Dream Meaning: ಈ ರೀತಿ ಕನಸು ಬಿದ್ರೆ ನಿಮ್ಮ ನಸೀಬು ಬದಲಾಗುತ್ತಂತೆ
Meaning of Dream: ಪ್ರತಿಯೊಬ್ಬರೂ ನಿದ್ರೆಯ ಸಮಯದಲ್ಲಿ ಕನಸು ಕಾಣುತ್ತಾರೆ. ನಾವು ಮಲಗಿದಾಗ ಅನೇಕ ರೀತಿಯ ಕನಸುಗಳು ಬರುತ್ತವೆ. ಕೆಲವು ಕನಸುಗಳು ನಮ್ಮನ್ನು ಹೆದರಿಸುತ್ತವೆ. ಕೆಲವು ಕನಸುಗಳು ನಮಗೆ ಒಳ್ಳೆಯ ಸೂಚನೆ ನೀಡುತ್ತದೆ. ಇನ್ನು ಭವಿಷ್ಯದಲ್ಲಿ ನಾವು ಶ್ರೀಮಂತರಾಗುತ್ತೇವೆ ಎಂದು ಸೂಚಿಸುವ ಕೆಲವು ಕನಸುಗಳ ಬಗ್ಗೆ ಮಾಹಿತಿ ಇಲ್ಲಿದೆ.
ನಾವು ಎಚ್ಚರವಾಗಿರುವಾಗ ಸಹ ಕೆಲವೊಮ್ಮೆ ಕನಸಿನ ಲೋಕದಲ್ಲಿ ಮುಳುಗಿಬಿಡುತ್ತೇವೆ. ಅದನ್ನು ನಿಯಂತ್ರಿಸಬಹುದು. ಆದರೆ ರಾತ್ರಿ ನಿದ್ರೆಯಲ್ಲಿ ಬರುವ ಕನಸುಗಳನ್ನು ನಿಯಂತ್ರಿಸಲಾಗುವುದಿಲ್ಲ. ಸಾಮಾನ್ಯವಾಗಿ ನಾವು ಆರೋಗ್ಯವಾಗಿದ್ದಾಗ ಒಳ್ಳೆಯ ಕನಸುಗಳನ್ನು ಕಾಣುತ್ತೇವೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವಾಗ ದುಃಸ್ವಪ್ನಗಳು ಕಾಡುತ್ತವೆ.
2/ 8
ಮನಶ್ಶಾಸ್ತ್ರಜ್ಞರ ಪ್ರಕಾರ ಕೆಲವೊಮ್ಮೆ ಕನಸುಗಳು ನಮ್ಮ ಭವಿಷ್ಯವನ್ನು ಪ್ರತಿನಿಧಿಸುತ್ತವೆ. ಮುಂದೆ ಜೀವನದಲ್ಲಿ ಏನಾಗಲಿದೆ ಎಂಬುದರ ಕುರಿತು ಕೆಲವು ಸೂಚನೆಗಳನ್ನು ನೀಡುತ್ತವೆ.
3/ 8
ಎಷ್ಟೋ ಸಲ ಎದ್ದಾಗ ನಾವು ಕಂಡಿದ್ದ ಕನಸನ್ನೇ ಮರೆತುಬಿಡುತ್ತೇವೆ. ಕೆಲವೊಮ್ಮೆ ಕನಸು ಚೆನ್ನಾಗಿ ನೆನಪಿರುತ್ತದೆ. ಕೆಲವೊಮ್ಮೆ ಕನಸಿನಲ್ಲಿ ಕಾಣುವ ವ್ಯಕ್ತಿಗಳು ಮತ್ತು ವಸ್ತುಗಳನ್ನು ನಾವು ಗುರುತಿಸಬಹುದು. ಅಷ್ಟರ ಮಟ್ಟಿಗೆ ಕನಸು ನಮ್ಮನ್ನ ಕಾಡುತ್ತವೆ.
4/ 8
ಕೆಲವು ಕನಸುಗಳು ಭವಿಷ್ಯದಲ್ಲಿ ನೀವು ಶ್ರೀಮಂತರಾಗುತ್ತೀರಿ ಎಂದು ಸೂಚಿಸುತ್ತವೆ. ಆ ಕನಸುಗಳು ಯಾವುವು ಹಾಗೂ ಅದರಿಂದ ಏನೆಲ್ಲಾ ಲಾಭ ಆಗಲಿದೆ ಎಂಬುದು ಇಲ್ಲಿದೆ.
5/ 8
ಕಮಲದ ಹೂವು: ನಿಮ್ಮ ಕನಸಿನಲ್ಲಿ ಕಮಲದ ಹೂವು ಕಂಡರೆ ಮುಂದಿನ ದಿನಗಳಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲೆ ಇರಲಿದೆ ಎಂದರ್ಥ. ಅಲ್ಲದೇ, ಜೀವನದಲ್ಲಿ ನೀವು ಸಂಪತ್ತನ್ನು ಪಡೆಯಲಿದ್ದೀರಿ ಎಂದು ಹೇಳಲಾಗುತ್ತದೆ.
6/ 8
ಜೇನುನೊಣಗಳು: ನಿಮ್ಮ ಕನಸಿನಲ್ಲಿ ಜೇನುನೊಣವನ್ನು ಕಂಡರೆ ಅದು ತುಂಬಾ ಶುಭ ಸಂಕೇತ ಎನ್ನಲಾಗುತ್ತದೆ. ಅದರಲ್ಲೂ ಜೇನುನೊಣಗಳು ಸಿಹಿಯಾದ ಮಕರಂದ ಹೀರುವುದನ್ನ ನೋಡುವುದು ಎಂದರೆ ನಿಮ್ಮ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ ಎಂದು ಅರ್ಥ.
7/ 8
ಕಮಲದ ಹೂವು ಮತ್ತು ಜೇನುನೊಣಗಳು ಪ್ರತಿಯೊಬ್ಬರ ಕನಸಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೇ ಮನೆಯ ಹತ್ತಿರ ಕೂಡ ಅದು ಸುಲಭವಾಗಿ ನಿಮ್ಮ ಕಣ್ಣಿಗೆ ಬೀಳುವುದಿಲ್ಲ. ಆದರೆ, ಸ್ವಪ್ನ ಶಾಸ್ತ್ರದ ಪ್ರಕಾರ ಇದನ್ನು ನೋಡಿದರೆ ಅದೃಷ್ಟವಂತರು ಎನ್ನಲಾಗುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)