Shani Doshaದಿಂದ ಮುಕ್ತಿ ಬೇಕು ಅಂದ್ರೆ ಶನಿವಾರ ಮಿಸ್ ಮಾಡ್ದೇ ಈ ಕೆಲಸ ಮಾಡಿ

Shani Dosha Remedy: ನಮ್ಮ ಜಾತಕದಲ್ಲಿ ಶನಿಯ ಕೆಟ್ಟ ಪ್ರಭಾವ ಇದ್ದರೆ ಜೀವನದಲ್ಲಿ ಸಮಸ್ಯೆಗಳು ಶುರುವಾಗುತ್ತದೆ. ಆಗ ಶನಿಯನ್ನು ಮೆಚ್ಚಿಸಲು ಹರಸಾಹಸ ಮಾಡಬೇಕಾಗುತ್ತದೆ. ಆದರೆ ಶನಿವಾರ ಕೆಲವೊಂದು ಸಿಂಪಲ್ ಪರಿಹಾರ ಮಾಡುವುದರಿಂದ ಶನಿಯ ಕಾಟದಿಂದ ಮುಕ್ತಿ ಸಿಗಲಿದೆ.

First published:

  • 18

    Shani Doshaದಿಂದ ಮುಕ್ತಿ ಬೇಕು ಅಂದ್ರೆ ಶನಿವಾರ ಮಿಸ್ ಮಾಡ್ದೇ ಈ ಕೆಲಸ ಮಾಡಿ

    ಶನಿ ದೇವರು ನಮ್ಮ ಕಾರ್ಯಗಳಿಗೆ ಅನುಗುಣವಾಗಿ ಯಾವಾಗಲೂ ಫಲ ನೀಡುವ ದೇವರು ಎನ್ನಲಾಗುತ್ತದೆ. ಆದರೆ ಹೆಚ್ಚಾಗಿ ಜನರಿಗೆ ಶನಿ ಎಂದರೆ ಬಹಳ ಭಯ ಇರುತ್ತದೆ. ಒಮ್ಮೆ ಶನಿಕಾಟ ಆರಂಭವಾದರೆ ಅದರಿಂದ ಹೊರ ಬರುವುದು ಬಹಳ ಕಷ್ಟ.

    MORE
    GALLERIES

  • 28

    Shani Doshaದಿಂದ ಮುಕ್ತಿ ಬೇಕು ಅಂದ್ರೆ ಶನಿವಾರ ಮಿಸ್ ಮಾಡ್ದೇ ಈ ಕೆಲಸ ಮಾಡಿ

    ಶನಿಯ ದೋಷ ಅಥವಾ ಸಾಡೇಸಾತಿ ಆರಂಭವಾದರೆ ಜೀವನದಲ್ಲಿ ಸಾಲಾಗಿ ಸಮಸ್ಯೆಗಳು ಬರುತ್ತದೆ. ಯಾಕಾದರೂ ಬದುಕಿದ್ದೇವೆಯೋ ಎನ್ನುವಷ್ಟು ಕಷ್ಟ ಬರುತ್ತದೆ. ಆದರೆ ಅದಕ್ಕೂ ಪರಿಹಾರವಿದೆ. ಆ ಪರಿಹಾರವೇನು ಎಂಬುದು ಇಲ್ಲಿದೆ.

    MORE
    GALLERIES

  • 38

    Shani Doshaದಿಂದ ಮುಕ್ತಿ ಬೇಕು ಅಂದ್ರೆ ಶನಿವಾರ ಮಿಸ್ ಮಾಡ್ದೇ ಈ ಕೆಲಸ ಮಾಡಿ

    ಶನಿ ದೋಷ ನಿವಾರಣೆ ಆಗಬೇಕು ಎಂದರೆ 11 ರೂಪಾಯಿ ಮತ್ತು ಕಾಳುಮೆಣಸನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಶನಿದೇವರ ದೇವಸ್ಥಾನದಲ್ಲಿ ಯಾರಿಗಾದರೂ ದಾನ ಮಾಡಬೇಕು ಎನ್ನಲಾಗುತ್ತದೆ. ಇದರಿಂದ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ.

    MORE
    GALLERIES

  • 48

    Shani Doshaದಿಂದ ಮುಕ್ತಿ ಬೇಕು ಅಂದ್ರೆ ಶನಿವಾರ ಮಿಸ್ ಮಾಡ್ದೇ ಈ ಕೆಲಸ ಮಾಡಿ

    ಇನ್ನು ಪ್ರತಿ ಶನಿವಾರ ತಪ್ಪದೇ ಶನಿಯ ದೇವಸ್ಥಾನಕ್ಕೆ ಹೋಗಿ ಎಳ್ಳಿನ ದೀಪವನ್ನು ಹಚ್ಚುವುದು ನಿಮಗೆ ಶನಿಯ ಕಾಟದಿಂದ ಮುಕ್ತಿ ನೀಡುತ್ತದೆ. ನೀವೇ ಮನೆಯಲ್ಲಿ ದೀಪವನ್ನು ತಯಾರಿಸಿಕೊಂಡು ಹೋಗಿ ಹಚ್ಚಿದರೆ ಉತ್ತಮ.

    MORE
    GALLERIES

  • 58

    Shani Doshaದಿಂದ ಮುಕ್ತಿ ಬೇಕು ಅಂದ್ರೆ ಶನಿವಾರ ಮಿಸ್ ಮಾಡ್ದೇ ಈ ಕೆಲಸ ಮಾಡಿ

    ಹಾಗೆಯೇ ಶನಿವಾರ ಶನಿ ದೇವಾಲಯಕ್ಕೆ ಕಪ್ಪು ಎಳ್ಳನ್ನು ಹಾಗೂ ಎಳ್ಳಿನ ಎಣ್ಣೆಯನ್ನು ದಾನ ಮಾಡಬೇಕು. ಇದನ್ನು 9 ವಾರಗಳ ಮಾಡಿದರೆ ಕಷ್ಟಗಳಿಂದ ಸ್ವಲ್ಪ ಮುಕ್ತಿ ಸಿಗುತ್ತದೆ. ಅಲ್ಲದೇ, ಸಾಡೇಸಾತಿ ಸಮಸ್ಯೆ ಇದ್ದರೆ ತಪ್ಪದೇ ಈ ಕೆಲಸ ಮಾಡಬೇಕು.

    MORE
    GALLERIES

  • 68

    Shani Doshaದಿಂದ ಮುಕ್ತಿ ಬೇಕು ಅಂದ್ರೆ ಶನಿವಾರ ಮಿಸ್ ಮಾಡ್ದೇ ಈ ಕೆಲಸ ಮಾಡಿ

    ಇನ್ನು ಶನಿವಾರ ಮನೆಯಿಂದ ಹೊರಡುವಾಗ ಮನೆಯ ಮುಖ್ಯ ಬಾಗಿಲಿಗೆ ಕಾಳುಮೆಣಸನ್ನು ಇಡಬೇಕು. ನಂತರ ಮನೆಯಿಂದ ಹೊರಡುವಾಗ ನೇರವಾಗಿ ಮೆಣಸಿನ ಮೇಲೆ ಹೆಜ್ಜೆ ಇಟ್ಟು ಹೊರಟರೆ ಯಾವುದೇ ಕೆಲಸವಾದರೂ ಸರಿ ಯಶಸ್ಸು ಸಿಗುತ್ತದೆ.

    MORE
    GALLERIES

  • 78

    Shani Doshaದಿಂದ ಮುಕ್ತಿ ಬೇಕು ಅಂದ್ರೆ ಶನಿವಾರ ಮಿಸ್ ಮಾಡ್ದೇ ಈ ಕೆಲಸ ಮಾಡಿ

    ಶನಿವಾರ ಕೇವಲ ಶನಿಗೆ ಮಾತ್ರವಲ್ಲದೇ ಆಂಜನೇಯನಿಗೆ ಸಹ ವೀಳ್ಯದೆಲೆ ಹಾರವನ್ನು ಕೊಟ್ಟರೆ ಒಳ್ಳೆಯದಾಗುತ್ತದೆ. ಅಲ್ಲಧೆ, ಶನಿ ದೇವಸ್ಥಾನಕ್ಕೆ ಗ್ರಹಗಳ ಅನುಸಾರ ಬೇಳೆ-ಕಾಳುಗಳನ್ನು ದಾನ ಮಾಡಬೇಕು.

    MORE
    GALLERIES

  • 88

    Shani Doshaದಿಂದ ಮುಕ್ತಿ ಬೇಕು ಅಂದ್ರೆ ಶನಿವಾರ ಮಿಸ್ ಮಾಡ್ದೇ ಈ ಕೆಲಸ ಮಾಡಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES