ಪ್ರತಿ ವರ್ಷ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ನಂಬಿಕೆಯ ಪ್ರಕಾರ, ಈ ದಿನದಂದು ಭಗವಾನ್ ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುವುದರಿಂದ ವೈವಾಹಿಕ ಜೀವನದಲ್ಲಿ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಇದಲ್ಲದೇ, ಮಹಾ ಶಿವರಾತ್ರಿಯ ಹಬ್ಬವು ಮದುವೆ ವಿಳಂಬ ಆಗುತ್ತಿರುವವರಿಗೆ ಅಥವಾ ಪ್ರೀತಿಸಿದ ವ್ಯಕ್ತಿಯನ್ನು ಮದುವೆ ಆಗಲು ಪ್ರಯತ್ನಿಸುತ್ತಿರುವವರಿಗೆ ಉತ್ತಮ ದಿನ ಎನ್ನಲಾಗುತ್ತದೆ.