Jupiter Transit: ಏಪ್ರಿಲ್​ನಲ್ಲಿ ಈ 3 ರಾಶಿಯವರೇ ರಾಜರು, ಪ್ರಪಂಚವನ್ನೇ ಆಳ್ತಾರೆ ಇವರು

Guru Gochar: ಏಪ್ರಿಲ್​ನಲ್ಲಿ ಗುರು ಗ್ರಹವು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡುವುದರಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಈಗಾಗಲೇ ತಿಳಿದಿದೆ. ಆದರೆ ಗುರುವಿನ ಆಶೀರ್ವಾದದಿಂದ ಮುಖ್ಯವಾಗಿ ಕೆಲವು ರಾಶಿಯ ಜನರು ಹೆಚ್ಚು ಲಾಭವನ್ನು ಪಡೆಯುತ್ತಾರೆ. ಅವರ ಜೀವನದಲ್ಲಿ ಪವಾಡ ಆಗುತ್ತದೆ. ಹಾಗಾದ್ರೆ ಯಾವ ರಾಶಿಗೆ ಇದರಿಂದ ಲಾಭ ಎಂಬುದು ಇಲ್ಲಿದೆ.

First published:

  • 17

    Jupiter Transit: ಏಪ್ರಿಲ್​ನಲ್ಲಿ ಈ 3 ರಾಶಿಯವರೇ ರಾಜರು, ಪ್ರಪಂಚವನ್ನೇ ಆಳ್ತಾರೆ ಇವರು

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹ ತನ್ನ ರಾಶಿ ಬದಲಾವಣೆ ಮಾಡುವುದರಿಂದ ಎಲ್ಲಾ ರಾಶಿಗಳಿಗೆ ಪರಿಣಾಮ ಆಗುತ್ತದೆ. ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡಿದಾಗ ಯೋಗಗಳು ಸಹ ರೂಪುಗೊಳ್ಳುತ್ತದೆ. ಏಪ್ರಿಲ್ 22 ರಂದು ಗುರು ಮೀನ ರಾಶಿಯನ್ನು ಬಿಟ್ಟು ಮಂಗಳ ಗ್ರಹದ ಮೇಷಕ್ಕೆ ಪ್ರವೇಶಿಸುತ್ತಾನೆ.

    MORE
    GALLERIES

  • 27

    Jupiter Transit: ಏಪ್ರಿಲ್​ನಲ್ಲಿ ಈ 3 ರಾಶಿಯವರೇ ರಾಜರು, ಪ್ರಪಂಚವನ್ನೇ ಆಳ್ತಾರೆ ಇವರು

    ಗುರು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಇದೀಗ ಗುರು 12 ವರ್ಷಗಳ ನಂತರ ಮೇಷ ರಾಶಿಗೆ ತೆರಳುತ್ತಿದ್ದಾನೆ. ಗುರುವಿನ ಸಂಚಾರದಿಂದ, ಕೆಲವು ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭ ಆಗಲಿದೆ. ಆರ್ಥಿಕ ಪರಿಸ್ಥಿತಿ ಸಹ ಸುಧಾರಿಸುತ್ತದೆ.

    MORE
    GALLERIES

  • 37

    Jupiter Transit: ಏಪ್ರಿಲ್​ನಲ್ಲಿ ಈ 3 ರಾಶಿಯವರೇ ರಾಜರು, ಪ್ರಪಂಚವನ್ನೇ ಆಳ್ತಾರೆ ಇವರು

    ಮೀನ: ಗುರುವಿನ ಸಂಚಾರವು ಮೀನ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಗುರು ಗ್ರಹವು ನಿಮ್ಮ ಜಾತಕದ ಎರಡನೇ ಮನೆಗೆ ಪ್ರವೇಶ ಮಾಡುತ್ತದೆ. ಇದು ಸಂಪತ್ತು ಮತ್ತು ಮಾತಿಗೆ ಸಂಬಂಧಿಸಿದ ಮನೆ ಎನ್ನಲಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.

    MORE
    GALLERIES

  • 47

    Jupiter Transit: ಏಪ್ರಿಲ್​ನಲ್ಲಿ ಈ 3 ರಾಶಿಯವರೇ ರಾಜರು, ಪ್ರಪಂಚವನ್ನೇ ಆಳ್ತಾರೆ ಇವರು

    ಹಾಗೆಯೇ ನಿಮ್ಮ ಮಾತಿನ ಮೂಲಕ ಸಹ ನೀವು ಲಾಭ ಗಳಿಸಬಹುದು. ನಿಮ್ಮ ಮಾತಿನಿಂದ ಬಹಳ ಜನ ಆಕರ್ಷಿತರಾಗುತ್ತಾರೆ. ಅಲ್ಲದೇ, ಗುರುವಿನ ಸಂಕ್ರಮಣದ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಬಹಳ ದಿನಗಳಿಂದ ಬರಬೇಕಿದ್ದ ಹಣ ವಾಪಾಸ್​ ಸಿಗುತ್ತದೆ.

    MORE
    GALLERIES

  • 57

    Jupiter Transit: ಏಪ್ರಿಲ್​ನಲ್ಲಿ ಈ 3 ರಾಶಿಯವರೇ ರಾಜರು, ಪ್ರಪಂಚವನ್ನೇ ಆಳ್ತಾರೆ ಇವರು

    ಕರ್ಕಾಟಕ: ಗುರು ಗ್ರಹವು ನಿಮ್ಮ ಕರ್ಮದ ಮನೆಯಲ್ಲಿ ಸಂಚರಿಸುತ್ತದೆ. ಇದು ಕೆಲಸ ಮತ್ತು ಉದ್ಯೋಗದ ಸ್ಥಳವಾಗಿದ್ದು, ಹಾಗಾಗಿ ಉದ್ಯೋಗ ಹುಡುಕುತ್ತಿರುವವರಿಗೆ ಗುರು ಗ್ರಹ ಸಂಚಾರದ ಸಮಯದಲ್ಲಿ ಒಳ್ಳೆಯ ಸುದ್ದಿ ಸಿಗುತ್ತದೆ. ಅಲ್ಲದೇ ಈ ಸಮಯದಲ್ಲಿ ಆರ್ಥಿಕ ಲಾಭ ಸಹ ಆಗುತ್ತದೆ. ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ ದೊರೆಯುತ್ತದೆ. ಈ ಅವಧಿಯಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ

    MORE
    GALLERIES

  • 67

    Jupiter Transit: ಏಪ್ರಿಲ್​ನಲ್ಲಿ ಈ 3 ರಾಶಿಯವರೇ ರಾಜರು, ಪ್ರಪಂಚವನ್ನೇ ಆಳ್ತಾರೆ ಇವರು

    ಮೇಷ: ಗುರುವಿನ ಸಂಚಾರವು ಮೇಷ ರಾಶಿಯಲ್ಲಿ ಇರುವುದರಿಂದ ಈ ರಾಶಿಯವರಿಗೆ ತುಂಬಾ ಶುಭಫಲ ಸಿಗಲಿದೆ ಎನ್ನಬಹುದು. ಅದೃಷ್ಟ ನಿಮ್ಮನ್ನ ಹುಡುಕಿ ಬರುತ್ತದೆ. ನಿಮ್ಮ ಜಾತಕ ಚಕ್ರದಲ್ಲಿ ಗುರು ಲಗ್ನ ಮನೆಗೆ ಪ್ರವೇಶಿಸುತ್ತಾನೆ. ಆದ್ದರಿಂದ ಈ ಸಮಯದಲ್ಲಿ ನೀವು ಕಚೇರಿಯಲ್ಲಿ ಮೆಚ್ಚುಗೆಯನ್ನು ಪಡೆಯುತ್ತೀರಿ. ಜೊತೆಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ.

    MORE
    GALLERIES

  • 77

    Jupiter Transit: ಏಪ್ರಿಲ್​ನಲ್ಲಿ ಈ 3 ರಾಶಿಯವರೇ ರಾಜರು, ಪ್ರಪಂಚವನ್ನೇ ಆಳ್ತಾರೆ ಇವರು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES