Astro Tips: ರಾಶಿಗಳ ಪ್ರಕಾರ ನಿಮ್ಮ ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕಿದ್ರೆ ಬೆಸ್ಟ್​

Astro Tips: ಕೆಲವರು ಮುದ್ದಾದ ನಾಯಿ ಮರಿಗಳನ್ನು, ಬೆಕ್ಕಿನ ಮರಿಗಳನ್ನು ಮತ್ತು ಚಿಕ್ಕ ಪುಟ್ಟ ಪ್ರಾಣಿಗಳನ್ನು ತಂದು ತಮ್ಮ ಮನೆಯಲ್ಲಿ ಸಾಕಿಕೊಳ್ಳುತ್ತಾರೆ. ಆದರೆ ಎಷ್ಟೋ ಜನರಿಗೆ ಪ್ರಾಣಿಯನ್ನು ಸಾಕುವಾಗ ಗೊಂದಲಗಳಿರುತ್ತವೆ. ಹಾಗಿದ್ರೆ ಇಲ್ಲಿ ನಿಮ್ಮ ರಾಶಿಗಳಿಗೆ ಯಾವ ಸಾಕುಪ್ರಾಣಿ ಬೆಸ್ಟ್ ಮತ್ತು ಸರಿ ಹೊಂದುತ್ತದೆ ಅಂತ ಇಲ್ಲಿದೆ ನೋಡಿ.

First published:

  • 113

    Astro Tips: ರಾಶಿಗಳ ಪ್ರಕಾರ ನಿಮ್ಮ ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕಿದ್ರೆ ಬೆಸ್ಟ್​

    ಸಾಕುಪ್ರಾಣಿಗಳು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಎಲ್ಲರೂ ಸಾಕುಪ್ರಾಣಿಗಳ ಜೊತೆಗೆ ಆಟವಾಡಿಕೊಂಡು ಮಜವಾಗಿರಬೇಕೆಂದು ಅಂದುಕೊಳ್ಳುತ್ತಾರೆ. ಆದರೆ ಎಷ್ಟೋ ಜನರಿಗೆ ತಮ್ಮ ಮನೆಯಲ್ಲಿ ಸಾಕುಪ್ರಾಣಿಯನ್ನು ಸಾಕುವಾಗ ಅನೇಕ ರೀತಿಯ ಗೊಂದಲಗಳಿರುತ್ತವೆ. ಇಲ್ಲಿ ನಿಮ್ಮ ರಾಶಿಗಳಿಗೆ ಯಾವ ಸಾಕುಪ್ರಾಣಿ ಬೆಸ್ಟ್ ಮತ್ತು ಸರಿ ಹೊಂದುತ್ತದೆ ಅಂತ ಇಲ್ಲಿ ವಿವರವಾಗಿ ಹೇಳಲಾಗಿದೆ ನೋಡಿ.

    MORE
    GALLERIES

  • 213

    Astro Tips: ರಾಶಿಗಳ ಪ್ರಕಾರ ನಿಮ್ಮ ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕಿದ್ರೆ ಬೆಸ್ಟ್​

    ಮೇಷ ರಾಶಿ: ಮೇಷ ರಾಶಿಯವರು ತುಂಬಾನೇ ಸಕ್ರಿಯವಾಗಿರುವ ಜೀವನಶೈಲಿಯನ್ನು ಇಷ್ಟಪಡುತ್ತಾರೆ. ಹಾಗಾಗಿ ಇವರಿಗೆ ದೊಡ್ಡ ನಾಯಿಗಳನ್ನು ಮನೆಯಲ್ಲಿ ಸಾಕಿಕೊಳ್ಳಲು ತುಂಬಾನೇ ಒಳ್ಳೆಯ ಆಯ್ಕೆ ಆಗಿರುತ್ತದೆ. ಈ ದೊಡ್ಡ ನಾಯಿ ಮೇಷ ರಾಶಿಯವರನ್ನು ದಿನವಿಡೀ ಸಕ್ರಿಯವಾಗಿಡಲು ಮತ್ತು ಸಂತೋಷದಿಂದ ಇರಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 313

    Astro Tips: ರಾಶಿಗಳ ಪ್ರಕಾರ ನಿಮ್ಮ ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕಿದ್ರೆ ಬೆಸ್ಟ್​

    ವೃಷಭ ರಾಶಿ: ವೃಷಭ ರಾಶಿಯ ಜನರು ತುಂಬಾನೇ ಮೃದು ಸ್ವಭಾವದವರಾಗಿರುತ್ತಾರೆ, ಹಾಗಾಗಿ ಅವರ ವ್ಯಕ್ತಿತ್ವಕ್ಕೆ ಸರಿಹೊಂದುವ ಸಾಕುಪ್ರಾಣಿ ಎಂದರೆ ಅದು ಮೊಲ. ಈ ಪುಟ್ಟ ಮುದ್ದಾದ ಪ್ರಾಣಿಯ ಕಾಲುಗಳನ್ನು, ಮೃದುವಾದ ಕಿವಿಗಳನ್ನು ಮುಟ್ಟುವುದು ವೃಷಭ ರಾಶಿಯವರಿಗೆ ತುಂಬಾ ಖುಷಿ ನೀಡುತ್ತದೆ. ಮೊಲಗಳು ಉತ್ಸಾಹಭರಿತ, ಕುತೂಹಲಕಾರಿ ವ್ಯಕ್ತಿತ್ವವನ್ನು ಹೊಂದಿದ ಪ್ರಾಣಿಗಳಾಗಿವೆ.

    MORE
    GALLERIES

  • 413

    Astro Tips: ರಾಶಿಗಳ ಪ್ರಕಾರ ನಿಮ್ಮ ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕಿದ್ರೆ ಬೆಸ್ಟ್​

    ಮಿಥುನ ರಾಶಿ: ಮಿಥುನ ರಾಶಿಯವರಿಗೆ ಅವರೊಂದಿಗೆ ಮಾತನಾಡಲು ಒಂದು ಸಾಕುಪ್ರಾಣಿ ಬೇಕು. ಅದಕ್ಕಾಗಿಯೇ ಪಕ್ಷಿ ಇವರಿಗೆ ಅತ್ಯುತ್ತಮ ಜೋಡಿಯಾಗಿದೆ. ಬಣ್ಣ ಬಣ್ಣದ ರೆಕ್ಕೆಗಳನ್ನು ಹೊಂದಿರುವ ಪಕ್ಷಿಗಳು ತುಂಬಾನೇ ಪ್ರೀತಿಸಲ್ಪಡುತ್ತವೆ. ಅಷ್ಟೇ ಅಲ್ಲದೆ ಹೆಚ್ಚಿನ ಪಕ್ಷಿಗಳು ಮನುಷ್ಯರ ಸುತ್ತಲೂ ಇರಲು ಇಷ್ಟಪಡುತ್ತವೆ. ಆದ್ದರಿಂದ ಮಿಥುನ ರಾಶಿಯವರು ಈ ಪಕ್ಷಿಯೊಂದಿಗೆ ಇರುವಾಗ ಎಂದಿಗೂ ಒಂಟಿತನವನ್ನು ಅನುಭವಿಸುವುದಿಲ್ಲ. ಪಕ್ಷಿಗಳು ತುಂಬಾನೇ ಬುದ್ಧಿವಂತರಾಗಿರುವುದರಿಂದ ಮಿಥುನ ರಾಶಿಯವರು ತಮ್ಮ ಪಕ್ಷಿಗೆ ತಂತ್ರಗಳನ್ನು ಮಾಡಲು ಸಹ ಕಲಿಸಬಹುದು.

    MORE
    GALLERIES

  • 513

    Astro Tips: ರಾಶಿಗಳ ಪ್ರಕಾರ ನಿಮ್ಮ ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕಿದ್ರೆ ಬೆಸ್ಟ್​

    ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರಿಗೆ ನೀರಿನಲ್ಲೂ ಮತ್ತು ನೀರಿನ ಹೊರಗೂ ಜೀವಿಸಬಲ್ಲ ಜೀವಿಯನ್ನು ಸಾಕುವುದು ಬೆಸ್ಟ್. ಅದರಲ್ಲೂ ಈ ಏಡಿಗಳಲ್ಲಿ ಸಿಹಿನೀರಿನ ಏಡಿಗಳು, ಉಪ್ಪುನೀರಿನ ಏಡಿಗಳು ಮತ್ತು ಹರ್ಮಿಟ್ ಏಡಿಗಳು ಎಂಬ ಅನೇಕ ವಿಧಗಳು ಇರುತ್ತವೆ. ಈ ಪ್ರಾಣಿಗಳು ಆರಂಭದಲ್ಲಿ ಮುದ್ದಾಗಿರದಿದ್ದರೂ, ಕರ್ಕಾಟಕ ರಾಶಿಯವರು ತಮ್ಮ ಸಂವೇದನಾಶೀಲ ಸಾಕುಪ್ರಾಣಿಗಳೊಂದಿಗೆ ಆಳವಾದ ಬಂಧವನ್ನು ಬೆಳೆಸಿಕೊಳ್ಳಬಹುದು ಮತ್ತು ಆ ಬಂಧವನ್ನು ಅವರು ನಂತರ ತುಂಬಾನೇ ಆನಂದಿಸಬಹುದು.

    MORE
    GALLERIES

  • 613

    Astro Tips: ರಾಶಿಗಳ ಪ್ರಕಾರ ನಿಮ್ಮ ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕಿದ್ರೆ ಬೆಸ್ಟ್​

    ಸಿಂಹ ರಾಶಿ: ಸಿಂಹ ರಾಶಿಯವರು ತಮ್ಮ ರಾಶಿಯ ಚಿಹ್ನೆಯಂತೆ ಸಿಂಹದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಹಾಗಂತ ಅವರಿಗೆ ಸಿಂಹ ಒಳ್ಳೆಯ ಜೋಡಿ, ಅದನ್ನು ಸಾಕಿಕೊಳ್ಳಿ ಅಂತ ಹೇಳುವುದಕ್ಕೆ ಆಗುವುದಿಲ್ಲ. ಅವರಿಗೆ ಈ ಬೆಕ್ಕು ತುಂಬಾನೇ ಉತ್ತಮವಾದ ಸಾಕುಪ್ರಾಣಿ ಆಗಿರುತ್ತದೆ. ಬೆಕ್ಕಿನ ತುಂಟಾಟಗಳು ಮತ್ತು ಅದರ ಸಕ್ರಿಯವಾಗಿರುವ ನಡುವಳಿಕೆ ಎಲ್ಲವೂ ಸಿಂಹ ರಾಶಿಯ ಜನರಿಗೆ ತುಂಬಾನೇ ಇಷ್ಟವಾಗುತ್ತದೆ. ಸಿಂಹ ರಾಶಿಯವರು ಹುಡುಕುತ್ತಿರುವ ಪ್ರೀತಿ, ವಾತ್ಸಲ್ಯ ಮತ್ತು ಮನರಂಜನೆಯನ್ನು ಈ ಬೆಕ್ಕು ಒದಗಿಸುತ್ತದೆ.

    MORE
    GALLERIES

  • 713

    Astro Tips: ರಾಶಿಗಳ ಪ್ರಕಾರ ನಿಮ್ಮ ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕಿದ್ರೆ ಬೆಸ್ಟ್​

    ಕನ್ಯಾ ರಾಶಿ: ಕನ್ಯಾ ರಾಶಿಯ ಜನರ ಶಕ್ತಿಗೆ ಸಮನಾದದ್ದು ಎಂದರೆ ಮೀನಿನ ಶಕ್ತಿ ಅಂತ ಹೇಳಬಹುದು. ಎಂದರೆ ಮೀನಿನಷ್ಟೆ ಲವಲವಿಕೆಯಿಂದ ಇರ್ತಾರೆ ಕನ್ಯಾ ರಾಶಿಯವರು. ಆದ್ದರಿಂದ ಕನ್ಯಾ ರಾಶಿಯವರಿಗೆ ಮೀನು ತುಂಬಾನೇ ಸರಿಹೊಂದುವ ಸಾಕುಪ್ರಾಣಿಯಾಗಿದೆ. ಕನ್ಯಾ ರಾಶಿ ಜನರು ಸೂಕ್ಷ್ಮ ವಿವರಗಳಿಗೆ ತುಂಬಾನೇ ಬೆರಗುಗೊಳ್ಳುವುದರಿಂದ ಮೀನು ನೀರಿನಲ್ಲಿ ಮಾಡುವ ಆಟಗಳನ್ನು ನೋಡಿ ಇವರು ತುಂಬಾನೇ ಖುಷಿ ಪಡುತ್ತಾರೆ.

    MORE
    GALLERIES

  • 813

    Astro Tips: ರಾಶಿಗಳ ಪ್ರಕಾರ ನಿಮ್ಮ ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕಿದ್ರೆ ಬೆಸ್ಟ್​

    ತುಲಾ ರಾಶಿ: ತುಲಾ ರಾಶಿಯ ಜನರಿಗೆ ಪುಟ್ಟ ಮತ್ತು ಗ್ಲಾಮರ್ ಆಗಿರುವುದು ಎಂದರೆ ತುಂಬಾನೇ ಇಷ್ಟ. ಅವರು ಅಂತಹದೇ ಪುಟ್ಟ ಪ್ರಾಣಿಯನ್ನು ಸಾಕಿಕೊಳ್ಳಲು ಇಷ್ಟ ಪಡುತ್ತಾರೆ. ಆದ್ದರಿಂದಲೇ ಇವರು ಸಣ್ಣ ಮತ್ತು ಮುದ್ದಾದ ನಾಯಿಯನ್ನು ಸಾಕುಪ್ರಾಣಿಯಾಗಿ ಬೆಳೆಸಲು ಇಷ್ಟಪಡುತ್ತಾರೆ.

    MORE
    GALLERIES

  • 913

    Astro Tips: ರಾಶಿಗಳ ಪ್ರಕಾರ ನಿಮ್ಮ ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕಿದ್ರೆ ಬೆಸ್ಟ್​

    ವೃಶ್ಚಿಕ ರಾಶಿ: ನಿಗೂಢ ವ್ಯಕ್ತಿತ್ವವನ್ನು ಹೊಂದಿರುವ ವೃಶ್ಚಿಕ ರಾಶಿಯ ಜನರು ಅವರಷ್ಟೇ ನಿಗೂಢವಾದ ಸಾಕುಪ್ರಾಣಿಯನ್ನು ಹೊಂದಿರಬೇಕು. ವಿಶೇಷವಾಗಿ ವೃಶ್ಚಿಕ ರಾಶಿಯವರ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುವಂತೆ ಸರೀಸೃಪಗಳು ಮತ್ತು ಉಭಯಚರಗಳನ್ನು ಸಾಕಿಕೊಳ್ಳಬಹುದು. ವೃಶ್ಚಿಕ ರಾಶಿಯವರು ವಿವಿಧ ರೀತಿಯ ಹಾವುಗಳು, ಹಲ್ಲಿಗಳು, ಕಪ್ಪೆಗಳು ಮತ್ತು ಇನ್ನಿತರೆ ಸರೀಸೃಪಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

    MORE
    GALLERIES

  • 1013

    Astro Tips: ರಾಶಿಗಳ ಪ್ರಕಾರ ನಿಮ್ಮ ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕಿದ್ರೆ ಬೆಸ್ಟ್​

    ಧನು ರಾಶಿ: ಧನು ರಾಶಿಯವರು ಯಾವಾಗಲೂ ಕುದುರೆ ಮೇಲೆ ಕುಳಿತು ವೇಗವಾಗಿ ಗಾಳಿಯಲ್ಲಿ ಹೋಗಲು ಬಯಸುತ್ತಾರೆ. ಆದ್ದರಿಂದ ಅವರಿಗೆ ಸರಿ ಹೊಂದುವ ಸಾಕುಪ್ರಾಣಿ ಎಂದರೆ ಅದು ಕುದುರೆ. ಧನು ರಾಶಿಯ ಜನರು ಈ ನಾಲ್ಕು ಕಾಲಿನ ಪ್ರಾಣಿಯೊಂದಿಗೆ ಬೇಗನೆ ಸ್ನೇಹವನ್ನು ಬೆಳೆಸಿಕೊಳ್ಳುತ್ತಾರೆ. ಕುದುರೆಗಳು ಸುಂದರವಾಗಿರುವುದಲ್ಲದೆ, ಬಲಶಾಲಿ ಸಹ ಆಗಿರುತ್ತವೆ. ಧನು ರಾಶಿಯವರು ತಮ್ಮ ಕುದುರೆಯ ಮೇಲೆ ಕುಳಿತುಕೊಂಡು ಸಾಹಸ ಮಾಡಲು ಇಷ್ಟಪಡುತ್ತಾರೆ.

    MORE
    GALLERIES

  • 1113

    Astro Tips: ರಾಶಿಗಳ ಪ್ರಕಾರ ನಿಮ್ಮ ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕಿದ್ರೆ ಬೆಸ್ಟ್​

    ಮಕರ ರಾಶಿ: ಮಕರ ರಾಶಿಯ ಜನರು ಹೊರಗೆ ತುಂಬಾನೇ ಒರಟು ಅಂತ ಜನರಿಗೆ ಅನ್ನಿಸಬಹುದು. ಆದರೆ ಮನಸ್ಸಿನಿಂದ ಇವರು ತುಂಬಾನೇ ಮೃದು ಸ್ವಭಾವದವರು. ಇವರ ರಾಶಿಗೆ ಸರಿ ಹೊಂದುವ ಸಾಕುಪ್ರಾಣಿ ಎಂದರೆ ಅದು ಮುಳ್ಳು ಹಂದಿ. ಮುಳ್ಳು ಹಂದಿ ಸಹ ಹೊರಗೆ ಮುಳ್ಳನ್ನು ಹೊಂದಿರುತ್ತದೆ. ಆದರೆ ಮನಸ್ಸಿನಿಂದ ತುಂಬಾನೇ ಮುದ್ದಾಗಿರುವ ಪ್ರಾಣಿ ಆಗಿರುತ್ತದೆ. ಮುಳ್ಳು ಹಂದಿಗಳಿಗೆ ವಿಶೇಷ ನಿರ್ವಹಣೆಯ ಅಗತ್ಯವಿರುವುದರಿಂದ ಮಕರ ರಾಶಿಯವರು ಈ ತೀಕ್ಷ್ಣವಾದ ಸಾಕುಪ್ರಾಣಿಯನ್ನು ಹೊಂದುವ ಸವಾಲನ್ನು ಇಷ್ಟಪಡಬಹುದು.

    MORE
    GALLERIES

  • 1213

    Astro Tips: ರಾಶಿಗಳ ಪ್ರಕಾರ ನಿಮ್ಮ ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕಿದ್ರೆ ಬೆಸ್ಟ್​

    ಕುಂಭ ರಾಶಿ: ಕುಂಭ ರಾಶಿಯವರು ಹೆಚ್ಚಾಗಿ ಈ ಕೀಟಗಳು, ಅಕಶೇರುಕಗಳು ಮತ್ತು ಅರಾಕ್ನಿಡ್ ಗಳನ್ನು ಇಷ್ಟಪಡುವ ಜನರಾಗಿರುತ್ತಾರೆ. ಸಾಮಾನ್ಯವಾಗಿ, ಹೆಚ್ಚಿನ ರಾಶಿಯವರು ತುಪ್ಪಳದ ಜೀವಿಗಳನ್ನು ತಮ್ಮ ಸ್ನೇಹಿತ ಅಥವಾ ಸುಂದರವಾದ ಸಾಕುಪ್ರಾಣಿ ಅಂತ ಅಂದುಕೊಳ್ಳುತ್ತಾರೆ. ಆದರೆ ಕುಂಭ ರಾಶಿಯವರು ಅದೆಲ್ಲದರ ಬಗ್ಗೆ ಅಷ್ಟೊಂದು ಒಲವಿರುವುದಿಲ್ಲ. ಏಕೆಂದರೆ ಇವರಿಗೆ ಕೀಟಗಳನ್ನು ಕಂಡರೆ ಬಲು ಇಷ್ಟ.

    MORE
    GALLERIES

  • 1313

    Astro Tips: ರಾಶಿಗಳ ಪ್ರಕಾರ ನಿಮ್ಮ ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕಿದ್ರೆ ಬೆಸ್ಟ್​

    ಮೀನ ರಾಶಿ: ಪ್ರಾಣಿಗಳ ಪ್ರೇಮಿಯಾಗಿ, ಮೀನ ರಾಶಿಯವರು ಸಾಕುಪ್ರಾಣಿಗಳನ್ನು ಆಯ್ಕೆ ಮಾಡಲು ತುಂಬಾನೇ ಕಷ್ಟವಾಗಬಹುದು! ಆದರೆ ಮೀನ ರಾಶಿಯವರು ಸಣ್ಣ ಮತ್ತು ಮುದ್ದಾದ ಪ್ರಾಣಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಇವರು ಗಿನಿಯಾ ಪಿಗ್ ಎಂಬ ಚಿಕ್ಕ ಪ್ರಾಣಿಗೆ ಇವರು ಮನಸೋಲುತ್ತಾರೆ. ಗಿನಿಯಾ ಪಿಗ್ ತುಂಬಾನೇ ಮುದ್ದಾದ ಪುಟ್ಟ ಪ್ರಾಣಿಯಾಗಿದ್ದು, ಆರಂಭದಲ್ಲಿಯೇ ತುಂಬಾನೇ ಸ್ನೇಹಜೀವಿ ಆಗಿರುತ್ತವಂತೆ.

    MORE
    GALLERIES