿಗೆ ಪಂಚಮುಖಿ ಹನುಮಂತನ ಫೋಟೋವನ್ನು ಹಾಕಬೇಕು.
2/ 8
ಮನೆಯಲ್ಲಿ ಒಂದೇ ಸರಳ ರೇಖೆಯಲ್ಲಿ ಬಾಗಿಲುಗಳು ಇರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಈ ರೀತಿ ಇದ್ದರೆ, ಈ ವಾಸ್ತು ದೋಷವನ್ನು ತಪ್ಪಿಸಲು, ಮನೆಯ ಬಾಗಿಲಿಗೆ ಗಾಳಿ ಚೈಮ್ಗಳನ್ನು ಅಳವಡಿಸಿ.
3/ 8
ಅಡುಗೆ ಮನೆಗೆ ಪ್ರಶಾಸ್ತ್ಯದ ದಿಕ್ಕು ಎಂದು ಅಗ್ನಿ ಮೂಲೆಯನ್ನು ಪರಿಗಣಿಸಲಾಗಿದೆ. ಒಂದು ವೇಳೆ ಈ ದಿಕ್ಕಿನಲ್ಲಿ ಅಡುಗೆ ಮನೆ ಇಲ್ಲದಿದ್ದರೆ, ಈಶಾನ್ಯ ದಿಕ್ಕಿನಲ್ಲಿ ಗಣೇಶನ ವಿಗ್ರಹವನ್ನು ಇರಿಸಬೇಕು
4/ 8
ನಿಮ್ಮ ಮನೆಯಲ್ಲಿ ವಾಸ್ತು ದೋಷವಿದೆ ಎಂದರೆ, ದೋಷ ಇರುವ ಮೂಲೆಯಲ್ಲಿ ಎರಡು ಕರ್ಪೂರವನ್ನು ಇಡಿ, ಇದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ ಜೊತೆಗೆ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂವಹನ ಆಗುತ್ತದೆ.
5/ 8
ಮನೆಯ ಈಶಾನ್ಯ ಮೂಲೆಯನ್ನು ಅತ್ಯಂತ ಮಂಗಳಕರ ಕೋನವೆಂದು ಪರಿಗಣಿಸಲಾಗುತ್ತದೆ. ಕಾರಣಾಂತರಗಳಿಂದ ಈಶಾನ್ಯ ಮೂಲೆಯಲ್ಲಿ ವಾಸ್ತು ದೋಷವಿದ್ದರೆ ಆ ಮೂಲೆಯಲ್ಲಿ ತುಳಸಿ ಗಿಡವನ್ನು ನೆಡಬೇಕು.
6/ 8
ಈಶಾನ್ಯ ದಿಕ್ಕನ್ನು ಧನಾತ್ಮಕ ಶಕ್ತಿಯನ್ನು ತರುತ್ತದೆ. ಈಶಾನ್ಯದಲ್ಲಿ ಡಸ್ಟ್ಬಿನ್ಗಳನ್ನು ಅಥವಾ ಯಾವುದೇ ಭಾರವಾದ ವಸ್ತುಗಳನ್ನು ಇಡಬಾರದು ಎಂಬುದನ್ನು ನೆನಪಿನಲ್ಲಿಡಿ.
7/ 8
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವುದೇ ನಲ್ಲಿ ತೊಟ್ಟಿಕ್ಕಿದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯ ಯಾವುದೇ ನಲ್ಲಿಗಳು ಸೋರಿಕೆಯಾಗದಂತೆ ನೋಡಿಕೊಳ್ಳಿ. ಇದರಿಂದ ಮನೆಯಲ್ಲಿ ನಿರಂತರ ಹಣದ ನಷ್ಟವಾಗುತ್ತದೆ.
8/ 8
ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ಕನ್ನಡಿ ಇರಬಾರದು. ಇದರಿಂದಾಗಿ ಪತಿ-ಪತ್ನಿಯ ನಡುವೆ ಜಗಳವಾಗಿದೆ