ಮೇಷ: ಹಂಸ ರಾಜಯೋಗ ಮೇಷ ರಾಶಿಯವರ ಜೀವನದಲ್ಲಿ ಪ್ರಗತಿಯನ್ನು ತರುತ್ತದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ನೀವು ಹೊಸ ಕೆಲಸದ ಆಫರ್ ಸಹ ಸಿಗುತ್ತದೆ. ಸಂಪತ್ತಿನ ಆಗಮನದ ಲಕ್ಷಣಗಳೂ ಇವೆ. ವಿದೇಶ ಪ್ರವಾಸ ಅಥವಾ ವಿದೇಶಿ ವ್ಯಾಪಾರ ಲಾಭದಾಯಕ ಎನ್ನಬಹುದು. ಗುರುಗ್ರಹದ ಧನಾತ್ಮಕ ಪ್ರಭಾವದಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಯಶಸ್ಸು ಸಿಗುತ್ತದೆ.