ಮರಗಳು, ಸಸ್ಯಗಳು, ಪ್ರಾಣಿಗಳು ಮತ್ತು ಪಕ್ಷಿಗಳನ್ನು ಹಿಂದೂ ಧರ್ಮದಲ್ಲಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಸಹ ಪ್ರಾಣಿ-ಪಕ್ಷಿಗಳಿಗೂ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಕೆಲವೊಮ್ಮೆ ನಮ್ಮ ಮನೆಗಳಲ್ಲಿ ಹಕ್ಕಿಗಳು ಗೂಡು ಕಟ್ಟುತ್ತವೆ. ಅವು ಸಾಮಾನ್ಯವಾಗಿ ಕಿಟಕಿಗಳು, ಕಟ್ಟಡಗಳಲ್ಲಿ ಮತ್ತು ಟ್ರಾಫಿಕ್ ಮುಕ್ತ ಪ್ರದೇಶಗಳಲ್ಲಿ ಗೂಡುಕಟ್ಟುತ್ತವೆ. ನಾವು ಇದನ್ನು ಹಲವಾರು ಬಾರಿ ನೋಡಿ ಆನಂದಿಸುತ್ತೇವೆ. ಆದರೆ ಜ್ಯೋತಿಷ್ಯ ಈ ಬಗ್ಗೆ ಏನು ಹೇಳುತ್ತದೆ ಗೊತ್ತಾ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಪಕ್ಷಿಗಳು, ಪಾರಿವಾಳದ ಗೂಡುಗಳು ಅಥವಾ ಜೇನುನೊಣಗಳು ನಮಗೆ ಕೆಲವು ಪ್ರಮುಖ ಮಾಹಿತಿಗಳನ್ನು, ಅದೃಷ್ಟ, ಸಮಸ್ಯೆಯನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಶಾಸ್ತ್ರವು ಪಕ್ಷಿಗಳಿಗೆ ಸಂಬಂಧಿಸಿದ ಕೆಲವು ಶುಭ ಮತ್ತು ಅಶುಭ ಸಂಕೇತಗಳನ್ನು ಸೂಚಿಸುತ್ತವೆ. ಹಾಗಿದ್ರೆ ಮನೆಯಲ್ಲಿ ಹಕ್ಕಿಗಳು ಗೂಡು ಕಟ್ಟಿದ್ರೆ ಒಳ್ಳೆಯದಾ, ಯಾವ ಹಕ್ಕಿ ಗೂಡು ಕಟ್ಟಿದ್ರೆ ಒಳ್ಳೆಯದು ಈ ಎಲ್ಲಾ ಮಾಹಿತಿ ಕೆಳಗಿನ ಲೇಖನದಲ್ಲಿದೆ ಓದಿ.