Kan Ganesha Mandir: ಈ ಗಣೇಶನ ಕಿವಿಯಲ್ಲಿ ಕಷ್ಟ ಹೇಳಿಕೊಂಡ್ರೆ ಸಮಸ್ಯೆಗಳೆಲ್ಲ ಮಾಯ! ಎಲ್ಲಿದೆ ಗೊತ್ತಾ ಈ ದೇಗುಲ?

ಭಾರತದಲ್ಲಿ ನೂರಾರು ಪುರಾತನ ದೇಗುಲಗಳಿವೆ. ಒಂದೊಂದು ದೇಗುಲಕ್ಕೆ ಒಂದೊಂದು ಹಿನ್ನೆಲೆ ಇದೆ. ಪ್ರತಿಯೊಂದು ದೇವಸ್ಥಾನದ ಹಿಂದೆಯೂ ವಿಶಿಷ್ಟ ಮತ್ತು ರೋಚಕವಾದ ಕಥೆಗಳಿವೆ. ಭಾರತದ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗಿನ ಒಂದೊಂದು ಪ್ರಾರ್ಥನಾ ಮಂದಿರದ ಹಿಂದೆ ಕುತೂಹಲ ಕೆರಳಿಸುವ ಕಥೆಗಳಿವೆ. ಅಂತಹದೇ ಒಂದು ವಿಶಿಷ್ಟ ಮತ್ತು ರೋಚಕ ಎನಿಸುವ ಹಿನ್ನೆಲೆ ಇರುವ ದೇಗುಲ ದೂರದ ರಾಜಸ್ಥಾನದಲ್ಲಿದೆ.

  • Local18
  • |
  •   | Rajasthan, India
First published:

  • 17

    Kan Ganesha Mandir: ಈ ಗಣೇಶನ ಕಿವಿಯಲ್ಲಿ ಕಷ್ಟ ಹೇಳಿಕೊಂಡ್ರೆ ಸಮಸ್ಯೆಗಳೆಲ್ಲ ಮಾಯ! ಎಲ್ಲಿದೆ ಗೊತ್ತಾ ಈ ದೇಗುಲ?

    ಹೌದು.. ರಾಜಸ್ಥಾನದ ಬಿಕಾನೇರ್‌ನ ಬ್ರಹ್ಮಸಾಗರ ಪ್ರದೇಶದಲ್ಲಿ ಒಂದು ಅಪರೂಪದ ದೇಗುಲವಿದೆ. ಕಾನ್ ಗಣೇಶ್ ದೇಗುಲವೆಂದೇ ಪ್ರಸಿದ್ಧಿ ಪಡೆದಿರುವ ಈ ದೇವಸ್ಥಾನಕ್ಕೆ ಪ್ರತಿ ನಿತ್ಯ ನೂರಾರು ಮಂದಿ ಆಗಮಿಸುತ್ತಾರೆ.

    MORE
    GALLERIES

  • 27

    Kan Ganesha Mandir: ಈ ಗಣೇಶನ ಕಿವಿಯಲ್ಲಿ ಕಷ್ಟ ಹೇಳಿಕೊಂಡ್ರೆ ಸಮಸ್ಯೆಗಳೆಲ್ಲ ಮಾಯ! ಎಲ್ಲಿದೆ ಗೊತ್ತಾ ಈ ದೇಗುಲ?

    ಸಾಮಾನ್ಯವಾಗಿ ಅನೇಕ ದೇಗುಲಗಳಲ್ಲಿ ಗರ್ಭ ಗುಡಿಯೊಳಗೆ ಭಕ್ತರಿಗೆ ಪ್ರವೇಶ ನೀಡುವುದಿಲ್ಲ. ಪುರೋಹಿತರು ಮಾತ್ರ ಗರ್ಭಗುಡಿ ಪ್ರವೇಶಿಸಿ ದೇವರ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾರೆ. ಆದರೆ ಕಾನ್ ಗಣೇಶ್ ಜಿ ದೇವಸ್ಥಾನ ಮಾತ್ರ ಇದಕ್ಕಿಂತ ಭಿನ್ನ.

    MORE
    GALLERIES

  • 37

    Kan Ganesha Mandir: ಈ ಗಣೇಶನ ಕಿವಿಯಲ್ಲಿ ಕಷ್ಟ ಹೇಳಿಕೊಂಡ್ರೆ ಸಮಸ್ಯೆಗಳೆಲ್ಲ ಮಾಯ! ಎಲ್ಲಿದೆ ಗೊತ್ತಾ ಈ ದೇಗುಲ?

    ಹೌದು.. ರಾಜಸ್ಥಾನದ ಈ ದೇಗುಲಕ್ಕೆ ಭಕ್ತರು ಗರ್ಭ ಗುಡಿಯೊಳಗೆ ಪ್ರವೇಶ ಮಾಡೋದಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾತ್ರವಲ್ಲ ಭಕ್ತರೇ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಗಣೇಶ ದೇವರ ಬಳಿ ಹೇಳಿಕೊಂಡು ಮನಸ್ಸಿಗೆ ಶಾಂತಿಯನ್ನು ಪಡೆಯುತ್ತಾರೆ.

    MORE
    GALLERIES

  • 47

    Kan Ganesha Mandir: ಈ ಗಣೇಶನ ಕಿವಿಯಲ್ಲಿ ಕಷ್ಟ ಹೇಳಿಕೊಂಡ್ರೆ ಸಮಸ್ಯೆಗಳೆಲ್ಲ ಮಾಯ! ಎಲ್ಲಿದೆ ಗೊತ್ತಾ ಈ ದೇಗುಲ?

    ಅಂದಹಾಗೆ, ಈ ದೇಗುಲದ ವಿಶೇಷ ಏನಂದ್ರೆ, ಭಕ್ತರು ಗರ್ಭಗುಡಿಯೊಳಗೆ ಪ್ರವೇಶಿಸಿ ಗಣೇಶನ ಕಿವಿಯೊಳಗೆ ತಮ್ಮ ಕಷ್ಟವನ್ನು ಗುಟ್ಟಾಗಿ ಹೇಳಬೇಕು. ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶನ ಕಿವಿಯ ಬಳಿ ತಮ್ಮ ಬೇಡಿಕೆ, ಹರಕೆಯನ್ನು ಹೇಳಿಕೊಂಡರೆ ಅಂದುಕೊಂಡಿದ್ದು ನಿಜವಾಗುತ್ತೆ ಅನ್ನೋದು ಭಕ್ತರ ನಂಬಿಕೆ.

    MORE
    GALLERIES

  • 57

    Kan Ganesha Mandir: ಈ ಗಣೇಶನ ಕಿವಿಯಲ್ಲಿ ಕಷ್ಟ ಹೇಳಿಕೊಂಡ್ರೆ ಸಮಸ್ಯೆಗಳೆಲ್ಲ ಮಾಯ! ಎಲ್ಲಿದೆ ಗೊತ್ತಾ ಈ ದೇಗುಲ?

    ಕಾನ್ ಗಣೇಶ ದೇವಸ್ಥಾನ 100 ವರ್ಷಕ್ಕೂ ಹಳೆಯದು ಎಂದು ಹೇಳಲಾಗ್ತಿದ್ದು, ಕನ್ ಎಂದರೆ ಹಿಂದಿಯಲ್ಲಿ ಕಿವಿ ಎಂದರ್ಥ. ಭಕ್ತರು ದೇವರ ಕಿವಿಯಲ್ಲಿ ಇಷ್ಟಾರ್ಥಗಳನ್ನು ಸಲ್ಲಿಸುವುದರಿಂದ ಈ ದೇವಾಲಯವನ್ನು ಕಾನ್ ಗಣೇಶ ಮಂದಿರ ಎಂದು ಕರೆಯಲಾಗುತ್ತದೆ.

    MORE
    GALLERIES

  • 67

    Kan Ganesha Mandir: ಈ ಗಣೇಶನ ಕಿವಿಯಲ್ಲಿ ಕಷ್ಟ ಹೇಳಿಕೊಂಡ್ರೆ ಸಮಸ್ಯೆಗಳೆಲ್ಲ ಮಾಯ! ಎಲ್ಲಿದೆ ಗೊತ್ತಾ ಈ ದೇಗುಲ?

    ಕಾನ್ ಗಣೇಶ ದೇವಸ್ಥಾನದಲ್ಲಿ ಗಣೇಶನ ವಿಗ್ರಹವನ್ನು ಕೆಂಪು ಕಲ್ಲಿನಿಂದ ಕೆತ್ತಲಾಗಿದ್ದು, ನಾಲ್ಕು ತೋಳು ಹೊಂದಿರುವ ಗಣೇಶನ ಮುಖವನ್ನು ಎಡಬದಿಗೆ ಕೆತ್ತಲಾಗಿದೆ. ವಿಶೇಷ ಅಂದ್ರೆ ಇಲ್ಲಿ ಗಣಪ ಮದುಮಗನ ರೂಪದಲ್ಲಿ ಕುಳಿತಿದ್ದಾನೆ.

    MORE
    GALLERIES

  • 77

    Kan Ganesha Mandir: ಈ ಗಣೇಶನ ಕಿವಿಯಲ್ಲಿ ಕಷ್ಟ ಹೇಳಿಕೊಂಡ್ರೆ ಸಮಸ್ಯೆಗಳೆಲ್ಲ ಮಾಯ! ಎಲ್ಲಿದೆ ಗೊತ್ತಾ ಈ ದೇಗುಲ?

    ಈ ಕಾನ್ ದೇವಸ್ಥಾನದ ಗಣೇಶನನ್ನು ಭೇಟಿ ಮಾಡುವುದರಿಂದ ಅನೇಕ ದೋಷಗಳು ದೂರವಾಗುತ್ತವೆ. ಜಾತಕದಲ್ಲಿ ಸೂರ್ಯ ಚಂದ್ರ ಮತ್ತು ರಾಹು ಕೇತುಗಳ ದೋಷ ಇರುವವರು ಇಲ್ಲಿನ ಗಣೇಶನ ದರ್ಶನ ಮಾಡಿದರೆ ಆ ದೋಷಗಳು ನಿವಾರಣೆಯಾಗುತ್ತವೆ. ಇದಲ್ಲದೆ, 21 ದಿನಗಳ ಕಾಲ ಕನ್ ಗಣೇಶ ದೇವಸ್ಥಾನಕ್ಕೆ 21 ಪ್ರದಕ್ಷಿಣೆಗಳನ್ನು ಮಾಡುವುದರಿಂದ ಅನೇಕ ಅನಿಷ್ಟಗಳು ದೂರವಾಗುತ್ತವೆ ಎಂದು ದೇವಾಲಯದ ಅರ್ಚಕ ಶ್ಯಾಮ್ ಗೆಹ್ಲೋಟ್ ಹೇಳುತ್ತಾರೆ.

    MORE
    GALLERIES