Astrology: ಜನ್ಮ ಕುಂಡಲಿಯಲ್ಲಿ ಸೂರ್ಯ ದುರ್ಬಲನಾದ್ರೆ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
ಜನ್ಮ ಕುಂಡಲಿ ಅಧ್ಯಯನದಲ್ಲಿ ಸೂರ್ಯನು ಪ್ರಮುಖ ಪಾತ್ರವನ್ನು ವಹಿಸುತ್ತಾನೆ. ಹಿಂದೂ ಧರ್ಮದಲ್ಲಿ ಸೂರ್ಯನನ್ನು ದೇವರನ್ನಾಗಿ ಪೂಜಿಸಲಾಗುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಸೂರ್ಯನು ನಕ್ಷತ್ರಗಳ ತಂದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಸೂರ್ಯನು ದುರ್ಬಲನಾಗಿದ್ದರೆ, ಆ ವ್ಯಕ್ತಿಯು ರೋಗಗಳಿಂದ ಬಳಲುತ್ತಾನೆ. ಆ ವ್ಯಕ್ತಿಗೆ ಉದ್ಯೋಗ, ವ್ಯಾಪಾರ, ರಾಜಕೀಯ ಸೇರಿದಂತೆ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗಲ್ಲವಂತೆ. ಆದ್ರೆ ಕೆಲವು ಕ್ರಮಗಳಿಂದ ಜನ್ಮಕುಂಡಲಿಯ ಸೂರ್ಯನನ್ನು ಬಲಪಡಿಸಬಹುದು. ಆ ಪರಿಹಾರಗಳು ಇಲ್ಲಿವೆ. (ಸಾಂದರ್ಭಿಕ ಚಿತ್ರ)
2/ 8
ಸೂರ್ಯನನ್ನು ಬಲಪಡಿಸಲು ಭಾನುವಾರದಂದು ಸ್ನಾನದ ನಂತರ ಕೆಂಪು ಬಟ್ಟೆಗಳನ್ನು ಧರಿಸಬೇಲು. ಓಂ ಹ್ರಾಮ್ ಹ್ರೌನ್ಸ್ ಸೂರ್ಯಾಯ ನಮಃ ಎಂಬ ಮಂತ್ರವನ್ನು 3. 5 ಅಥವಾ 12 ಸುತ್ತುಗಳವರೆಗೆ ಪಠಿಸಬೇಕು. (ಸಾಂದರ್ಭಿಕ ಚಿತ್ರ)
3/ 8
ಭಾನುವಾರ ಸ್ನಾನದ ನಂತರ ಒಂದು ಪಾತ್ರೆಯಲ್ಲಿ ಶುದ್ಧ ನೀರನ್ನು ತೆಗೆದುಕೊಂಡು ಅದರಲ್ಲಿ ಕೆಂಪು ಚಂದನ, ಕೆಂಪು ಹೂವುಗಳು, ಅಕ್ಷತೆ ಮತ್ತು ದೂರ್ವಾವನ್ನು ಮಿಶ್ರಣ ಮಾಡಿ. ಇದರ ನಂತರ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಸೂರ್ಯನು ಬಲಶಾಲಿಯಾಗುತ್ತಾನೆ. (ಸಾಂದರ್ಭಿಕ ಚಿತ್ರ)
4/ 8
ಭಾನುವಾರದಂದು ಉಪ್ಪನ್ನು ಸೇವಿಸಬೇಡಿ. ಆಹಾರದಲ್ಲಿ ಗಂಜಿ, ಹಾಲು, ಮೊಸರು, ತುಪ್ಪ, ಸಕ್ಕರೆ, ಗೋಧಿ ರೊಟ್ಟಿ ಇತ್ಯಾದಿಗಳನ್ನು ಸೇವಿಸಬೇಕು. ಇದು ಕೂಡ ಜನ್ಮ ಕುಂಡಲಿಯಲ್ಲಿ ಸೂರ್ಯನ ಸ್ಥಾನವನ್ನು ಬಲಪಡಿಸುತ್ತದೆ. (ಸಾಂದರ್ಭಿಕ ಚಿತ್ರ)
5/ 8
ಸೂರ್ಯನು ಬಲಹೀನನಾಗಿದ್ದಾಗ ವ್ಯಕ್ತಿಯು ಕೆಂಪು ಮತ್ತು ಹಳದಿ ಬಟ್ಟೆ, ಬೆಲ್ಲ, ಚಿನ್ನ, ತಾಮ್ರ, ಮಾಣಿಕ್ಯ, ಗೋಧಿ, ಕೆಂಪು ಕಮಲ, ಉದ್ದಿನಬೇಳೆ, ಹಸು ದಾನ ಮಾಡಬೇಕು. (ಸಾಂದರ್ಭಿಕ ಚಿತ್ರ)
6/ 8
ಸೂರ್ಯನನ್ನು ಬಲಪಡಿಸಲು ರೂಬಿ ಕಲ್ಲನ್ನು ಧರಿಸಬಹುದು. ಇದಲ್ಲದೆ ತಾಮ್ರ, ಲಾಲ್ಡಿ ಅಥವಾ ಸೂರ್ಯಕಾಂತ್ ಮಣಿಯನ್ನು ಸಹ ಧರಿಸಬಹುದು. ಇದನ್ನು ಸೂರ್ಯನ ಉಪರತ್ನ ಎಂದು ಹೇಳಲಾಗುತ್ತದೆ. (ಸಾಂದರ್ಭಿಕ ಚಿತ್ರ)
7/ 8
ಸೂರ್ಯ ದೇವನ ಮೆಚ್ಚುಗೆಗೆ ಪಾತ್ರವಾಗಲು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬೇಕು. ಇದೇ ದಿನ ಗಾಯತ್ರಿ ಮಂತ್ರವನ್ನು ಪಠಿಸುವುದು ಸಹ ಉತ್ತಮ. (ಸಾಂದರ್ಭಿಕ ಚಿತ್ರ)
8/ 8
ಭಾನುವಾರದಂದು, ಗೋವುಗಳ ಸೇವೆಯಿಂದಲೂ ಸೂರ್ಯನ ಗ್ರಹವು ಬಲಗೊಳ್ಳುತ್ತದೆ. ಹಸುವಿಗೆ ರೊಟ್ಟಿ, ಮೀನುಗಳಿಗೆ ಹಿಟ್ಟಿನ ಉಂಟೆ ಮತ್ತು ಇರುವೆಗಳಿಗೆ ಸಕ್ಕರೆ ನೀಡಬೇಕು. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)