News Year 2023: ಜ್ಯೋತಿಷ್ಯದ ಪ್ರಕಾರ ವರ್ಷದ ಮೊದಲ ದಿನ ಈ ಕೆಲಸಗಳನ್ನು ಮಾಡಿದ್ರೆ ಅಶುಭವಂತೆ
How To Spend New Year: ಹೊಸವರ್ಷದ ಆರಂಭವಾಗಿದೆ, ವಿನೂತನ ಕನಸುಗಳ ಜೊತೆ ಹೊಸ ದಿನವನ್ನು ಎಲ್ಲರೂ ಬರಮಾಡಿಕೊಂಡಾಗಿದೆ. ಈ ದಿನ ಹಲವಾರು ರೀತಿಯ ಆಚರಣೆ ಮಾಡಲಾಗುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೊಸವರ್ಷದ ದಿನ ಕೆಲ ಕೆಲಸಗಳನ್ನು ಮಾಡುವುದು ಅಶುಭ ಹಾಗೂ ಕೆಲ ಕೆಲಸಗಳು ಶುಭ. ಆ ಕೆಲಸಗಳು ಯಾವುವು ಎಂಬುದು ಇಲ್ಲಿದೆ.
ಈ ವರ್ಷದ ಸಮಯದಲ್ಲಿ ಹಲವಾರು ಗ್ರಹಗಳು ತಮ್ಮ ಸ್ಥಾನವನ್ನು ಬದಲಾವಣೆ ಮಾಡುತ್ತಿವೆ. ಈ ಗ್ರಹಗಳ ಆಧಾರದ ಮೇಲೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಏನು ಮಾಡಬೇಕು ಹಾಗೂ ಮಾಡಬಾರದು ಎಂಬುದು ಇದೆ. ಈ ಹೊಸವರ್ಷದ ಸಮಯದಲ್ಲಿ ನೀವು ಕೆಲ ಕೆಲಸಗಳನ್ನು ಮಾಡಿದರೆ ಬಹಳ ಒಳ್ಳೆಯದಂತೆ, ಹಾಗೆಯೇ ಕೆಲವೊಂದು ಕೆಲಸಗಳು ಅಶುಭವಂತೆ.
2/ 8
ದೇವಸ್ಥಾನಕ್ಕೆ ಹೋಗಿ: ಹೊಸವರ್ಷದ ದಿನ ನೀವು ಧಾರ್ಮಿಕ ಆಚರಣೆಗಳನ್ನು ಮಾಡುವುದು ಬಹಳ ಮುಖ್ಯ. ಈ ದಿನ ದೇವಸ್ಥಾನ ಸೇರಿದಂತೆ ಹೀಗೆ ಧಾರ್ಮಿಕ ಸ್ಥಳಗಳಿಗೆ ಹೋಗುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡಿ.
3/ 8
ಮನೆಯ ಮುಂದೆ ಫಲಕ ಹಾಕಿ; ಈ ದಿನ ನೀವು ಮನೆಯ ಮುಂದೆ ಫಲಕವನ್ನು ಹಾಕುವುದು ಶುಭ ಎನ್ನಲಾಗುತ್ತದೆ. ಹೊಸವರ್ಷದ ಶುಭಾಶಯ ಬರೆದು ಹಾಕಿ ಅಥವಾ ದೃಷ್ಟಿ ತಾಗದಂತೆ ಯಾವುದಾದರೂ ಗೊಂಬೆಯ ಚಿತ್ರ ಸಹ ಹಾಕಬಹುದು. ಇದರಿಂದ ಈ ವರ್ಷ ಯಾರದ್ದೇ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎನ್ನುವ ನಂಬಿಕೆ ಇದೆ.
4/ 8
ಮನೆಗೆ ಕಲಾಕೃತಿ ತರಬೇಡಿ: ಈ ದಿನ ಮನೆಗೆ ಕಲಾಕೃತಿಯನ್ನು ತರುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ. ಹಾಗಾಗಿ ಯಾವುದೇ ಆ್ಯಂಟಿಕ್ ಪೀಸ್ ಆಗಿರಲಿ ಅಥವಾ ಕಲಾಕೃತಿಯಾಗಿರಲಿ ತರಲೇಬೇಡಿ. ಕೇವಲ ಹೊಸವರ್ಷದ ದಿನ ಮಾತ್ರ ಅಲ್ಲ, ಅದರ ಹಿಂದಿನ ದಿನ ಸಹ ಇದನ್ನು ತರಬಾರದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
5/ 8
ಹೊಸವರ್ಷದ ದಿನ ಪಾರ್ಟಿ ಮಾಡುವುದು ಸಾಮಾನ್ಯ, ಆದರೆ ಈ ದಿನ ನೀವು ಮನೆಗೆ ಕರೆಯುವ ಅತಿಥಿಗಳ ಬಗ್ಗೆ ಸ್ವಲ್ಪ ಎಚ್ಚರ ಇರಲಿ. ನಿಮ್ಮ ಬಗ್ಗೆ ಅಸೂಯೆಪಟ್ಟುಕೊಳ್ಳುವವರನ್ನು ದೂರ ಇಡುವುದು ನಿಮಗೆ ವರ್ಷಪೂರ್ತಿ ನೆಮ್ಮದಿಯಾಗಿರಲು ಸಹಾಯ ಮಾಡುತ್ತದೆ.
6/ 8
ನಿರ್ಧಾರ ಮಾಡುವಾಗ ಯೋಚಿಸಿ: ಕೆಲವೊಂದು ನಿರ್ಧಾರಗಳನ್ನು ಹೊಸವರ್ಷದ ದಿನ ತೆಗೆದುಕೊಳ್ಳುವುದು ಸೂಕ್ತವಲ್ಲ ಎನ್ನುತ್ತೇವೆ. ನಾವು ಹೊಸವರ್ಷದ ಉತ್ಸಾಹದಲ್ಲಿ ತೆಗೆದುಕೊಂಡ ನಿರ್ಧಾರ ಮುಂದಿನ ದಿನಗಳಲ್ಲಿ ಅಸಾಧ್ಯ ಅನಿಸುವುದು ಮಾತ್ರವಲ್ಲದೇ, ಕಷ್ಟ ಕೂಡ ಉಂಟುಮಾಡಬಹುದು.
7/ 8
ಮುಖ್ಯವಾಗಿ ಈ ದಿನ ಕುಟುಂಬ ಹಾಗೂ ಉತ್ತಮ ಸ್ನೇಹಿತರ ಜೊತೆ ಸಮಯ ಕಳೆಯುವುದು ನಿಮಗೆ ಒಳ್ಳೆಯದು. ಸುತ್ತಲು ನಿಮ್ಮ ಪ್ರೀತಿ-ಪಾತ್ರರು ಹಾಗೂ ನಿಮಗೆ ಒಳ್ಳೆಯದನ್ನು ಬಯಸುವವರು ಇದ್ದಗಾ ಹೊಸ ವರ್ಷದ ಆರಂಭ ಉತ್ತಮ ರೀತಿಯಲ್ಲಿ ಆಗುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)