Kedarnath ಯಾತ್ರೆ ಆರಂಭ, ಬೆಳ್ಳಂ ಬೆಳಗ್ಗೆಯೇ 8 ಸಾವಿರ ಭಕ್ತರಿಗೆ ದರ್ಶನ

Kedarnath Temple: ಹಿಮಾಲಯ ಪರ್ವತದಲ್ಲಿರುವ ಪುರಾಣ ಪ್ರಸಿದ್ಧ ಕೇದಾರನಾಥ ದೇವಾಲಯದ ವಾರ್ಷಿಕ ಯಾತ್ರೆ ಇಂದಿನಿಂದ ಆರಂಭವಾಗಿದ್ದು, ಈ ಯಾತ್ರೆಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ.

First published:

  • 18

    Kedarnath ಯಾತ್ರೆ ಆರಂಭ, ಬೆಳ್ಳಂ ಬೆಳಗ್ಗೆಯೇ 8 ಸಾವಿರ ಭಕ್ತರಿಗೆ ದರ್ಶನ

    ಭಜನೆಗಳು, ವಾದ್ಯಗಳ ಗಾಯನದೊಂದಿಗೆ ಕೇದಾರನಾಥ ಧಾಮದ ಬಾಗಿಲುಗಳನ್ನು ಮಂಗಳವಾರ ಬೆಳಗ್ಗೆ ಯಾತ್ರಾರ್ಥಿಗಳಿಗಾಗಿ ತೆರೆಯಲಾಗಿದ್ದು, ವೇದ ಘೋಷ, ಡೋಲುಗಳ ಬಡಿತಗಳು ಮತ್ತು ಸಂಗೀತದ ಮಧ್ಯೆ ಜೈ ಭೋಲೆನಾಥ್ ಮತ್ತು ಹರಹರ್ ಮಹಾದೇವ್ ಘೋಷಣೆಗಳು ಸುತ್ತಲೂ ಪ್ರತಿಧ್ವನಿಸಿದ್ದವು.

    MORE
    GALLERIES

  • 28

    Kedarnath ಯಾತ್ರೆ ಆರಂಭ, ಬೆಳ್ಳಂ ಬೆಳಗ್ಗೆಯೇ 8 ಸಾವಿರ ಭಕ್ತರಿಗೆ ದರ್ಶನ

    ಕೇದಾರನಾಥ ಧಾಮದ ಬಾಗಿಲು ತೆರೆಯುವ ಮೊದಲು ದರ್ಶನ ಪಡೆಯಲು ಬೆಳಿಗ್ಗೆಯಿಂದಲೇ ಭಕ್ತರ ದಂಡು ಸೇರಿದ್ದು, ಕೇದಾರನಾಥ ದೇಗುಲದ ಪ್ರಧಾನ ಅರ್ಚಕ ಜಗದ್ಗುರು ರಾವಲ್ ಭೀಮ್ ಶಂಕರ್ ಲಿಂಗ್ ಶಿವಾಚಾರ್ಯ ಬಾಬಾ ಕೇದಾರನಾಥ ಧಾಮದ ಬಾಗಿಲು ತೆರೆದಿದ್ದಾರೆ.

    MORE
    GALLERIES

  • 38

    Kedarnath ಯಾತ್ರೆ ಆರಂಭ, ಬೆಳ್ಳಂ ಬೆಳಗ್ಗೆಯೇ 8 ಸಾವಿರ ಭಕ್ತರಿಗೆ ದರ್ಶನ

    ಮಂಗಳವಾರ ಬೆಳಗ್ಗೆ 6.20ಕ್ಕೆ ಬಾಬಾ ಕೇದಾರನಾಥ ಧಾಮದ ಬಾಗಿಲು ತೆರೆಯಲಾಗಿದ್ದು, ವಿಪರೀತ ಚಳಿಯ ನಡುವೆಯೂ ಸಾವಿರಾರು ಭಕ್ತರು ಇಲ್ಲಿ ದೇವರ ದರ್ಶನಕ್ಕೆ ಬಂದು ಸೇರಿದ್ದಾರೆ ಬಾಬಾ ಕೇದಾರರ ಪಂಚಮುಖಿ ಚಾಲ್ ವಿಗ್ರಹ ಡೋಲಿ ಕೂಡ ಸೋಮವರ್ಧಮ್ ತಲುಪಿತ್ತು.

    MORE
    GALLERIES

  • 48

    Kedarnath ಯಾತ್ರೆ ಆರಂಭ, ಬೆಳ್ಳಂ ಬೆಳಗ್ಗೆಯೇ 8 ಸಾವಿರ ಭಕ್ತರಿಗೆ ದರ್ಶನ

    ಆದರೆ, ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಭಕ್ತರಿಗೆ ಮುಂದೆ ಹೋಗಲು ಅವಖಾಶ ನೀಡುತ್ತಿಲ್ಲ. ಏಪ್ರಿಲ್ 29 ರವರೆಗೆ ಹಿಮಪಾತ ಮತ್ತು ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದರಿಂದ, ರಾಜ್ಯ ಸರ್ಕಾರ ಭಾನುವಾರ ಕೇದಾರನಾಥ ಯಾತ್ರಿಕರ ನೋಂದಣಿಯನ್ನು 30 ರವರೆಗೆ ಮುಚ್ಚಿದೆ

    MORE
    GALLERIES

  • 58

    Kedarnath ಯಾತ್ರೆ ಆರಂಭ, ಬೆಳ್ಳಂ ಬೆಳಗ್ಗೆಯೇ 8 ಸಾವಿರ ಭಕ್ತರಿಗೆ ದರ್ಶನ

    ಅಲ್ಲದೇ, ಋಷಿಕೇಶ, ಗೌರಿಕುಂಡ್, ಗುಪ್ತಕಾಶಿ ಮತ್ತು ಸೋನ್‌ಪ್ರಯಾಗ ಸೇರಿದಂತೆ ಅನೇಕ ಸ್ಥಳಗಳಲ್ಲಿ, ಪ್ರಯಾಣಿಕರನ್ನು ಸದ್ಯಕ್ಕೆ ಅಲ್ಲಿಯೇ ಇರುವಂತೆ ಮನವಿ ಮಾಡಲಾಗಿದ್ದು, ಆದರೆ, ಮಂಗಳವಾರ ಬೆಳಗ್ಗೆ ದೇವಸ್ಥಾನದ ಬಾಗಿಲು ತೆರೆದಾಗ ಸುಮಾರು ಎಂಟು ಸಾವಿರ ಭಕ್ತರು ಸೇರಿದ್ದರು.

    MORE
    GALLERIES

  • 68

    Kedarnath ಯಾತ್ರೆ ಆರಂಭ, ಬೆಳ್ಳಂ ಬೆಳಗ್ಗೆಯೇ 8 ಸಾವಿರ ಭಕ್ತರಿಗೆ ದರ್ಶನ

    ಇನ್ನು ಆರು ತಿಂಗಳ ಕಾಲ ಭಕ್ತರು ದೇವಾಲಯಗಳಿಗೆ ಭೇಟಿ ನೀಡಬಹುದಾಗಿದ್ದು, ಕೇದಾರನಾಥದಲ್ಲಿ ಹಿಮ ಬೀಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಶ್ರೀನಗರದ ಪೊಲೀಸ್ ಇಲಾಖೆಯು ಬುಕ್ಕಿಂಗ್ ಮಾಡಿರದ ಭಕ್ತರಿಗೆ ಸದ್ಯಕ್ಕೆ ಮುಂದಕ್ಕೆ ಹೋಗಲು ಅವಕಾಶ ನೀಡುತ್ತಿಲ್ಲ.

    MORE
    GALLERIES

  • 78

    Kedarnath ಯಾತ್ರೆ ಆರಂಭ, ಬೆಳ್ಳಂ ಬೆಳಗ್ಗೆಯೇ 8 ಸಾವಿರ ಭಕ್ತರಿಗೆ ದರ್ಶನ

    ಇನ್ನು ಪ್ರಯಾಣಿಕರಿಗೆ, ಹವಾಮಾನ ಸ್ಪಷ್ಟವಾಗುವವರೆಗೆ ಇಲ್ಲಿಯೇ ಇರಲು ಸರ್ಕಾರ ಮನವಿ ಮಾಡಿದ್ದು, ಕೇದಾರಘಾಟಿಯಲ್ಲಿ ಈಗಾಗಲೇ ಬುಕ್ ಮಾಡಿರುವ ಪ್ರಯಾಣಿಕರಿಗೆ ಮುಂದೆ ಹೋಗಲು ಅವಕಾಶ ನೀಡಲಾಗುತ್ತಿದೆ.

    MORE
    GALLERIES

  • 88

    Kedarnath ಯಾತ್ರೆ ಆರಂಭ, ಬೆಳ್ಳಂ ಬೆಳಗ್ಗೆಯೇ 8 ಸಾವಿರ ಭಕ್ತರಿಗೆ ದರ್ಶನ

    ಅಲ್ಲದೇ, ಯಾತ್ರೆಯನ್ನು ಸುಗಮವಾಗಿ ನಡೆಸಲು ಉದ್ದೇಶಿಸಿರುವುದರಿಂದ ಈ ಬಾರಿ ದಿನಕ್ಕೆ ಕೇವಲ 13000 ಯಾತ್ರಿಕರಿಗೆ ಅವಕಾಶ ಮತ್ತು ಟೋಕನ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    MORE
    GALLERIES