ಸಾಧು ಸಂತರ ದರ್ಶನದಿಂದ ಮನಸ್ಸಿಗೆ ಹೆಚ್ಚಿನ ಸಮಾಧಾನ ಕಂಡುಬರಲಿದೆ. ಆಕಸ್ಮಿಕ ಧನಲಾಭದಿಂದ ಹರ್ಷವಾಗುವುದು. ಚಿನ್ನ ಬೆಳ್ಳಿ ವ್ಯಾಪಾರಿಗಳಿಗಿಂದು ಹೆಚ್ಚು ವ್ಯಾಪಾರವಾಗುವ ಜೊತೆಗೆ ಅಂಗಡಿಯಲ್ಲಿ ಬೆಲೆ ಬಾಳುವ ವಸ್ತುಗಳು ಕಾಣೆಯಾಗಬಹುದು
3/ 13
ಬಂಧು-ಮಿತ್ರರ ಒಡನಾಟದಿಂದ ಸಂತೋಷ ತೋರಿಬರಲಿದೆ. ಅನಾವಶ್ಯಕವಾಗಿ ಋಣಾತ್ಮಕ ಚಿಂತೆ ಮಾಡುವುದನ್ನು ಕಡಿಮೆ ಮಾಡಿ. ಬ್ಯಾಂಕಿನ ಸಾಲ ತೀರಲಿದೆ. ಪರೀಕ್ಷಾ ಅಧಿಕಾರಿಗಳು ಕಛೇರಿಗೆ ಭೇಟಿ ನೀಡಿ ನಿಮ್ಮ ಕೆಲಸವನ್ನು ಪರೀಕ್ಷಿಸಬಹುದು. ಸಿದ್ಧರಾಗಿರಿ.
4/ 13
ನಿಮಗೊಪ್ಪಿಸಿರುವ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ ಮುಗಿಸುವಿರಿ. ಕುಟುಂಬದಲ್ಲಿ ನೂತನ ಸದಸ್ಯನ ಸೇರ್ಪಡೆಯು ಮನೆ ಮಂದಿಗೆಲ್ಲ ಸಡಗರ ಸಂಭ್ರಮವನ್ನು ಹೆಚ್ಚಿಸುವುದು. ಇಂದು ಸಾಮಾಜಿಕ ಚಟುವಟಿಕೆಯಲ್ಲಿ ಅಡ್ಡಿ-ಆತಂಕಗಳು ಎದುರಾಗಲಿದೆ.
5/ 13
ದಿನದ ಪ್ರಾರಂಭದಲ್ಲಿ ಸವಿತೃ ಸೂರ್ಯ ನಾರಾಯಣನಿಗೆ ನಮಸ್ಕರಿಸುವುದರಿಂದ ನಿಮ್ಮ ಮನಸ್ಸಿನಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದಗಳಿರುವುದಿಲ್ಲ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಕೆಲಸಗಳು ದೊರೆಯಲಿದೆ. ಮಾನಸಿಕ ದುಗುಡವನ್ನು ದೂರಮಾಡಿಕೊಳ್ಳಿ.
6/ 13
ಸಜ್ಜನರ ಭೇಟಿಯಾಗಲಿದೆ. ಗೃಹ ನಿರ್ಮಾಣದ ಆರಂಭಕ್ಕೆ ದಿನ ನಿಶ್ಚಯಿಸಲಿರುವಿರಿ. ಪಟ್ಟು ಬಿಡದೆ ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ವೃತ್ತಿ ತರಬೇತಿ ಸಂಸ್ಥೆಗಳಲ್ಲಿ ಉದ್ಯೋಗ ಸಿಗಲಿದೆ. ಮಕ್ಕಳಿಂದ ವಿದ್ಯಾಭ್ಯಾಸದ ವಿಷಯದಲ್ಲಿ ಖರ್ಚು ಸಂಭವವಿದೆ
7/ 13
ಪತ್ರಿಕೋದ್ಯಮಿಗಳಿಗೆ ಈ ದಿನ ಹೆಚ್ಚಿನ ಕೆಲಸ. ಪ್ರಸ್ತುತ ರಾಜಕೀಯ ವಿದ್ಯಮಾನಗಳಿಂದ ಸಾಮಾಜಿಕ ಲಾಭವಾಗಲಿದೆ. ಅಧಿಕಾರ ಪಡೆದುಕೊಳ್ಳಲು ಲಾಬಿ ನಡೆಸ ಬೇಕಾಗಬಹುದು. ನಿಮ್ಮ ಪಾರಂಪರಿಕ ಹಿತಶತೃಗಳ ಬಗ್ಗೆ ಎಚ್ಚರ ವಹಿಸಿ. ಕುಟುಂಬದ ಹಿರಿಯರ ಆರೋಗ್ಯ ಹದಗೆಡಗುವುದು.
8/ 13
ಮನೆಯವರೊಡನೆ ತಾಳ್ಮೆಯಿಂದ ನಡೆದುಕೊಳ್ಳಿ. ನಿಮ್ಮ ಬದುಕಿಗೆ ತಿರುವು ನೀಡುವ ಅವಕಾಶಗಳು ಬರಲಿವೆ. ಬಂದಂತಹ ಅವಕಾಶವನ್ನು ವಿವೇಚನೆಯಿಂದ ಉಪಯೋಗಿಸಿ ಕೊಳ್ಳುವ ಪ್ರಯತ್ನ ನೆಡೆಸಿ. ಸುಗಂಧ ದ್ರವ್ಯಗಳ ಮಾರಾಟದಿಂದ ಲಾಭವಿರುವುದು
9/ 13
ಹೊಸ ಕೆಲಸಕ್ಕೆ ಕೈ ಹಾಕಲಿಚ್ಛಿಸಿರುವ ನೀವು ಮೊದಲು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಬೇಕಾಗುವ ಎಲ್ಲಾ ಕಾರ್ಯಗಳನ್ನು ಪ್ರಾರಂಭಿಸಿ. ಇನ್ನೊಬ್ಬರಿಗೆ ಮೋಸ ಮಾಡುವ ಮನಸ್ಥಿತಿಯನ್ನು ದೂರಮಾಡಿಕೊಂಡು ಜೀವನ ನೆಡೆಸಿ
10/ 13
ಉಳಿದವರಿಗಿಂತ ಎಲ್ಲ ಕೆಲಸವನ್ನು ಏಕಾಗ್ರತೆಯಿಂದ ಸಾಧಿಸಲು ಯತ್ನಿಸುವಿರಿ ಅದರ ಫಲವಾಗಿ ಯಶಸ್ಸು ಸಿಗುವುದು. ಬಹುದಿನದ ಕನಸೊಂದು ನೆರವೇರುವುದು. ಸಂಬಂಧಿಗಳು ಮತ್ತೆ ಹತ್ತಿರದವರಾಗುವರು. ಗೆಳೆಯರ ಒತ್ತಾಯದಿಂದ ರಾಜಕೀಯಕ್ಕೆ ಸೇರುವಿರಿ
11/ 13
ವಾಣಿಜ್ಯೋದ್ಯಮ ಮಂದಿಗೆ ಇಂದು ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸಲು ಉತ್ತಮ ದಿನವಾಗಿರುವುದು. ನಿಮ್ಮ ನೂತನ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಿಬ್ಬಂದಿವರ್ಗ ಆನಂದದಿAದ ಸಹಕರಿಸಲಿದ್ದಾರೆ. ದೂರ ಪ್ರಯಾಣ ಉತ್ತಮವಲ್ಲ.
12/ 13
ವೈದ್ಯಕೀಯ ಖರ್ಚಿನ ಹಣವನ್ನು ಸಂಸ್ಥೆಯಿಂದ ಪಡೆದುಕೊಳ್ಳುವಂತಾಗುವುದು. ಕುಟುಂಬ ಕಲಹದಿಂದ ಆದಷ್ಟು ದೂರ ಇರುವುದು ಒಳ್ಳೆಯದು. ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಕಿರುಕುಳವು ತೋರಿಬಂದೀತು. ಮನೆಯಲ್ಲಿ ವ್ರತಾಚರಣೆಗಳನ್ನು ನಡೆಸಿ.
13/ 13
ಸತ್ಯನಾರಾಯಣ ಸ್ವಾಮಿಯ ಸೇವೆಯನ್ನು ಮಾಡುವುದರಿಂದ ನಿಮ್ಮ ಜಟಿಲ ಸವಸ್ಯೆಗಳು ಕೂಡ ಸೌಹಾರ್ಧಯುತವಾಗಿ ಬಗೆಹರಿಯಲಿದೆ. ನಿಮ್ಮ ದುರಾಲೋಚನೆಗಳನ್ನು ಬದಲಿಸಿ ಕೊಳ್ಳುವ ಸಮಯ ಈ ದಿನವಾಗಿದೆ. ಹಣದ ಹರಿವು ಸರಾಗವಾಗಿರಲಿದೆ.