ಗುತ್ತಿಗೆ ಆಧಾರಿತ ಉತ್ತಮ ಉದ್ಯೋಗ ಸಿಗಲಿದೆ. ವಿಶ್ರಾಂತಿಯಿಲ್ಲದ ಕಾರ್ಯದೊತ್ತಡದಿಂದ ಅನಾರೋಗ್ಯ ಉಂಟಾಗಬಹುದು. ಅವಿವಾಹಿತರು ಆದಷ್ಟು ಬೇಗ ವಿವಾಹದ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಿ. ಲಕ್ಷ್ಮೀ ವೇಂಕಟರಮಣನ ಸೇವೆಯಿಂದ ಶುಭ.
3/ 13
ಬಾಡಿಗೆ ರೂಪದಲ್ಲಿ ಸಂಘ ಸಂಸ್ಥೆಯೊಂದಕ್ಕೆ ಕಟ್ಟಡವನ್ನು ಕಟ್ಟಿಸಿಕೊಡಲು ಒತ್ತಡಬರಲಿದೆ. ಈ ದಿನ ನಿಮ್ಮ ಸಾಂಸಾರಿಕ ವಿಚಾರದಲ್ಲಿ ಬೇರೆಯವರ ಸಲಹೆಗಳನ್ನು ಕಡೆಗಣಿಸುವುದು ಮತ್ತು ಬೇರೆಯವರ ಕುಟುಂಬದ ಹೋಲಿಕೆಯನ್ನು ತೆಗೆದುಕೊಳ್ಳದೇ ಇರುವುದು ಒಳ್ಳೆಯದು.
4/ 13
ಕಾರ್ಯಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಪರಿಣಿತರಿಂದ ಸುಲಭವಾದ ಉಪಾಯ ಪಡೆದು ಸಂತೋಷವಾಗಲಿದೆ. ಆದಾಯ ತೆರಿಗೆ ಇಲಾಖೆಯವರಿಗೆ ನಿಮ್ಮ ಲೆಕ್ಕ ಪತ್ರಗಳು ಸಮರ್ಪಕವಾಗಿರುವುದು ಕಂಡುಬರುವುದು. ಸಂಗಾತಿಯೊಂದಿಗೆ ಬಾಂಧವ್ಯ ವೃದ್ಧಿಯಾಗಲಿದೆ.
5/ 13
ಮಾರ್ಗದರ್ಶಕರ ಸಲಹೆ ಸೂಚನೆ ಪಡೆದು ಆರಂಭಿಸಿದ ಯೋಜನಾ ಬದ್ಧ ಕೆಲಸಗಳಲ್ಲಿ ಹೆಚ್ಚಿನ ಅನುಕೂಲ ಉಂಟಾಗಲಿದೆ. ತಂದೆಯಾಗುವ ಶುಭ ಸುದ್ದಿ ಕೇಳಿ ಬರುವುದು. ಲೇವಾದೇವಿ ವ್ಯವಹಾರ ಲಾಭ ತರಲಿದೆ. ಅಫೀಸಿನ ಕೆಲಸಗಳಲ್ಲಿ ಕಡಿಮೆ ಒತ್ತಡದಿಂದ ಆರಾಮ.
6/ 13
ವ್ಯಾಪಾರ ಹಾಗೂ ವಾಣಿಜ್ಯೋದ್ಯಮ ವ್ಯವಹಾರಗಳಿಗೆ ಇದು ಒಳ್ಳೆಯ ದಿನ. ಇಂದಿನ ಅವಕಾಶಗಳನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳಿ. ಪ್ರೀತಿ ಪಾತ್ರರೊಂದಿಗೆ ಈ ದಿನ ಕಳೆಯುವ ಸಮಯವು ನಿಮಗೆ ಹಿಂದಿನ ಲವಲವಿಕೆಯನ್ನು ಪುನಃ ಮೂಡಿಸುತ್ತದೆ.
7/ 13
ಈ ದಿನ ನೀವು ಆಡಿದ ಮಾತುಗಳು ತಿರುಗಿ ನಿಮಗೆ ಮುಳ್ಳಾಗುವ ರೀತಿಯಲ್ಲಿ ಇರಲಿದೆ ಆದ್ದರಿಂದ ಸೂಕ್ಷ್ಮವಾಗಿ ಜಾಗರೂಕತೆಯಿಂದ ವ್ಯವಹರಿಸಿ. ಪ್ರತಿ ವರ್ಷದಲ್ಲಿ ಮಾಡಿಕೊಂಡುಬಂದ ಕುಟುಂಬದ ಧಾರ್ಮಿಕ ಕೆಲಸವನ್ನು ಮಾಡುವ ಬಗ್ಗೆ ತೀರ್ಮಾನಿಸಿ.
8/ 13
ನಿಮ್ಮ ಕನಸುಗಳು ಈ ದಿನ ಕನಸಾಗಿಯೇ ಉಳಿಯಲಿದೆ. ಅಧಿಕಾರಿ ಹಾಗೂ ಹಿರಿಯರಿಂದ ಸಹಾಯ ಸಹಕಾರಗಳನ್ನು ಅಪೇಕ್ಷಿಸುವಂತಹ ದಿನ. ಶುಭ ಕಾರ್ಯಗಳಿಗಾಗಿ ಖರ್ಚಿನ ಸಂಭವವಿರುವುದು. ಮಕ್ಕಳ ಓದಿನ ಕಡೆ ಹೆಚ್ಚು ನಿಗಾವಹಿಸುವಿರಿ.
9/ 13
ಉನ್ನತ ವಾಣಿಜ್ಯ ಶಿಕ್ಷಣ ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಯಶಸ್ಸಿನ ಸಾಧ್ಯತೆ ಇದೆ. ದೀರ್ಘಕಾಲೀನ ಯೋಜನೆಗಳು ಫಲದಾಯಕವಾಗಿ ವೃತ್ತಿಪರರಿಗೆ ಕಾರ್ಯರಂಗದಲ್ಲಿ ಪ್ರಗತಿ. ಆತ್ಮೀಯರ ಮನೆಯಲ್ಲಿ ವಿಶೇಷ ಸಮಾರಂಭಗಳಲ್ಲಿ ಭಾಗವಹಿಸುವಿರಿ.
10/ 13
ಇಂದಿನ ಎಲ್ಲಾ ಸನ್ನಿವೇಶಗಳು ನಿಮ್ಮ ವಿರೋಧವಾಗಿ ಇರುವುದರಿಂದ ಮನಸ್ಸಿಗೆ ನಕಾರಾತ್ಮಕ ಯೋಚನೆಗಳು ಬರಲಿದೆ. ಧೈರ್ಯಗೆಡುವಂತೆ ಆಗಲಿದೆ. ಮನೆಯಲ್ಲಿ ನೆಡೆಯಬೇಕಾದ ಮಂಗಳ ಕಾರ್ಯದ ಕುರಿತು ಹಿರಿಯೊರೊಂದಿಗೆ ಹೆಚ್ಚಿನ ಸಮಾಲೋಚನೆ ನಡೆಸುವಿರಿ.
11/ 13
ಖಾಸಗಿ ಕಂಪೆನಿಯೊಂದರಲ್ಲಿ ನೌಕರಿ ಪ್ರಾಪ್ತಿಯಾಗಿ ಮನೆಯಲ್ಲಿ ಸಂತಸ ಮೂಡಲಿದೆ. ರಾಜಕೀಯ ರಂಗದಲ್ಲಿ ಬಹಳ ದಿನಗಳ ನಂತರ ಯಶಸ್ಸು ದೊರೆಯಲಿದೆ. ಪ್ರಯತ್ನ ಪಟ್ಟ ಕೆಲಸಗಳು ದಿನದ ಅಂತ್ಯಕ್ಕೆ ಫಲ ನೀಡಲಿವೆ. ಮನೆಯವರ ಆರೋಗ್ಯ ಸುಧಾರಣೆಯಾಗುತ್ತದೆ.
12/ 13
ಗುರಿ ಸಾಧಿಸುವ ನಿಟ್ಟಿನಲ್ಲಿ ಕೆಲಸಗಳನ್ನು ಬೇಗ ಪೂರ್ಣ ಗೊಳಿಸುವಿರಿ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕೌಟುಂಬಿಕ ಸುಖದೊಂದಿಗೆ ಸರ್ವತೋಮುಖ ಅಭಿವೃದ್ಧಿ ಪಡೆಯುವಿರಿ. ಲಾಭ ತರುವ ಅವಕಾಶ ನೀಡುವ ವ್ಯಕ್ತಿಗಳ ಸ್ನೇಹ ಸಂಪಾದಿಸುವಿರಿ.
13/ 13
ವೃತ್ತಿ ಹಾಗೂ ವೈಯಕ್ತಿಕ ಜೀವನ ತೃಪ್ತಿ ಎನಿಸಲಿದೆ. ಕೈಗೊಳ್ಳುವ ನಿರ್ಧಾರಗಳು ಮನಸ್ಸಿಗೆ ನೆಮ್ಮದಿ ತರಲಿದೆ. ಪಾಲುದಾರರೊಂದಿಗೆ ಕೇವಲ ಮಾತುಕತೆ ನಡೆಸಿ, ಯಾವುದೇ ರೀತಿಯ ಕಾಗದ ಪತ್ರಗಳಿಗೆ ಸಹಿಯನ್ನು ಹಾಕದಿರಿ. ಧಾನ್ಯಗಳ ವ್ಯಾಪಾರಗಳಿಂದ ಹೆಚ್ಚಿನ ಲಾಭ ಪಡೆಯಬಹುದು.