Vaastu Tips: ದೇವರ ಮನೆ ವಿಚಾರದಲ್ಲಿ ಈ ವಿಷಯಗಳನ್ನು ನಿರ್ಲಕ್ಷ್ಯಿಸಬೇಡಿ
ಮನೆಯಲ್ಲಿನ ಪೂಜಾ ಸ್ಥಳದಲ್ಲಿ(Puja Room) ಮಾನಸಿಕ ಶಾಂತಿಯನ್ನು ಕೊಡುತ್ತವೆ. ಇಂತಹ ಪೂಜಾ ಸ್ಥಳಗಳ ನಿರ್ಮಾಣ ಮಾಡುವಾಗ ಕೆಲವು ವಿಷಯಗಳನ್ನು ಮರೆತು ಬಿಡುತ್ತೇವೆ. ಇಂತಹ ತಪ್ಪು ಅಥವಾ ವಾಸ್ತು ದೋಷದಿಂದಾಗಿ ಮನೆಯ ನೆಮ್ಮದಿ ಕೆಡುವ ಸಾಧ್ಯತೆ ಇದೆ. ಈ ಹಿನ್ನಲೆ ಪೂಜಾ ಸ್ಥಳಗಳು ವಾಸ್ತು ಪ್ರಕಾರವಾಗಿ (Puja Room Vastu) ನಿರ್ಮಿಸಬೇಕು. ಜೊತೆಗೆ ದೇವರ ವಿಗ್ರಹಗಳ ಪ್ರತಿಷ್ಠಾಪನೆ ವೇಳೆ ಕೆಲವು ನಿಯಮ ಅನುಸರಿಸುವುದು ಅವಶ್ಯ.
ಮನೆಯಲ್ಲಿ ಪೂಜೆಗಾಗಿ ಪ್ರತ್ಯೇಕವಾಗಿ ಪೂಜಾಗೃಹವನ್ನು ನಿರ್ಮಿಸಬೇಕು. ಒಂದು ವೇಳೆ ಸಾಧ್ಯವಾಗದಿದ್ದರೂ, ಒಂದು ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ಪೂಜಾ ವಿಧಿವಿಧಾನ ಆಚರಿಸಬೇಕು. ಕುಳಿತು ಪೂಜೆ ಮಾಡುವ ಸ್ಥಳವು ನೆಲದಿಂದ ಸ್ವಲ್ಪ ಎತ್ತರದಲ್ಲಿರಬೇಕು. ಪೂಜಾ ಕೋಣೆಯನ್ನು ಈಶಾನ್ಯ ದಿಕ್ಕಿಗೆ ನಿರ್ಮಿಸುವುದು ಉತ್ತಮ
2/ 5
ಪೂಜೆಯ ಪ್ರವೇಶದ್ವಾರದಲ್ಲಿ ಕಾಣುವ ಮಂಗಳಕರ ಚಿಹ್ನೆಯನ್ನು (ಸ್ವಸ್ತಿಕ್) ತಪ್ಪು ದಿಕ್ಕಿನಲ್ಲಿ ಹಾಕಬಾರದು. ಗಣಪತಿ ಮತ್ತು ದುರ್ಗೆಯ ವಿಗ್ರಹಗಳನ್ನು ದಕ್ಷಿಣಾಭಿಮುಖವಾಗಿ ಇಟ್ಟರೆ ಶುಭ. ಇದರೊಂದಿಗೆ, ಪೂಜಾ ಮನೆಯಲ್ಲಿ ಶ್ರೀ ಯಂತ್ರ ಅಥವಾ ಕುಬೇರ ಯಂತ್ರವನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
3/ 5
ಶೌಚಾಲಯದ ಬಳಿ ಪೂಜಾ ಸ್ಥಳವನ್ನು ನಿರ್ಮಿಸಬಾರದು. ಇದರಿಂದ ವಾಸ್ತು ದೋಷಗಳು ಉಂಟಾಗುತ್ತದೆ. ಶೌಚಾಲಯ ದೇವರ ಮನೆ ಹಿಂದೆ ಮುಂದೆ ಇರದಂತೆ ನೋಡಿಕೊಳ್ಳಬೇಕು.
4/ 5
ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ದೇವಸ್ಥಾನವಿದ್ದರೆ ಅಶುಭ ಫಲ ಸಿಗುತ್ತದೆ. ದೇವಸ್ಥಾನದ ನೆರಳು ಬೀಳುವ ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿರುವುದಿಲ್ಲ.
5/ 5
ದೇವಸ್ಥಾನದ ಮೇಲ್ಭಾಗದ ನೆರಳು ಮನೆಯಲ್ಲಿ ಬಿದ್ದರೆ ಆ ಮನೆಯವರು ಋಣಿಯಾಗುತ್ತಾರೆ ಎಂಬ ನಂಬಿಕೆ ಇದೆ.