ಬ್ರಹ್ಮ ದೇವಸ್ಥಾನ, ಪುಷ್ಕರ್: ರಾಜಸ್ಥಾನದ ಪುಷ್ಕರ್ನಲ್ಲಿರುವ ಬ್ರಹ್ಮ ದೇವಸ್ಥಾನವನ್ನು 14 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಏಕೈಕ ಬ್ರಹ್ಮ ದೇವಾಲಯವಾಗಿದ್ದು, ಇಲ್ಲಿನ ಪುಷ್ಕರ್ ಸರೋವರದಲ್ಲಿ ದೇವಿ ಸರಸ್ವತಿಯೊಂದಿಗೆ ಬ್ರಹ್ಮ ದೇವ ಯಜ್ಞ ಮಾಡಿದ್ದರು. ಈ ವೇಳೆ ಸರಸ್ವತಿ ದೇವಿಯು ಯಾವುದೋ ವಿಷಯಕ್ಕೆ ಕೋಪಗೊಂಡು ಈ ದೇವಾಲಯಕ್ಕೆ ಶಾಪ ನೀಡಿದ್ದರು ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ದೇವಾಲಯಕ್ಕೆ ವಿವಾಹಿತ ಪುರುಷರಿಗೆ ಅನುಮತಿ ನಿರಾಕರಿಸಲಾಗಿದೆ. ಆದರೂ ಹೋದರೆ ಅವರ ವೈವಾಹಿಕ ಜೀವನದಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತದೆ ಎನ್ನಲಾಗುತ್ತದೆ. ಇಲ್ಲಿ ಅವಿವಾಹಿತರಿಗೆ ಪ್ರವೇಶವಿದ್ದು, ವಿವಾಹಿತರಿಗೆ ನಿರ್ಬಂಧ ವಿಧಿಸಲಾಗಿದೆ.