ಸನಾತನ ಧರ್ಮದಲ್ಲಿ ಯಾವುದೇ ದೇವರ ಪೂಜೆಯು ದೀಪವನ್ನು ಹಚ್ಚದೆ ಪೂರ್ಣವಾಗುವುದಿಲ್ಲ. ಬೆಳಗ್ಗೆ ಮತ್ತು ಸಂಜೆ ಮನೆಯ ಮುಖ್ಯದ್ವಾರದಲ್ಲಿ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಬರುವುದಿಲ್ಲ. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ.
2/ 8
ಹಿಂದೂ ಧರ್ಮದಲ್ಲಿ, ಪ್ರತಿ ಪೂಜೆಯಲ್ಲಿ ದೀಪವನ್ನು ಬೆಳಗಿಸುವುದು ಕಡ್ಡಾಯ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ. ದೀಪವಿಲ್ಲದ ಪೂಜೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ.
3/ 8
ಗ್ರಹಗಳನ್ನು ಅಥವಾ ದೇವತೆಗಳನ್ನು ಪೂಜಿಸುವಾಗ ದೀಪವನ್ನು ಹಚ್ಚುವುದು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ಆಗುವ ಪ್ರಯೋಜನಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ವಿವರಿಸಲಾಗಿದೆ.
4/ 8
ಕತ್ತಲೆಯನ್ನು ಓಡಿಸುವ ಬೆಳಕು ಅರಿವಿನ ಬೆಳಕು. ಇದು ಮನೆ ಮನಕ್ಕೆ ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆ ಇದೆ. ಹಿಂದೂ ಧರ್ಮಗ್ರಂಥಗಳಲ್ಲಿ ಅನೇಕ ವಿಧದ ದೀಪಗಳನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ಪಂಚಮುಖಿ ದೀಪವೂ ಒಂದು.
5/ 8
ಜ್ಯೋತಿಷ್ಯ ಶಾಸ್ತ್ರದಲ್ಲೂ ಪಂಚಮುಖಿ ದೀಪ ಬಹಳ ಉಪಯುಕ್ತ. ಅದಕ್ಕೆ ಸಂಬಂಧಿಸಿದ ಕೆಲವು ಪರಿಹಾರಗಳೂ ಇವೆ. ಈ ಕುರಿತು ಜ್ಯೋತಿಷಿ ಭೋಪಾಲ್ ನಿವಾಸಿ ಹಿತೇಂದ್ರ ಕುಮಾರ್ ಶರ್ಮಾ ಪರಿಹಾರ ಮಾರ್ಗ ತಿಳಿಸಿದ್ದಾರೆ
6/ 8
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಮಂಗಳವಾರ ಹನುಮಂತನ ಮುಂದೆ ಪಂಚಮುಖಿ ದೀಪವನ್ನು ಬೆಳಗಿಸುವುದರಿಂದ ಮನೆಗೆ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ. ಭಜರಂಗಬಲಿ ಆಶೀರ್ವಾದ ಸಿಗಲಿದೆ
7/ 8
ಪಂಚಮುಖಿ ದೀಪವನ್ನು ಯಾವಾಗಲೂ ಹಸುವಿನ ಶುದ್ಧ ತುಪ್ಪದಲ್ಲಿ ಮಾತ್ರ ಬೆಳಗಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿನ ವಾಸ್ತುದೋಷಗಳು ನಿವಾರಣೆಯಾಗಿ ಮನೆಯು ಸುಖಮಯವಾಗುತ್ತದೆ.
8/ 8
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪೂಜೆಯ ನಂತರ ಪಂಚಮುಖಿ ದೀಪವನ್ನು ಮನೆಯ ಮುಖ್ಯದ್ವಾರದ ಎರಡೂ ಬದಿಗಳಲ್ಲಿ ಬೆಳಗಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿ ಕೃಪೆ ಸಿಗಲಿದೆ. ಮನೆಯಲ್ಲಿ ಹಣ ಮತ್ತು ಆಹಾರದ ಕೊರತೆ ಎಂದಿಗೂ ಇರುವುದಿಲ್ಲ.