ಸೋಮಾವತಿ ಅಮಾವಾಸ್ಯೆಯಂದು ಪಾರ್ವತಿ ಮತ್ತು ಶಿವನನ್ನು ಪೂಜಿಸುವುದು ವಿಶೇಷ ಲಾಭವನ್ನು ನೀಡುತ್ತದೆ. ಹಾಗೆಯೇ ಈ ದಿನ ಮಹಿಳೆಯರು ಶಿವಲಿಂಗಕ್ಕೆ ಹಸಿ ಹಾಲಿನಿಂದ ಅಭಿಷೇಕ ಮಾಡಬೇಕು. ಇದರ ಜೊತೆ ಪಾರ್ವತಿಗೆ ಸುಗಂಧ ದ್ರವ್ಯಗಳನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಅಪಾರ ಸಂಪತ್ತು ಸಿಗುತ್ತದೆ. ಇದಲ್ಲದೇ ಪತಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.