Garuda Purana: ಗರುಡ ಪುರಾಣದಂತೆ ನಿಮ್ಮ ದಿನ ಆರಂಭಿಸಿ, ದಿನವಿಡೀ ಖುಷಿಯಾಗಿರಿ
Garuda Purana: ಹಿಂದೂ ಧರ್ಮದಲ್ಲಿರುವ 18 ಪುರಾಣಗಳಲ್ಲಿ ಒಂದಾದ ಗರುಡ ಪುರಾಣಕ್ಕೂ ವಿಶೇಷ ಮಹತ್ವವಿದೆ. ಜೀವನವನ್ನು ನಡೆಸಲು ಸರಿಯಾದ ಮಾರ್ಗಗಳ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ. ಈ ಪುರಾಣದ ಪ್ರಕಾರ ನಮ್ಮ ದಿನವನ್ನು ಆರಂಭಿಸಿದರೆ ದಿನವಿಡೀ ನೆಮ್ಮದಿಯಾಗಿ ಇರಬಹುದಂತೆ.
ಗರುಡ ಪುರಾಣದಲ್ಲಿನ ನಿಯಮಗಳನ್ನು ಅನುಸರಿಸುವ ಮೂಲಕ ನಾವು ನಮ್ಮ ಜೀವನದ ಎಲ್ಲಾ ತೊಂದರೆಗಳಿಂದ ಪರಿಹಾರ ಪಡೆಯಬಹುದು. ಗರುಡ ಪುರಾಣದಲ್ಲಿನ ಎಲ್ಲ ನೀತಿಗಳನ್ನು ಚಾಚೂತಪ್ಪದೆ ಪಾಲಿಸಿದರೆ ಮನುಷ್ಯರ ಜೀವನ ಉತ್ತುಂಗದತ್ತ ಸಾಗುತ್ತದೆ ಎನ್ನಲಾಗುತ್ತದೆ.
2/ 8
ಗರುಡ ಪುರಾಣ ಮನುಷ್ಯ ಬದುಕಿದ್ದಾಗ ಆತ ಮಾಡುವ ಕರ್ಮಗಳು ಆತ ಸತ್ತ ನಂತರ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತದೆ. ಅಲ್ಲದೇ, ಸಾವಿ ನಂತರ ಜೀವನದ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಡುತ್ತದೆ.
3/ 8
ಈ ಗರುಡ ಪುರಾಣ ನಾವು ಹೇಗೆ ಜೀವನ ನಡೆಸಬೇಕು ಎಂಬುದನ್ನ ಸಹ ತಿಳಿಸಿಕೊಡುತ್ತದೆ. ಈ ಪುರಾಣದಲ್ಲಿ ಹೇಳಿರುವಂತೆ ನಮ್ಮ ದಿನವನ್ನು ಆರಂಭ ಮಾಡುವುದು ಶುಭ ಎನ್ನುವ ನಂಬಿಕೆ ಇದೆ. ಅಲ್ಲದೇ ಇದನ್ನು ಫಾಲೋ ಮಾಡುವುದು ವಿಷ್ಣುವಿನ ಕೃಪೆಗೆ ಪಾತ್ರರಾಗುವಂತೆ ಮಾಡುತ್ತದೆ.
4/ 8
ಸರಿಯಾದ ರೀತಿಯಲ್ಲಿ ದಿನವನ್ನು ಆರಂಭ ಮಾಡುವುದು ನೆಮ್ಮದಿಯಾಗಿ ದಿನ ಕಳೆಯಲು ಸಹಾಯ ಮಾಡುತ್ತದೆ. ಹಾಗಾದ್ರೆ ಗಡುಡ ಪುರಾಣದ ಪ್ರಕಾರ ಯಾವ ರೀತಿ ದಿನವನ್ನು ಆರಂಭ ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ.
5/ 8
ಪೂಜೆ ಮಾಡಿ: ಗರುಡ ಪುರಾಣದ ಪ್ರಕಾರ ಬೆಳಗ್ಗೆ ಎದ್ದು ಪೂಜೆ ಮಾಡಿ ಉಳಿದ ಕೆಲಸಗಳನ್ನು ಮಾಡುವುದು ಪಾಸಿಟಿವ್ ಎನರ್ಜಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದಲ್ಲದೇ, ಕೆಲಸಗಳು ಸಹ ಬೇಗ ಆಗುತ್ತದೆ ಎನ್ನುವ ನಂಬಿಕೆ ಇದೆ.
6/ 8
ಧ್ಯಾನ ಮಾಡಿ: ಹೌದು, ಮಾನಸಿಕವಾಗಿ ನೆಮ್ಮದಿ ಇಲ್ಲದಿದ್ದರೆ ದಿನವಿಡೀ ಕಿರಿಕಿರಿಯಾಗುತ್ತದೆ. ಹಾಗಾಗಿ ಪೂಜೆಯ ಸಮಯದಲ್ಲಿ ಸ್ವಲ್ಪ ಧ್ಯಾನ ಮಾಡುವುದು ಉತ್ತಮ ಎನ್ನಲಾಗುತ್ತದೆ. ಅಲ್ಲದೇ ಇದು ನಿಮಗೂ ಸಹ ಶಾಂತಿ ಸಿಗುತ್ತದೆ.
7/ 8
ನೈವೇದ್ಯ: ನೀವು ಆಹಾರ ಸೇವನೆ ಮಾಡುವ ಮೊದಲು ಅದನ್ನು ದೇವರಿಗೆ ನೈವೇದ್ಯ ಮಾಡುವುದು ತುಂಬಾ ಉತ್ತಮ. ಇದರಿಂದ ತಾಯಿ ಅನ್ನಪೂರ್ಣೇಶ್ವರಿ ಕೃಪೆಯು ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಿರುತ್ತದೆ.
8/ 8
ದಾನ ಮಾಡಿ: ದಾನ ಮಾಡುವುದು ಬಹಳ ಶ್ರೇಷ್ಠವಾದ ಕೆಲಸ ಎನ್ನುತ್ತದೆ ಗರುಡ ಪುರಾಣ. ಹಾಗಾಗಿ ದಿನಕ್ಕೆ ನಿಮ್ಮ ಕೈಲಾದಷ್ಟು ವಸ್ತು ಅಥವಾ ಹಣವನ್ನು ದಾನ ಮಾಡುವುದು ಉತ್ತಮ. ಈ ರೀತಿ ಮಾಡುವುದರಿಂದ ಹಣದ ಸಮಸ್ಯೆ ಬರುವುದಿಲ್ಲ.