ಸವಾಲುಗಳನ್ನು ಧೈರ್ಯವಾಗಿ ಎದುರಿಸಿ: ಸವಾಲುಗಳನ್ನು ದೃಢವಾಗಿ ಎದುರಿಸಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ. ಸವಾಲುಗಳಿಗೆ ಸ್ವಲ್ಪವೂ ಹೆದರಬೇಡಿ. ಯಾರು ಸವಾಲುಗಳನ್ನು ಸ್ವೀಕರಿಸುವುದಿಲ್ಲವೋ ಮತ್ತು ಭಯದಿಂದ ಕೆಲಸವನ್ನು ಮಧ್ಯದಲ್ಲಿಯೇ ಬಿಟ್ಟುಬಿಡುತ್ತಾರೋ ಅವರು ಎಂದಿಗೂ ಯಶಸ್ಸನ್ನು ಪಡೆಯುವುದಿಲ್ಲ. ಸವಾಲುಗಳನ್ನು ಎದುರಿಸುವುದರಿಂದ ಆತ್ಮವಿಶ್ವಾಸವನ್ನು ಬೆಳೆಸುತ್ತದೆ.
ಸಮಯಕ್ಕೆ ಪ್ರಾದನ್ಯತೆ ನೀಡಿ: ಸಮಯ ನಿರ್ವಹಣೆಯು ಯಶಸ್ಸಿಗೆ ದೊಡ್ಡ ಕೊಡುಗೆ ನೀಡುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತಾರೆ. ಪ್ರತಿ ಕ್ಷಣವೂ ಮುಖ್ಯ. ಸಮಯವನ್ನು ವ್ಯರ್ಥ ಮಾಡುವವರು, ಗುರಿಯನ್ನು ಸಾಧಿಸಲು ಕಷ್ಟ ಎದುರಿಸಬೇಕಾಗುತ್ತದೆ. ಪ್ರತಿ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಉತ್ತಮ ಗುಣ. ಸಮಯ ನಿರ್ವಹಣೆಯ ಮಾರ್ಗವನ್ನು ಅರ್ಥಮಾಡಿಕೊಂಡ ವ್ಯಕ್ತಿಗೆ ಗುರಿ ಸಾಧನೆ ಕಷ್ಟವಲ್ಲ