ಮೇಷ: ಹೊಸ ವರ್ಷದಲ್ಲಿ ಗುರುವಿನ ಸಂಚಾರ ಮೇಷ ರಾಶಿಯವರ ಜೀವನದಲ್ಲಿ ಪ್ರಗತಿಯನ್ನು ಹೆಚ್ಚು ಮಾಡುತ್ತದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ನಿಮಗೆ ಹೊಸ ಉದ್ಯೋಗ ಆಫರ್ ಸಿಗಬಹುದು. ವಿದೇಶ ಪ್ರವಾಸ ಅಥವಾ ವಿದೇಶಿ ವ್ಯಾಪಾರ ನಿಮಗೆ ಲಾಭದಾಯಕ ಅನಿಸಲಿದೆ. ಗುರುಗ್ರಹದ ಧನಾತ್ಮಕ ಪ್ರಭಾವದಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಯಶಸ್ವಿಯಾಗುತ್ತಾರೆ.
ಕರ್ಕಾಟಕ: ಕರ್ಕಾಟಕ ರಾಶಿಯವರಿಗೆ ಗುರುವಿನ ರಾಶಿ ಬದಲಾವಣೆಯು ತುಂಬಾ ಪ್ರಯೋಜನಕಾರಿಯಾಗಿದೆ. 2023 ರಲ್ಲಿ, ಹೊಸ ವೃತ್ತಿ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ಅದೃಷ್ಟವು ನಿಮ್ಮ ಕಡೆ ಉರಲಿದೆ. ಹೊಸ ಯೋಜನೆ ಆರಂಭಿಸಲು ಇದು ಸೂಕ್ತವಾದ ಸಮಯ. ಯಾವುದೇ ವ್ಯವಹಾರ ಅಥವಾ ನಿಮ್ಮ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಇದು ಒಳ್ಳೆಯ ಸಮಯ. ಷೇರುಪೇಟೆಯಲ್ಲಿ ಹೂಡಿಕೆ ಮಾಡುವುದು ಭವಿಷ್ಯಕ್ಕೆ ಒಳ್ಳೆಯದು.