ಹರಿದ್ವಾರಕ್ಕಿಂತಲೂ ವಿಭಿನ್ನ ವಾರಣಾಸಿಯ ಗಂಗಾ ಆರತಿ; ಪೌರಣಿಕ ಹಿನ್ನಲೆ ಇಲ್ಲಿದೆ
ಕಾಶಿಯಲ್ಲಿ (Kashi) ಸೂರ್ಯಾಸ್ತದ ಬಳಿಕ ನಡೆಯುವ ಗಂಗಾ ಆರತಿಯನ್ನು (Ganga Aarati) ನೋಡಬೇಕು ಎಂಬುದು ಅನೇಕ ಹಿಂದೂಗಳ (Hindu) ಕನಸು ಆಗಿರುತ್ತದೆ. ಗಂಗಾ ನದಿ ತೀರದಲ್ಲಿ ಸಂಜೆ ಡಮರುಗ, ಶಂಖನಾದ ಹಾಗೂ ಗಂಗೆಯ ಕೀರ್ತನೆಯಲ್ಲಿ ಆರತಿ ನಡೆಯುವಾಗ ಸುತ್ತಲ ದೃಶ್ಯ ಭಕ್ತಿಪರವಶವಾಗುವಂತೆ ನಡೆಯುತ್ತದೆ. ಇಂತಹ ಗಂಗಾ ಆರತಿ ಕಣ್ತುಂಬಿಕೊಳ್ಳಲು ದೇಶ- ವಿದೇಶದಿಂದ ಭಕ್ತರು ಆಗಮಿಸುತ್ತಾರೆ. ಈ ಗಂಗಾ ಆರತಿ ಪ್ರತೀತಿ ಹೇಗೆ ಶುರುವಾಯಿತು. ಇದರ ಹಿಂದಿನ ಪೌರಣಿಕ ಕಥೆ ಏನು ಎಂಬ ಮಾಹಿತಿ ಇಲ್ಲಿದೆ. (Photos: ANI, Twitter)
ಪವಿತ್ರ ಗಂಗಾನದಿಯ ದರ್ಶನ ಪಡೆಯಲು ದೂರದೂರುಗಳಿಂದ ಜನರು ಬರುತ್ತಾರೆ. ಇದರೊಂದಿಗೆ ಗಂಗಾ ಆರತಿಯಲ್ಲಿಯೂ ಪಾಲ್ಗೊಳ್ಳುತ್ತಾರೆ. ಹರಿದ್ವಾರದ ಮಾದರಿಯಲ್ಲಿ ಋಷಿಕೇಶ, ವಾರಣಾಸಿ, ಪ್ರಯಾಗ ಮತ್ತು ಚಿತ್ರಕೂಟದಲ್ಲಿ ಗಂಗಾ ಆರತಿಯನ್ನು ಆಯೋಜಿಸಲಾಗಿದೆ.
2/ 7
ವಾರಣಾಸಿಯಲ್ಲಿ ಕಾಶಿ ವಿಶ್ವನಾಥನ ತಟದಲ್ಲಿರುವ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿಯನ್ನು ಮಾಡಲಾಗುತ್ತದೆ. 1991ರಿಂದ ವಾರಣಾಸಿಯಲ್ಲಿ ಗಂಗಾ ಆರತಿಯನ್ನು ಆಚರಿಸಿಕೊಂಡು ಬರಲಾಗುತ್ತದೆ.
3/ 7
ಸೂರ್ಯಾಸ್ತದ ನಂತರ ಈ ಆರತಿ ನಡೆಯುತ್ತದೆ. ಗಂಗಾ ಆರತಿಯನ್ನು ಶಂಖನಾದದೊಂದಿಗೆ ಪ್ರಾರಂಭಿಸಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ.
4/ 7
ಪುರೋಹಿತರು ತಮ್ಮ ಕೈಯಲ್ಲಿ ದೊಡ್ಡ ದೀಪಗಳೊಂದಿಗೆ ಗಂಗಾ ಮಾತೆಯ ಆರತಿಯನ್ನು ಮಾಡುತ್ತಾರೆ. ಮಾತೆ ಗಂಗೆಯ ಹರ್ಷೋದ್ಗಾರಗಳು, ಡಮರುಗ ಪ್ರತಿಧ್ವನಿ ಮತ್ತು ಆರತಿಯ ಸುಮಧುರ ಧ್ವನಿಯು ನೆರೆದವರನ್ನು ಮಂತರಮುಗ್ಧವಾಗುವಂತೆ ಮಾಡುತ್ತದೆ
5/ 7
ಕಾಶಿಯಲ್ಲಿ ಕಾರ್ತಿಕ ಪೂರ್ಣಿಮಾದ ಅಂತ್ಯದಲ್ಲಿ ನಡೆಯುವ ಮಹಾನಾತಿ ಅಂದರೆ ಮಹಾನ್ ಆರತಿ ಬಲು ವಿಶೇಷ. ಇದಕ್ಕಾಗಿ ಜನರು ಸಾಲುಗಟಟಿ ನೋಡಲು ಮುಗಿ ಬೀಳುತ್ತಾರೆ.
6/ 7
ಇನ್ನು ನಾಲ್ಕು ಸ್ಥಳ ಅಂದರೆ ಹರಿದ್ವಾರ, ರಿಷಿಕೇಶ ವಾರಣಾಸಿ, ಪ್ರಯಾಗ ಮತ್ತು ಚಿತ್ರಕೂಟದಲ್ಲಿ ನಡೆಯುವ ಆರತಿಗಳು ಭಿನ್ನವಾಗಿರುತ್ತದೆ. ಪ್ರತಿ ಸ್ಥಳದಲ್ಲೂ ಭಿನ್ನ ರೀತಿಯ ಆರತಿ ನಡೆಯುತ್ತದೆ.
7/ 7
ಹಿಂದೂ ಧರ್ಮದಲ್ಲಿ ಗಂಗಾ ನದಿಗೆ ಪವಿತ್ರ ಸ್ಥಾನವಿದೆ. ಗಂಗಾ ನದಿಯಲ್ಲಿ ಮುಳುಗೆದ್ದರೆ ಪಾಪ ಕರ್ಮಗಳು ದೂರ ಆಗುತ್ತವೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಈ ಪವಿತ್ರ ಸ್ಥಳಗಳಲ್ಲಿ ಗಂಗೆಯನ್ನು ನಮಿಸಿ ಈ ವಿಶೇಷ ಆರತಿಯನ್ನು ನಡೆಸಲಾಗುತ್ತದೆ.
First published:
17