ಅಪ್ಪ ಎಂದರೆ ಪ್ರತಿಯೊಬ್ಬರಿಗೂ ಆದರ್ಶ ವ್ಯಕ್ತಿ. ತಂದೆಯೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮಕ್ಕಳ ಆಸೆಯನ್ನು ನೆರವೇರಿಸುವ ವ್ಯಕ್ತಿಯಿದ್ದರೆ ಅದು ತಂದೆ ಮಾತ್ರ. ಆದ್ರೆ ಅದೇ ಅಪ್ಪ ತೀರಿಹೋದ್ರೆ ಎಷ್ಟು ಬೇಸರವಾಗುತ್ತದೆ ಅಲ್ವಾ. ಅದೇ ರೀತಿ ತೀರಿ ಹೋದ ಅಪ್ಪ ಪದೇ ಪದೇ ಕನಸಲ್ಲಿ ಬರ್ತಾರ? ರಾತ್ರಿ ಅಪ್ಪನನ್ನು ನೆನೆದು ಒಮ್ಮೆಲೆ ಬೆಚ್ಚಿ ಬೀಳ್ತಿದ್ದೀರಾ? ಹಾಗಾದ್ರೆ ತೀರಿಕೊಂಡ ಅಪ್ಪ ಪದೇ ಪದೇ ಕನಸಿನಲ್ಲಿ ಕಾಣಿಸಿಕೊಳ್ಳುವುದಕ್ಕು ಒಂದು ಬಲವಾದ ಕಾರಣವಿದೆ.
ಅನಾರೋಗ್ಯದ ಬಗ್ಗೆ ಸೂಚನೆ: ಸತ್ತು ಹೋದ ತಂದೆಯ ಜೊತೆಗೆ ನೀವು ಕನಸಿನಲ್ಲಿ ಮಾತನಾಡುತ್ತಿದ್ದೀರಿ ಎಂದರೆ ಇದರರ್ಥ ನಿಮಗೆ ಸದ್ಯದಲ್ಲೇ ಅನಾರೋಗ್ಯ ಕಾಡಲಿದೆ ಎಂಬುದಾಗಿದೆ. ಹೀಗಾಗಿ ಹೊರಗಡೆ ಹೋಗುವಾಗ ಮುಂಜಾಗ್ರತೆಯಿಂದಿರಿ ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇನ್ನೂ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅತಿಯಾದ ಆತ್ಮವಿಶ್ವಾಸ ಬೇಡ. ಇತರರ ಸಲಹೆ ಪಡೆದುಕೊಂಡು ಮುಂದಿನ ಹೆಜ್ಜೆಇಡಿ.
ನಿಮ್ಮ ಮೃತ ತಂದೆಗೆ ಬಗೆಹರಿಯದ ಸಮಸ್ಯೆ ಇದೆ: ತೀರಿಕೊಂಡ ನಿಮ್ಮ ಅಪ್ಪ ಪದೇ ಪದೇ ಕನಸಿನಲ್ಲಿ ಬರುತ್ತಿದ್ದಾರೆ ಅಂದರೆ ಇದಕ್ಕೆ ಕಾರಣ ಬದುಕಿದ್ದಾಗ ಅವರು ಒಂದು ಸಮಸ್ಯೆಗೆ ಸಿಲುಕಿಕೊಂಡಿದ್ರು ಅಥವಾ ಏನನ್ನೋ ಮಾಡಬೇಕು ಅಂದು ಕೊಂಡಿರ್ಬೇಕು. ಆದರೆ ಅದು ಈಡೇರಲಿಲ್ಲ ಹೀಗಾಗಿ ನಿಮ್ಮ ಮೂಲಕ ಅದನ್ನು ಪೂರೈಸಲು ಇಚ್ಚಿಸುತ್ತಿದ್ದಾರೆ. ಈಗ ಅವರು ಮನಶಾಂತಿ ಇಲ್ಲದೆ ಅಲೆಯುತ್ತಿದ್ದಾರೆ ಎಂದರ್ಥ.