Tirumala: ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆ, ಹೊಸ ವ್ಯವಸ್ಥೆ ಮಾಡಿದ ಟಿಟಿಡಿ

Tirumala: ಆಂಧ್ರಪ್ರದೇಶದ ಶ್ರೀ ವೆಂಕಟೇಶ್ವರ ಸ್ವಾಮಿಯ ಆವಾಸಸ್ಥಾನವಾದ ತಿರುಮಲದ ಪವಿತ್ರ ಗಿರಿಧಾಮದಲ್ಲಿ ಕಳೆದ ಮೂರು ದಿನಗಳಿಂದ ಬೆಟ್ಟದ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.

First published:

  • 19

    Tirumala: ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆ, ಹೊಸ ವ್ಯವಸ್ಥೆ ಮಾಡಿದ ಟಿಟಿಡಿ

    ರಾಜ್ಯ ಸರ್ಕಾರಗಳು ಘೋಷಿಸಿದ ಬೇಸಿಗೆ ರಜೆಯ ಕಾರಣದಿಂದ ಭಕ್ತರ ಸಂಖ್ಯೆ ಹೆಚ್ಚಾಗಿದ್ದು,. ಗುರುವಾರದಂದು ಸಾಮಾನ್ಯ ಸರತಿ, ವೈಕುಂಟಂ ಸರತಿ ಸಂಕೀರ್ಣ ಮತ್ತು ನಾರಾಯಣಗಿರಿ ಶೆಡ್‌ಗಳು ಸರ್ವದರ್ಶನಕ್ಕಾಗಿ ಎಸ್‌ಎಸ್‌ಡಿ ಟೋಕನ್‌ಗಳಿಲ್ಲದೆ ಭಕ್ತರಿಂದ ತುಂಬಿದ್ದವು

    MORE
    GALLERIES

  • 29

    Tirumala: ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆ, ಹೊಸ ವ್ಯವಸ್ಥೆ ಮಾಡಿದ ಟಿಟಿಡಿ

    ಅಲ್ಲದೇ, ಯಾತ್ರಾರ್ಥಿಗಳು ರಿಂಗ್ ರಸ್ತೆಯ ಶಿಲಾತೋರಣಂ ವರೆಗೆ ಸುಮಾರು ಎರಡು ಕಿ.ಮೀ ದೂರದವರೆಗೆ ನಿಂತಿದ್ದರು. ಇನ್ನು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧಿಕಾರಿಗಳು ಸರ್ವದರ್ಶನ ವರ್ಗದ ಅಡಿಯಲ್ಲಿ ಪ್ರಧಾನ ದೇವರ ದರ್ಶನ ಪಡೆಯಲು 36 ಗಂಟೆಗಳ ಕಾಲ ಕಾಯಬೇಕಾಗಿತ್ತು ಎಂದು ತಿಳಿಸಿದ್ದಾರೆ.

    MORE
    GALLERIES

  • 39

    Tirumala: ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆ, ಹೊಸ ವ್ಯವಸ್ಥೆ ಮಾಡಿದ ಟಿಟಿಡಿ

    ಇದರ ಮಧ್ಯೆ ಗುರುವಾರ ಮಧ್ಯಾಹ್ನ ತಿರುಮಲದಲ್ಲಿ ಒಂದು ಗಂಟೆ ಕಾಲ ಸುರಿದ ಭಾರಿ ಮಳೆಗೆ ಶ್ರೀವಾರಿ ದೇವಸ್ಥಾನದ ಮಾದ ಬೀದಿಗಳಲ್ಲಿ ಮಳೆ ನೀರು ನುಗ್ಗಿದ ಕಾರಣ ಸ್ವಲ್ಪ ಸಮಸ್ಯೆ ಸಹ ಆಗಿ, ಭಕ್ತಾಧಿಗಳು ಸ್ವಲ್ಪ ಕಾಲ ಪರದಾಡಬೇಕಾಗಿ ಬಂದಿತ್ತು.

    MORE
    GALLERIES

  • 49

    Tirumala: ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆ, ಹೊಸ ವ್ಯವಸ್ಥೆ ಮಾಡಿದ ಟಿಟಿಡಿ

    ಟಿಟಿಡಿ ಅಧಿಕಾರಿಗಳ ಪ್ರಕಾರ, ಬುಧವಾರ ತಿರುಮಲದ ಮುಖ್ಯ ದೇವಾಲಯಕ್ಕೆ 79,207 ಭಕ್ತರು ಭೇಟಿ ನೀಡಿದ್ದು, ಹುಂಡಿಯಲ್ಲಿ ಭಕ್ತರಿಂದ 3.19 ಕೋಟಿ ರೂ ಕಾಣಿಕೆ ಸಂಗ್ರಹವಾಗಿದೆ. ಬೇಸಿಗೆ ರಜೆಯ ಕಾರಣದಿಂದ ಹೆಚ್ಚಿನ ಜನ ಬರುತ್ತಿದ್ದು, ದೇಣಿಗೆ ಸಹ ಹೆಚ್ಚಾಗುತ್ತಿದೆ.

    MORE
    GALLERIES

  • 59

    Tirumala: ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆ, ಹೊಸ ವ್ಯವಸ್ಥೆ ಮಾಡಿದ ಟಿಟಿಡಿ

    ಸಾಮಾನ್ಯವಾಗಿ ಬಾಲಾಜಿಯ ದರ್ಶನಕ್ಕೆ ಬರುವ ಭಕ್ತರಿಗೆ ದಿನಕ್ಕೆ ಸುಮಾರು 18 ರಿಂದ 19 ಗಂಟೆಗಳ ಕಾಲ ಮಾತ್ರ ಪ್ರಧಾನ ದೇವರ ದರ್ಶನವನ್ನು ಪಡೆಯಲು ಅವಕಾಶ ನೀಡಲಾಗಿದೆ. ಆದರೆ ಈ ಸಮಯದಲ್ಲಿ 2 ರಿಂದ 3 ಗಂಟೆಗಳ ಕಾಲ ವಿಐಪಿಗಳಿಗೆ ಮತ್ತು ಉಳಿದ 15 ಗಂಟೆಗಳ ಕಾಲ ಸಾಮಾನ್ಯ ಭಕ್ತರಿಗೆ ದರ್ಶನಕ್ಕೆ ನಿಗದಿಪಡಿಸಲಾಗಿದೆ.

    MORE
    GALLERIES

  • 69

    Tirumala: ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆ, ಹೊಸ ವ್ಯವಸ್ಥೆ ಮಾಡಿದ ಟಿಟಿಡಿ

    ಬೇಸಿಗೆ ರಜೆಯ ಕಾರಣ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿದ್ದು, ಕಾಯುವ ಭಕ್ತರಿಗೆ ನಿರೀಕ್ಷಣಾ ಕೊಠಡಿಗಳನ್ನು ಒದಗಿಸುವ ಹಿಂದಿನ ವ್ಯವಸ್ಥೆಯನ್ನು ಜಾರಿಗೆ ತರಲು ಟಿಟಿಡಿ ವ್ಯವಸ್ಥೆ ಮಾಡುತ್ತಿದೆ. ಈ ವ್ಯವಸ್ಥೆ ಜಾರಿಗೆ ಬಂದ ಅನೇಕ ಭಕ್ತರಿಗೆ ಸಹಾಯವಾಗುತ್ತದೆ.

    MORE
    GALLERIES

  • 79

    Tirumala: ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆ, ಹೊಸ ವ್ಯವಸ್ಥೆ ಮಾಡಿದ ಟಿಟಿಡಿ

    ಅಲ್ಲದೇ, ಈ ವ್ಯವಸ್ಥೆ ಜಾರಿಗೆ ಬಂದ ಮೇಲೆ ಅಧಿಕಾರಿಗಳು 30 ಗಂಟೆಗಳ ಕಾಲ ನಿರೀಕ್ಷಣಾ ಮಂದಿರದಲ್ಲಿ ಇರುವ ಭಕ್ತರಿಗೆ ಅನ್ನ ಪ್ರಸಾದ (ಆಹಾರ ಪದಾರ್ಥ) ನೀಡಲಿದ್ದಾರೆ. ಬೆಳಗ್ಗೆ 7 ಗಂಟೆಗೆ ಉಪಾಹಾರದ ವ್ಯವಸ್ಥೆ ಮತ್ತು ಮಧ್ಯಾಹ್ನ 12 ಗಂಟೆಗೆ ಅನ್ನ ಪ್ರಸಾದವನ್ನು ನೀಡಲಾಗುತ್ತದೆ. ಮಧ್ಯೆ ಕಾಯುವ ಭಕ್ತರಿಗೆ ಹಾಲು ಸರಬರಾಜು ಮಾಡಲಾಗುತ್ತದೆ.

    MORE
    GALLERIES

  • 89

    Tirumala: ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆ, ಹೊಸ ವ್ಯವಸ್ಥೆ ಮಾಡಿದ ಟಿಟಿಡಿ

    ಇದರ ಜೊತೆಗೆ ಭಕ್ತರಿಗೆ ಸಂಜೆ ತಿಂಡಿ, ಅನ್ನ ಪ್ರಸಾದದ ವ್ಯವಸ್ಥೆಯನ್ನು ರಾತ್ರಿ ನಿರೀಕ್ಷಣಾ ಮಂದಿರದಲ್ಲಿ ಮಾಡಲಾಗಿದ್ದು, ಕಾಯುವ ಸಭಾಂಗಣಗಳಲ್ಲಿ ಟೆಲಿವಿಷನ್ ಸೆಟ್‌ಗಳನ್ನು ಅಳವಡಿಸಲಾಗಿದ್ದು, ಕಾಯುವ ಭಕ್ತರಿಗೆ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನೋಡಲು ಅವಕಾಶ ನೀಡಲಾಗುತ್ತದೆ.

    MORE
    GALLERIES

  • 99

    Tirumala: ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆ, ಹೊಸ ವ್ಯವಸ್ಥೆ ಮಾಡಿದ ಟಿಟಿಡಿ

    ಭಕ್ತರು ನಿರೀಕ್ಷಣಾ ಸಭಾಂಗಣಗಳಲ್ಲಿ ಭಕ್ತಿ ಪುಸ್ತಕಗಳನ್ನು ತೆಗೆದುಕೊಂಡು ಹೋಗಲು ಸಹ ಅವಕಾಶ ನೀಡಲಾಗುತ್ತಿದ್ದು, ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಮಾತ್ರ ತೆಗೆದುಕೊಂಡು ಹೋಗಬಹುದಾಗಿದೆ. ಅಧಿಕಾರಿಗಳು ರಾಮಕೋಟಿಯ ಪುಸ್ತಕಗಳನ್ನು ಸಹ ಒಳಗೆ ತೆಗೆದುಕೊಂಡು ಹೋಗಲು ಬಿಡುತ್ತಾರೆ.

    MORE
    GALLERIES