Virat Kohli: ಇಂದು ಆರ್​ಸಿಬಿ ಗೆಲ್ಲೋದು ಪಕ್ಕಾ, ವಿರಾಟ್​ ಮಿಂಚೋದೂ ಪಕ್ಕಾ! ಅವರ ಜಾತಕದಲ್ಲೇ ಇದೆ ಗೆಲುವು!

IPL 2023: ಬಹು ದಿನಗಳಿಂದ ಕಾದಿದ್ದ IPL ಈಗ ಆರಂಭವಾಗಿದ್ದು, ಈಗಾಗಲೇ ಹಲವು ಪಂದ್ಯಗಳು ನಡೆದಿವೆ. ಆದರೆ ಅದೆಷ್ಟೇ ಐಪಿಎಲ್​ ಸೀಸನ್​ಗಳು ಬಂದರೂ ಸಹ ಆರ್​ಸಿಬಿ ಮೇಲಿನ ಕ್ರೇಜ್ ಕಡಿಮೆ ಆಗಿಲ್ಲ. ಈ ಬಾರಿ ಅಭಿಮಾನಿಗಳು ಕಪ್ ನಮ್ದೇ ಎನ್ನುತ್ತಿದ್ದಾರೆ. ಜ್ಯೋತಿಷ್ಯದ ಪ್ರಕಾರ ಇಂದಿನ ಪಂದ್ಯವನ್ನು ಆರ್​ಸಿಬಿ ಗೆಲ್ಲುತ್ತಾ? ವಿರಾಟ್​ ಶತಕ ಬಾರಿಸುತ್ತಾರಾ? ಎಂಬುದು ಇಲ್ಲಿದೆ.

First published:

  • 18

    Virat Kohli: ಇಂದು ಆರ್​ಸಿಬಿ ಗೆಲ್ಲೋದು ಪಕ್ಕಾ, ವಿರಾಟ್​ ಮಿಂಚೋದೂ ಪಕ್ಕಾ! ಅವರ ಜಾತಕದಲ್ಲೇ ಇದೆ ಗೆಲುವು!

    ಐಪಿಎಲ್​ 16ನೇ ಸೀಸನ್​ನ 15ನೇ ಪಂದ್ಯದಲ್ಲಿ ಇಂದು ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೇಂಟ್ಸ್ (RCB vs LSG) ಮುಖಾಮುಖಿ ಆಗಲಿದೆ.

    MORE
    GALLERIES

  • 28

    Virat Kohli: ಇಂದು ಆರ್​ಸಿಬಿ ಗೆಲ್ಲೋದು ಪಕ್ಕಾ, ವಿರಾಟ್​ ಮಿಂಚೋದೂ ಪಕ್ಕಾ! ಅವರ ಜಾತಕದಲ್ಲೇ ಇದೆ ಗೆಲುವು!

    ಆರ್​ಸಿಬಿ ಈವರೆಗೆ ಒಟ್ಟು 2 ಪಂದ್ಯವನ್ನಾಡಿದ್ದು, ಮೊದಲ ಪಂದ್ಯ ಗೆದ್ದು 2ನೇ ಪಂದ್ಯವನ್ನು ಸೋತಿದೆ. ಹಾಗಾಗಿ ಈ ಪಂದ್ಯದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದ್ದು, ವಿರಾಟ್​ ಸಹ ಶತಕ ಬಾರಿಸುತ್ತಾರೆ ಎಂದು ಕಾದು ಕುಳಿತಿದ್ದಾರೆ.

    MORE
    GALLERIES

  • 38

    Virat Kohli: ಇಂದು ಆರ್​ಸಿಬಿ ಗೆಲ್ಲೋದು ಪಕ್ಕಾ, ವಿರಾಟ್​ ಮಿಂಚೋದೂ ಪಕ್ಕಾ! ಅವರ ಜಾತಕದಲ್ಲೇ ಇದೆ ಗೆಲುವು!

    ಇನ್ನು ಈ ಬಾರಿ ವಿರಾಟ್​ ಐಪಿಎಲ್​ನಲ್ಲಿ ಯಾವ ರೀತಿ ಪ್ರದರ್ಶನ ನೀಡಬಹುದು ಎಂಬುವುದರ ಬಗ್ಗೆ ಗಣೇಶ ಸ್ಪೀಕ್ಸ್​ ತನ್ನ ವೆಬ್​ಸೈಟ್​ನಲ್ಲಿ ತಿಳಿಸಿದ್ದು, ಇಂದಿನ ಮ್ಯಾಚ್​ನಲ್ಲಿ ವಿರಾಟ್​ ಕೊಹ್ಲಿ ಶತಕ ಬಾರಿಸುತ್ತಾರೆ ಎನ್ನಲಾಗುತ್ತಿದೆ.

    MORE
    GALLERIES

  • 48

    Virat Kohli: ಇಂದು ಆರ್​ಸಿಬಿ ಗೆಲ್ಲೋದು ಪಕ್ಕಾ, ವಿರಾಟ್​ ಮಿಂಚೋದೂ ಪಕ್ಕಾ! ಅವರ ಜಾತಕದಲ್ಲೇ ಇದೆ ಗೆಲುವು!

    ಕಿಂಗ್ ಕೊಹ್ಲಿಯ ಜಾತಕದ ಪ್ರಕಾರ ಅವರದ್ದು  ಮೀನ ರಾಶಿಯಾಗಿದ್ದು, ಈ ವರ್ಷ ಗ್ರಹಗಳ ಕಾರಣದಿಂದ ಉತ್ತಮ ಫಾರ್ಮ್​ನಲ್ಲಿ ಇರಲಿದ್ದಾರೆ. ಹಾಗಾಗಿ ಈ ಮ್ಯಾಚ್​ನಲ್ಲಿ ಮಾತ್ರವಲ್ಲದೇ ಉಳಿದ ಐಪಿಎಲ್​ ಮ್ಯಾಚ್​ಗಳಲ್ಲಿ ಸಹ ಅವರು ಮಿಂಚಲಿದ್ದಾರೆ ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ.

    MORE
    GALLERIES

  • 58

    Virat Kohli: ಇಂದು ಆರ್​ಸಿಬಿ ಗೆಲ್ಲೋದು ಪಕ್ಕಾ, ವಿರಾಟ್​ ಮಿಂಚೋದೂ ಪಕ್ಕಾ! ಅವರ ಜಾತಕದಲ್ಲೇ ಇದೆ ಗೆಲುವು!

    ಇನ್ನು ಈ ಬಾರಿ ಪಂದ್ಯಗಳ ಸಮಯದಲ್ಲಿ ಸಂಚಾರ ಮಾಡುತ್ತಿರುವ ಶುಕ್ರ ತ್ರಿಕೋನ ಜನ್ಮ ಚಂದ್ರ ಮತ್ತು ಶನಿಯು ಕೊಹ್ಲಿಗೆ ಅವರ ಖ್ಯಾತಿಯನ್ನು ಹೆಚ್ಚಿಸಲು ಮತ್ತು ಅವರ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಲು ಸಹಾಯ ಮಾಡುತ್ತದೆ.

    MORE
    GALLERIES

  • 68

    Virat Kohli: ಇಂದು ಆರ್​ಸಿಬಿ ಗೆಲ್ಲೋದು ಪಕ್ಕಾ, ವಿರಾಟ್​ ಮಿಂಚೋದೂ ಪಕ್ಕಾ! ಅವರ ಜಾತಕದಲ್ಲೇ ಇದೆ ಗೆಲುವು!

    ಇದರಿಂದಾಗಿ ಆರ್​ಸಿಬಿ ತಂಡ ಐಪಿಎಲ್​ 2023ರ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಸದ್ಯ ಆರ್​ಸಿಬಿ -1.25ರ ರನ್​ರೇಟ್​ ಹೊಂದಿದೆ. ಇಂದು ಲಕ್ನೋ ವಿರುದ್ಧ ಸಾಧಾರಣವಾಗಿ ಗೆದ್ದರೆ ಮತ್ತೆ 7ನೇ ಸ್ಥಾನದಲ್ಲಿಯೇ ಉಳಿಯಲಿದೆ. ಆದರೆ ದೊಡ್ಡ ಅಂತರದಲ್ಲಿ ಗೆದ್ದರೆ 4 ಪಾಯಿಂಟ್​ ಮೂಲಕ ಕೊಂಚ ಮೇಲಕ್ಕೆ ಜಿಗಿಯಲಿದೆ.

    MORE
    GALLERIES

  • 78

    Virat Kohli: ಇಂದು ಆರ್​ಸಿಬಿ ಗೆಲ್ಲೋದು ಪಕ್ಕಾ, ವಿರಾಟ್​ ಮಿಂಚೋದೂ ಪಕ್ಕಾ! ಅವರ ಜಾತಕದಲ್ಲೇ ಇದೆ ಗೆಲುವು!

    ಸದ್ಯ ಈ ಜ್ಯೋತಿಷಿಗಳ ಪ್ರಕಾರ ಇಂದಿನ ಮ್ಯಾಚ್​ ಆರ್​ಸಿಬಿ, ಪಾಲಾಗಲಿದೆ. ಒಟ್ಟಾರೆ  ಭವಿಷ್ಯದ ಕಾರಣದಿಂದ ಆರ್​ಸಿಬಿ ಅಭಿಮಾನಿಗಳ ಸಂತಸ ಹೆಚ್ಚಾಗಿದ್ದು, ಈ ಮ್ಯಾಚ್​ನಲ್ಲಿ ವಿರಾಟ್​ ಶತಕ ಹಾಗೂ ಆರ್​ಸಿಬಿ ಗೆಲುವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

    MORE
    GALLERIES

  • 88

    Virat Kohli: ಇಂದು ಆರ್​ಸಿಬಿ ಗೆಲ್ಲೋದು ಪಕ್ಕಾ, ವಿರಾಟ್​ ಮಿಂಚೋದೂ ಪಕ್ಕಾ! ಅವರ ಜಾತಕದಲ್ಲೇ ಇದೆ ಗೆಲುವು!

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES