Numerology:ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಆರೋಗ್ಯದ ಬಗ್ಗೆ ತಿಳಿಯಿರಿ
ಸಂಖ್ಯಾಶಾಸ್ತ್ರವು ಜ್ಯೋತಿಷ್ಯದಷ್ಟು ವ್ಯಾಪಕವಾಗಿ ಪ್ರಚಾರವಾಗಿಲ್ಲವಾದರೂ ಸಹ, ಪ್ರಪಂಚದಾದ್ಯಂತ ಅಂಕಿಅಂಶಗಳನ್ನು ನಂಬುವ ಮತ್ತು ಅದರ ಅನುಸಾರ ಜೀವನದ ನಿರ್ಧಾರಗಳನ್ನು ತೆಗದುಕೊಳ್ಳುವ ಬಹಳಷ್ಟು ಜನರಿದ್ದಾರೆ. ಅಲ್ಲದೇ, ಸಂಖ್ಯಾಶಾಸ್ತ್ರದ ಪ್ರಕಾರ, ಯಾರಿಗೆ ಯಾವ ಆರೋಗ್ಯ ಸಮಸ್ಯೆಗಳು ಬರಬಹುದು ಎಂಬುದನ್ನ ತಿಳಿಯಬಹುದು.
ಮುಂದಿನ ದಿನಗಳಲ್ಲಿ ನಿಮಗೆ ಯಾವ ಆರೋಗ್ಯ ಸಮಸ್ಯೆ ಬರುತ್ತದೆ ಎಂಬುದನ್ನ ನೀವು ಮೊದಲೇ ಪತ್ತೆ ಮಾಡಿದರೆ .ನೀವು ಅದನ್ನು ತಡೆಯಬಹುದು. ಅದಕ್ಕೆ ಸಂಖ್ಯಾಶಾಸ್ತ್ರ ಉಪಯುಕ್ತ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಸಂಖ್ಯಾಶಾಸ್ತ್ರ ತಜ್ಞರು ಹೇಳುವಂತೆ ಹುಟ್ಟಿದ ದಿನಾಂಕವನ್ನು ಅವಲಂಬಿಸಿ ಯಾವ ದಿನಾಂಕವು ಯಾವ ರೋಗವನ್ನು ಸೂಚಿಸುತ್ತದೆ ಎಂಬುದನ್ನ ತಿಳಿಯಬಹುದು.
2/ 10
ತಿಂಗಳು ಯಾವುದಾದರೂ ಆಗಿರಬಹುದು. ಆ ತಿಂಗಳ 1, 10, 19 ಮತ್ತು 28 ರಂದು ಜನಿಸಿದವರಿಗೆ, ಸೂರ್ಯನು ತಲೆಯಾಗಿರುತ್ತಾನೆ ಮತ್ತು ರೋಗಗಳು ಹೆಚ್ಚಿರುವುದಿಲ್ಲ.ಆದರೂ ಸಹ ಹೃದಯಕ್ಕೆ ಸಂಬಂಧಿಸಿದಂತೆ ಕಾಳಜಿಯನ್ನು ವಹಿಸಬೇಕು. ದೇಹದಲ್ಲಿ ಕೊಬ್ಬು ಬರದಂತೆ ನೋಡಿಕೊಳ್ಳಿ. ವಿಟಮಿನ್ ಸಿ ಇರುವ ಆಹಾರವನ್ನು ಚೆನ್ನಾಗಿ ಸೇವನೆ ಮಾಡಬೇಕು.
3/ 10
2, 11, 20, 29 ರಂದು ಜನಿಸಿದವರು ಹೊಟ್ಟೆ ನೋವು ಮತ್ತು ಇತರ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅವರಿಗೆ ಒತ್ತಡ ಹೆಚ್ಚಾಗಿರುತ್ತದೆ. ಧೈರ್ಯ ಇರಬೇಕು.
4/ 10
3, 12, 21, 30 ರಂದು ಜನಿಸಿದ ಜನರು ಎದೆ ಮತ್ತು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಾರೆ. ಇದಲ್ಲದೆ, ಮಧುಮೇಹ ಉಂಟಾಗುವ ಅಪಾಯವಿದೆ. ಚರ್ಮದ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬಾರದು. ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಮಾತ್ರ ಉತ್ತಮ ಆರೋಗ್ಯ ಸಾಧ್ಯ.
5/ 10
4, 13, 22, 31 ರಂದು ಜನಿಸಿದ ಜನರು ಹೆಚ್ಚು ಒತ್ತಡಕ್ಕೊಳಗಾಗುತ್ತಾರೆ. ಉಸಿರಾಟದ ಸಮಸ್ಯೆ ಉಂಟಾಗುತ್ತದೆ ಕೆಮ್ಮು ಮತ್ತು ಶೀತಗಳು ಬರುತ್ತಲೇ ಇರುತ್ತವೆ. ಹೃದಯದ ತೊಂದರೆಗಳಾಗುತ್ತದೆ ಹೊಸ ಹೊಸ ರೋಗಗಳಿಗೆ ತುತ್ತಾಗುವ ಅಪಾಯವಿದೆ.
6/ 10
5,14,23 ರಂದು ಜನಿಸಿದವರ ಮೇಲೆ ಒತ್ತಡವಿರುತ್ತದೆ. ನಿದ್ದೆ ಬರುವುದಿಲ್ಲ ಯಕೃತ್ತಿನ ಆರೋಗ್ಯ ಹಾಳಾಗುವ ಅಪಾಯವಿದೆ. ಒತ್ತಡವನ್ನು ಕಡಿಮೆ ಮಾಡಬೇಕು. ಧ್ಯಾನ ಮತ್ತು ಯೋಗದಂತಹ ಕೆಲಸಗಳನ್ನು ಮಾಡುವುದು ತುಂಬಾ ಒಳ್ಳೆಯದು.
7/ 10
ನೀವು 6, 15, 24 ರಂದು ಜನಿಸಿದರೆ , ವಯಸ್ಸಿಗೆ ತಕ್ಕಂತೆ ಹೃದಯದ ಸಮಸ್ಯೆಗಳು ಬರುತ್ತವೆ. ಮಹಿಳೆಯರಿಗೆ ಹೆಚ್ಚಿನ ಅಪಾಯವಿದೆ. ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಈ ದಿನಾಂಕಗಳಲ್ಲಿ ಜನಿಸಿದವರು ಇತರರಿಗಿಂತ ಹೆಚ್ಚಿನ ಆರೋಗ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
8/ 10
7, 16, 25 ರಂದು ಜನಿಸಿದವರಿಗೆ ಅಜೀರ್ಣ ಸಮಸ್ಯೆ ಇರುತ್ತದೆ. ವಯಸ್ಸಾದಂತೆ ಸಂಧಿವಾತದ ಸಮಸ್ಯೆ ಉಂಟಾಗುತ್ತದೆ. ಅಸಹನೆ ಹೆಚ್ಚಾಗುತ್ತದೆ. ಧ್ಯಾನ ಮಾಡುವುದು ಮುಖ್ಯ.
9/ 10
8, 17, 26 ರಂದು ಜನಿಸಿದವರಿಗೆ ತಲೆನೋವು ಬರುತ್ತದೆ. ಬಿಪಿ, ಹಲ್ಲುನೋವು ಇದ್ದೇ ಇರುತ್ತದೆ. ಯಕೃತ್ತಿನ ಹಾನಿ, ಕರುಳಿನ ಸಮಸ್ಯೆಗಳು ಸಾಮಾನ್ಯವಾಗುತ್ತದೆ. ವರ್ಕೌಟ್ ಮತ್ತು ವ್ಯಾಯಾಮಗಳನ್ನು ಮಾಡುವುದು ಬಹಳ ಮುಖ್ಯ.
10/ 10
9, 18, 27 ರಂದು ಜನಿಸಿದ ಜನರು ಸೂಕ್ಷ್ಮವಾಗಿರುತ್ತಾರೆ. ಅವರಿಗೆ ವಿವಿಧ ಜ್ವರ ಬರುವ ಸಾಧ್ಯತೆ ಇದೆ. ಗಂಟಲು ನೋವಿನ ಸಮಸ್ಯೆಗಳಾಗುತ್ತದೆ. ಮೂತ್ರಪಿಂಡ ಹಾಳಾಗಬಹುದು. ಒಳ್ಳೆಯ ಆಹಾರ ಸೇವಿಸಿ.