Lucky Zodiac Signs: 2023ರಲ್ಲಿ ಈ ರಾಶಿಯ ಜನರ ಅದೃಷ್ಟ ಬದಲಾಗಲಿದೆಯಂತೆ
Jupiter Transit 2023: ಹೊಸವರ್ಷದ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈ ಸಮಯದಲ್ಲಿ ಹಲವಾರು ಬದಲಾವಣೆಗಳು ಆಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2023ರಲ್ಲಿ ದೊಡ್ಡ ಬದಲಾವಣೆಯಾಗಲಿದ್ದು ಇದರಿಂದ ಕೆಲ ರಾಶಿಗಳ ಅದೃಷ್ಟ ಬದಲಾಗಲಿದೆಯಂತೆ. ಆ ರಾಶಿಗಳು ಯಾವುವು ಹಾಗೂ ಯಾವ ರೀತಿ ರಾಜಯೋಗ ಲಭಿಸಲಿದೆ ಎಂಬುದು ಇಲ್ಲಿದೆ.
ಹೊಸ ವರ್ಷದ ಸಮಯದಲ್ಲಿ ಎಲ್ಲರೂ ಹೊಸ ಬದಲಾವಣೆಯ ನಿರೀಕ್ಷೆ ಮಾಡುತ್ತಾರೆ. ಇನ್ನು 2023 ರಲ್ಲಿ, ಅನೇಕ ಗ್ರಹಗಳ ರಾಶಿ ಬದಲಾಗಲಿದ್ದು, ಇದು ಮುಖ್ಯವಾಗಿ 4 ರಾಶಿಗಳ ಮೇಲೆ ಪರಿಣಾಮ ಬೀರಲಿದೆ.
2/ 8
ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹದ ಮಹತ್ವ ಹೆಚ್ಚಿದೆ. ಈ ಗ್ರಹದ ಬದಲಾವಣೆಯಿಂದ ಕೆಲ ರಾಶಿಯ ಜನರ ಜೀವನದಲ್ಲಿ ಮಹತ್ತರವಾದ ಬೆಳವಣಿಗೆಯಾಗಲಿದೆ ಎನ್ನಲಾಗುತ್ತಿದೆ. 2023 ರಲ್ಲಿ, ಏಪ್ರಿಲ್ 22 ರಂದು, ಗುರು ತನ್ನದೇ ಆದ ಮೀನ ರಾಶಿಯಿಂದ ಮೇಷ ರಾಶಿಗೆ ಚಲಿಸುತ್ತಾನೆ. ಇದರಿಂದ ರಾಜಯೋಗ ರೂಪುಗೊಳ್ಳಲಿದೆ.
3/ 8
ಮಕರ ರಾಶಿ: ಏಪ್ರಿಲ್ 22, 2023 ರ ನಂತರ ಗುರು ಗ್ರಹದ ಕಾರಣದಿಂದ ಮಕರ ರಾಶಿಯವರ ಬದುಕು ಸಂಪೂರ್ಣವಾಗಿ ಬದಲಾಗುತ್ತದೆ. ಐಷಾರಾಮಿ ಜೀವನ ನಡೆಸುವ ಸಾಧ್ಯತೆ ಇರುತ್ತದೆ. ಮನೆ ಅಥವಾ ಭೂಮಿಯಲ್ಲಿ ಹೂಡಿಕೆಯ ವಿಷಯದಲ್ಲಿ ವರ್ಷವು ತುಂಬಾ ಉತ್ತಮವಾಗಿರುತ್ತದೆ.
4/ 8
ಇದಲ್ಲದೇ ಉದ್ಯೋಗಸ್ಥರಿಗೆ ಅನೇಕ ರೀತಿಯ ಉತ್ತಮ ಅವಕಾಶಗಳು ಸಿಗುವ ಹೆಚ್ಚಿನ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ತಾಯಿಯೊಂದಿಗಿನ ಸಂಬಂಧ ಗಟ್ಟಿಯಾಗುತ್ತದೆ. ಕುಟುಂಬದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ.
5/ 8
ಮೇಷ ರಾಶಿಯಲ್ಲಿ ಗುರುವಿನ ಆಗಮನದಿಂದ ಈ ರಾಶಿಯ ಜನರಿಗೆ ಬಹಳ ಒಳ್ಳೆಯದು ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಇದರಿಂದ ಜೀವನದಲ್ಲಿ ಸಮಸ್ಯೆಗಳು ಕಡಿಮೆ ಆಗಿ ಸುಖ-ಸಮೃದ್ಧಿ ನೆಲೆಸಿರುತ್ತದೆ. ಅಲ್ಲದೇ ಜೀವನದಲ್ಲಿ ರಾಜನಂತೆ ಬದುಕು ನಡೆಸುತ್ತಾರಂತೆ.
6/ 8
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯ 10 ನೇ ಮನೆಯಲ್ಲಿ ರಾಜಯೋಗವು ರೂಪುಗೊಳ್ಳಲಿದ್ದು, ಉದ್ಯೋಗದ ವಿಚಾರದಲ್ಲಿ ಬಹಳ ಲಾಭ ಎಂದು ಹೇಳಲಾಗುತ್ತದೆ. ಉದ್ಯೋಗದಲ್ಲಿ ಅನೇಕ ಅತ್ಯುತ್ತಮ ಅವಕಾಶಗಳನ್ನು ಪಡೆಯಬಹುದು. ಕೆಲಸದ ನಿಮಿತ್ತ ವಿದೇಶ ಪ್ರವಾಸ ಮಾಡುವ ಸಾಧ್ಯತೆಯೂ ಇದೆ
7/ 8
ಧನು ರಾಶಿ: ಐದನೇ ಮನೆಯಲ್ಲಿ ರಾಜಯೋಗ ನಡೆಯುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದ ಐದನೇ ಮನೆಯು ಮಕ್ಕಳು, ಪ್ರೇಮ ಸಂಬಂಧ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ್ದಾಗಿದ್ದು, ಪ್ರೀತಿಯ ವಿಚಾರವಾಗಿ ಯಶಸ್ಸು ಸಿಗುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)