ನಿಮ್ಮ ಎಣಿಕೆಯಂತೆ ಕಾರ್ಯಗಳು ಸಿದ್ಧಿಸುವವು. ಇಂದು ವೃತ್ತಿ ಬದುಕಿನಲ್ಲಿ ಅಪೂರ್ವ ಅವಕಾಶಗಳು ನಿಮ್ಮದಾಗಲಿವೆ. ಧನಾಗಮನಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಅನುಕೂಲವು ಆಗುತ್ತದೆ. ಈ ದಿನದ ಕಹಿ ಘಟನೆಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವ ಅವಶ್ಯಕತೆಯಿಲ್ಲ
3/ 13
ಹೊಸದನ್ನು ಕಲಿಯುವುದಕ್ಕೆ ನೀವು ಬಹಳ ಉತ್ಸುಕರಾಗಿದ್ದೀರಿ. ಇತರರನ್ನು ಹೀಯಾಳಿಸುವ ಅಥವಾ ನಿಂದನೆ ಮಾಡುವ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಿ. ದೀರ್ಘಕಾಲೀನ ಯೋಜನೆಗಳು ಫಲದಾಯಕವೆನಿಸಲಿದೆ. ಅನಗತ್ಯ ಅಲೆದಾಟಗಳು ತಪ್ಪಲಿದೆ.
4/ 13
ನಿಮ್ಮ ಜೀವನದಲ್ಲಿರುವ ಎಲ್ಲಾ ರೀತಿಯ ಅಡತಡೆಗಳನ್ನೂ ನಿವಾರಿಸಬಲ್ಲಿರಿ. ಆತ್ಮೀಯರ ಮನೆಯಲ್ಲಿನ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಅಬಕಾರಿ ಇಲಾಖೆಯವರಿಗೆ ಹೆಚ್ಚಿನ ಕೆಲಸ. ಶ್ರೀ ಮಹಾಲಕ್ಷ್ಮಿ ಯನ್ನು ಆರಾಧಿಸಿದಲ್ಲಿ ಎಲ್ಲವೂ ಶುಭದತ್ತ ಸಾಗುವುದು
5/ 13
ಅತಿಯಾಗಿ ಪ್ರೀತಿಸುವ ಹಾಗೂ ಆದರಿಸುವ ಜನರೊಂದಿಗೆ ಕಾಲ ಕಳೆಯಲು ಈ ದಿನ ಸಕಾಲವಾಗಿದೆ. ನಟನಾ ವೃತ್ತಿಯವರಿಗೆ ಖ್ಯಾತಿ ಮತ್ತು ಸಂಪತ್ತು ಹರಿದು ಬರಲಿದೆ. ನಿಮ್ಮ ಸುತ್ತಲಿನ ವಿದ್ಯಮಾನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವಿರಿ.
6/ 13
ಕೆಲವೊಂದು ಸನ್ನಿವೇಶಗಳು ನಿಮ್ಮ ಪರವಾಗಿರುವಂತೆ ತೋರುವುದರಿಂದ ನಿರಾಳವಾಗಿ ಮುಂದುವರೆಯಿರಿ. ಕುಲದೇವರ ದರ್ಶನದಿಂದ ಈಗಿನ ನಿಮ್ಮೆಲ್ಲಾ ವ್ಯವಹಾರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಬಲ್ಲಿರಿ. ನಿಮ್ಮ ಭಾವನೆಗಳ ಬಗ್ಗೆ ಪ್ರಾಮಾಣಿಕರಾಗಿರಿ.
7/ 13
ತರ್ಕ ಮಾಡಿ ಸಮಯ ಹಾಳು ಮಾಡುವ ಬದಲು ಸಮಾಧಾನದಿಂದ ಕೆಲಸ ಮಾಡಿದಲ್ಲಿ ನಿಧಾನವಾದರೂ ಜಯ ನಿಮ್ಮದಾಗುವುದು. ಹಿರಿಯರು ಮೊದಲಿನಿಂದ ನಡೆಸಿಕೊಂಡು ಬಂದ ವ್ಯಾಪಾರದ ವಿಚಾರದಲ್ಲಿ ಅವರೊಂದಿಗೆ ಗಂಭೀರ ಚರ್ಚೆ ನಡೆಯಲಿದೆ.
8/ 13
ಅಸಾಧ್ಯ ಕಾರ್ಯಗಳನ್ನೂ ಸಹ ಸಾಧಿಸಿ ತೋರಿಸುವಷ್ಟು ಮನೋಬಲ ನಿಮ್ಮಲ್ಲಿದೆ. ಆದರೆ ಇಂದು ಯಾವುದೇ ಹೊಸ ಉದ್ಯೋಗ ಅಥವಾ ಕರಾರಿಗೆ ಆತುರದಲ್ಲಿ ಸಹಿ ಹಾಕಬೇಡಿ. ಪೂರ್ವ ನಿಯಾಮಕವಾಗಿ ಕೆಲಸ ಮಾಡುವುದು ಬಹಳ ಮುಖ್ಯವಾಗಿದೆ.
9/ 13
ಈ ದಿನ ನೀವು ಶುಭ ಸಮಾಚಾರಗಳನ್ನು ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯುವಿರಿ. ಅಧಿಕಾರಿಗಳಿಗೆ ಸಹೋದ್ಯೋಗಿಗಳಿಂದ ನಿರೀಕ್ಷೆಗೆ ಮೀರಿದ ಸಹಾಯ ದೊರೆಯುವುದು. ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ. ಅವಶ್ಯಕ ವಸ್ತುಗಳ ಗಳಿಕೆಯಿಂದ ಸಂತೋಷ.
10/ 13
ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡು ಬಂದು ದೈನಂದಿನ ಚುಟುವಟಿಕೆಗಳಲ್ಲಿ ಪಾಲುಗೊಳ್ಳುವಿರಿ. ಕಾರ್ಯಕ್ಷೇತ್ರದಲ್ಲಿ ಅಗಾಗ ಪ್ರಯತ್ನಬಲಕ್ಕೆ ಅಡ್ಡಿ ಅತಂಕಗಳಿದ್ದರೂ ಈ ದಿನ ನಿಮ್ಮ ಕಾರ್ಯ ಸಾಧನೆಯಲ್ಲಿ ಜಯ ಕಾಣುವುದರ ಬಗ್ಗೆ ಸಂದೇಹವಿಲ್ಲ
11/ 13
ಪ್ರೇಮಿಗಳಿಗೆ ಜೀವನ ನಿರ್ಣಯಿಸಲು ಉತ್ತಮ ಅವಕಾಶಗಳು ಈ ದಿನ ಬರಲಿದೆ. ನೈತಿಕ ಶಕ್ತಿ ಹೆಚ್ಚುವುದರಿಂದ ಕೆಲಸದಲ್ಲಿ ಉತ್ತಮ ಅಭಿವೃದ್ಧಿಯನ್ನು ಕಾಣುವಿರಿ. ಮಗನೊಡನೆ ಭಾಂದವ್ಯ ಹೆಚ್ಚಿ ವ್ಯವಹಾರದಲ್ಲಿ ಲಾಭವನ್ನು ಹೆಚ್ಚಿಸಿಕೊಳ್ಳುವಿರಿ.
12/ 13
ಕುಟುಂಬದಲ್ಲಿ ಮಾನಸಿಕ ಸಮಾಧಾನ ದೊರೆತು ಹಂತ ಹಂತವಾಗಿ ಅನುಕೂಲ ವಾತಾವರಣದ ಅನುಭವ ದೊರಕಲಿದೆ. ಸಂಘ ಸಂಸ್ಥೆಯಲ್ಲಿ ಸ್ಥಾನಮಾನ ಲಭ್ಯವಾಗುವುದು. ಕಾನೂನಿಗೆ ವಿರುದ್ಧವಾದ ಕೆಲಸ ನಿಮ್ಮಿಂದ ಸಂಭವಿಸಬಹುದು. ತಪುö್ಪ ಮಾಡದಂತೆ ಗಮನದಲ್ಲಿರಿ
13/ 13
ಒಂದು ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ಯಾವುದೇ ರೀತಿಯ ತೀರ್ಮಾನವನ್ನೂ ತೆಗೆದುಕೊಳ್ಳಬೇಡಿ. ದುರ್ಜನರ ಸಹವಾಸದಿಂದ ಗೌರವ ಕಳೆದುಕೊಳ್ಳುವಂತೆ ಆಗುವುದು. ಯಾವುದೇ ವ್ಯಕ್ತಿಗಳ ಹೊಗಳಿಯ ಮಾತುಗಳಿಗೆ ಮರಳಾಗಬೇಡಿ