Temple Tour: ರಾಜ್ಯದ ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯದ ಕುರಿತು ಆಸಕ್ತಿಕರ ಸಂಗತಿಗಳಿವು
ರಾಜ್ಯದ ಶ್ರೀಮಂತ ದೇಗುಲ ಎಂಬ ಹೆಗ್ಗಳಿಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ (Kukke Subramanya Temple )ಇದೆ. ರಾಜ್ಯ ಹೊರ ರಾಜ್ಯಗಳಿಂದ ಈ ದೇಗುಲಕ್ಕೆ ಭಕ್ತರು ಹರಿದು ಬರುತ್ತಾರೆ. ಕುಕ್ಕೆ ಸುಬ್ರಮಣ್ಯ ವಿಶೇಷವಾಗಿ ನಾಗ ದೋಷ, ಸರ್ಪ ದೋಷ ಪರಿಹಾರಕ್ಕೆ ಖ್ಯಾತಿ ಪಡೆದಿದೆ. ಆಶ್ಲೇಷ ಬಲಿ, ಷಷ್ಠಿ ಸಮಯದಲ್ಲಿ ಇಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ.
ಸುತ್ತಲೂ ಹಸಿರು ವನಗಳಿಂದ ಕೂಡಿರುವ ದೇಗುಲಕ್ಕೆ 5000ಕ್ಕೂ ಹೆಚ್ಚಿನ ಇತಿಹಾಸ ಇದೆ. ಕುಮಾರಧಾರ ನದಿ ಇಲ್ಲಿ ಹರಿಯುತ್ತದೆ. ಧಾರ್ಮಿಕ ಜೊತೆಗೆ ಇದು ಚಾರಣ ಪ್ರಿಯರಿಗೆ ಮೆಚ್ಚಿನ ತಾಣವಾಗಿದೆ. ಇಲ್ಲಿನ ಕುಮಾರ ಪರ್ವತ ಬೆಟ್ಟ ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ.
2/ 7
ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಪ್ರಧಾನ ದೇವರು ಶಿವನ ಮಗ ಸುಬ್ರಮಣ್ಯ, ಈ ಸುಬ್ರಮಣ್ಯನನ್ನು ಮುರುಗ, ಕಾರ್ತಿಕೇಯ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
3/ 7
ಕುಕ್ಕೆ ಸುಬ್ರಹ್ಮಣ್ಯ ನಾಗಗಳ ವಾಸಸ್ಥಾನವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುವುದು. ಹಾಗಾಗಿ ಇಲ್ಲಿ ನಾಗ ದೋಷ, ಸರ್ಪ ದೋಷ ಪೂಜೆಗೆ ವಿಶೇಷ ಮಾನ್ಯತೆ ಇದೆ
4/ 7
ಕುಕ್ಕೇ ಸುಬ್ರಮಣ್ಯ ಬಳಿಯ ಕುಮಾರ ಪರ್ವತದಲ್ಲಿ ಭಗವಾನ್ ಕುಮಾರಸ್ವಾಮಿ ಮತ್ತು ಅವರ ಸಹೋದರ ಗಣೇಶ ರಾಕ್ಷಸರಾದ ತಾರಕ ಮತ್ತು ಶೂರಪದ್ಮಾಸುರರನ್ನು ಸಂಹರಿಸಿದ್ದಾರೆ ಎನ್ನಲಾಗಿದೆ.
5/ 7
ಈ ವಿಜಯದಿಂದ ದೇವರಾಜ ಸಂತಸಗೊಂಡರು. ಗರುಂಡನಿಂದ ರಕ್ಷಿಸುವ ಭರವಸೆ ನೀಡಿದರು ಎಂಬ ಇತಿಹಾಸ ಕೂಡ ಇದೆ. ದೇಗುಲದ ಪೂರ್ವಕ್ಕೆಇದ್ದು, ದೇವಾಲಯದ ಮುಖ್ಯ ದ್ವಾರವು ಗರ್ಭಗ್ರಹದ ಹಿಂದೆ ಇದೆ.
6/ 7
ಶ್ರೀ ಆದಿಶಂಕರಾಚಾರ್ಯರು ದಿಗ್ವಿಜಯಕ್ಕಾಗಿ ಇಲ್ಲಗೆ ಬಂದು ಕೆಲವು ದಿನ ವಾಸ ಮಾಡಿದ್ದರೆಂದೂ ಆನಂದ ವಿರಚಿತ “ಶಂಕರ ವಿಜಯ”ದಲ್ಲಿ ಹೇಳಿದೆ. ಶ್ರೀ ಶಂಕರಾಚಾರ್ಯ ವಿರಚಿತ “ಸುಬ್ರಹ್ಮಣ್ಯ ಭುಜಂಗ ಪ್ರಯಾತ ಸ್ತೋತ್ರ”ದಲ್ಲಿ “ಭಜೇ ಕುಕ್ಕೆಲಿಂಗಂ” ಎಂದು ಈ ಕ್ಷೇತ್ರದ ಉಲ್ಲೇಖವಿದೆ
7/ 7
ಇಲ್ಲಿನ ಸರ್ಪ ಸ೦ಸ್ಕಾರ ಬಹಳ ಶ್ರೇಷ್ಟ ಮತ್ತು ಪ್ರಸಿದ್ಢ. ಸರ್ಪ ದೋಷ ಇರುವವರು ಇಲ್ಲಿಗೆ ಬ೦ದು, ಸರ್ಪ ಸ೦ಸ್ಕಾರ ಮತ್ತು ನಾಗ ಪ್ರತಿಷ್ಟೆ ನೆರವೇರಿಸಿ ದೋಷ ಮುಕ್ತರಾಗುತ್ತಾರೆ.