ಕರ್ತವ್ಯ ಕೊರತೆಯಿಂದಾಗಿ ಜೀವನದಲ್ಲಿ ಉಲ್ಲಾಸವನ್ನು ಕಳೆದುಕೊಳ್ಳುವ ಸಮಯ ಎದುರಾಗಲಿದೆ. ತಂದೆಯಾಗುವ ಸುದ್ದಿ ಕೇಳಿ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ರಾಜಕಾರಣಿಗಳೊಂದಿಗೆ ಅಧಿಕವಾಗಿ ಬೆಳೆಸಿಕೊಂಡ ಒಡನಾಟವು ಅಪಾಯವನ್ನು ತಂದೊಡ್ಡಲಿದೆ
2/ 12
ಅಪರೂಪದ ಅತಿಥಿಯ ಆಗಮನ ಸಂತೋಷ ತರಲಿದೆ. ನಿಮ್ಮ ನಂಬಿಕೆಗಳನ್ನು ಪ್ರತಿಪಾದಿಸಲು ಅಂಜಿಕೆ ಬೇಡ. ಸಾಲಬಾಧೆ ಸ್ವಲ್ಪ ಮಟ್ಟಿಗೆ ತೀರಲಿದೆ. ನಿಮ್ಮ ಪೂರ್ವನಿಯೋಜಿತ ಕೆಲಸ ಕಾರ್ಯಗಳು ಸರ್ವರ ಸಹಾಯದಿಂದ ಮಂದಗತಿಯಲ್ಲಿ ಪೂರ್ಣಗೊಳ್ಳುವುದು
3/ 12
ಉದ್ಯೋಗದಲ್ಲಿನ ಸಮಸ್ಯೆಯಿಂದಾಗಿ ಬದಲಾವಣೆಯ ಮನಸ್ಸು ಬರಲಿದೆ. ಆದರೇ ಯಾವುದೇ ಕಾರಣಗಳಿಗೂ ಉದ್ಯೋಗ ಬದಲಾವಣೆಯ ಬಗ್ಗೆ ತೀರ್ಮಾನಿಸಬೇಡಿ. ನಿರ್ಧಾರಗಳು ಅಗತ್ಯವಾಗಿ ತೆಗೆದುಕೊಳ್ಳುವ ಸಮಯದಲ್ಲಿ ಜ್ಯೋತಿಷ್ಯರನ್ನು ಸಂಪರ್ಕಿಸಿ.
4/ 12
ಮಾನಸಿಕ ನೆಮ್ಮದಿಗಾಗಿ ಧಾರ್ಮಿಕ ಕಾರ್ಯಗಳನ್ನು ಅಥವಾ ಪುಣ್ಯಕ್ಷೇತ್ರಗಳ ದರ್ಶನ ಮಾಡಲಿರುವಿರಿ. ನಿಮ್ಮ ಸಲಹೆ ಸೂಚನೆಗಳನ್ನು ಹೆಚ್ಚು ಚರ್ಚಿಸದೆ, ಕೇವಲ ನಿಮ್ಮ ಮೇಲಿನ ನಂಬಿಕೆಯಿAದಾಗಿ ಮೇಲಧಿಕಾರಿಗಳು ನಿಮ್ಮ ನಿರ್ಧಾರಗಳನ್ನು ಒಪ್ಪಿಕೊಳ್ಳುವರು
5/ 12
ಲಾಭ ನಷ್ಟಗಳ ಬಗ್ಗೆ ಪುನರವಲೋಕನೆ ಅಗತ್ಯವೆನಿಸುವುದು. ವಿದೇಶಿ ಬಂಡವಾಳಗಳಿಂದ ಲಾಭ ಗಳಿಸುವ ಅವಕಾಶ ಬರಲಿದೆ. ಬರಬೇಕಾಗಿದ್ದ ಹಣಕ್ಕೆ ಇರುವ ಅಡಚಣೆಗಳನ್ನು ನಿವಾರಿಸಿಕೊಳ್ಳುವ ಬಗ್ಗೆ ಮಾರ್ಗದರ್ಶಕರನ್ನು ಭೇಟಿಮಾಡಿ. ವಾಹನದಲ್ಲಿ ಚಲಿಸುವಾಗ ಜಾಗ್ರತೆ ಇರಲಿ
6/ 12
ವ್ಯವಹಾರದಲ್ಲಿ ನೀವು ಈಗ ತೆಗೆದುಕೊಂಡಿದ್ದ ನಿರ್ಧಾರಗಳು ಸರಿಯಾಗಿದೆಯೇ ಎಂದು ಇನ್ನೊಮ್ಮೆ ಪರಾಮರ್ಶಿಸಿಕೊಳ್ಳಿ. ಅಂತರಾಜ್ಯದ ಅತಿ ಮುಖ್ಯವಾದ ವ್ಯಕ್ತಿಯೊಬ್ಬರ ಪರಿಚಯ ನಿಮ್ಮ ವ್ಯಾಪಾರ ಅಭಿವೃದ್ಧಿಯ ದಾರಿ ಹಿಡಿಯಲು ಕಾರಣವಾಗುವುದು
7/ 12
ವ್ಯವಹಾರದಲ್ಲಿ ನೀವು ಈಗ ತೆಗೆದುಕೊಂಡಿದ್ದ ನಿರ್ಧಾರಗಳು ಸರಿಯಾಗಿದೆಯೇ ಎಂದು ಇನ್ನೊಮ್ಮೆ ಪರಾಮರ್ಶಿಸಿಕೊಳ್ಳಿ. ಅಂತರಾಜ್ಯದ ಅತಿ ಮುಖ್ಯವಾದ ವ್ಯಕ್ತಿಯೊಬ್ಬರ ಪರಿಚಯ ನಿಮ್ಮ ವ್ಯಾಪಾರ ಅಭಿವೃದ್ಧಿಯ ದಾರಿ ಹಿಡಿಯಲು ಕಾರಣವಾಗುವುದು
8/ 12
ಹಿರಿಯರ ಮಾರ್ಗದರ್ಶನದಂತೆ ನಡೆದು ಕೆಲಸಗಳನ್ನು ಮಾಡುವುದರಿಂದ ಅಡೆತಡೆಗಳು ಇರುವುದಿಲ್ಲ. ಚಿಂತೆ ಮತ್ತು ಭಯ ಇವೆರಡನ್ನೂ ದೂರ ಮಾಡಿಕೊಳ್ಳುವ ಬಗ್ಗೆ ಪ್ರಯತ್ನಿಸಿ. ಅನಿರೀಕ್ಷಿತವಾಗಿ ಸಂಘ-ಸಂಸ್ಥೆಗಳ ಜವಾಬ್ದಾರಿಯ ಅಧಿಕಾರ ವಹಿಸಬೇಕಾಗುವುದು
9/ 12
ಅತಿಯಾಗಿ ಒತ್ತಡ ತರುವ ಕೆಲಸಗಳಿಂದ ದೂರ ಉಳಿಯುವ ಯೋಚನೆಯು ಸರಿಯಾಗಿರುವುದು. ದಿನಸಿ ವರ್ತಕರಿಗೆ ಉತ್ತಮ ಮಾರಾಟದೊಂದಿಗೆ ಲಾಭವೂ ಇರುವುದು. ಭೂಮಿಗೆ ಸಂಬಂಧಿಸಿದಂತೆ ಹಲವು ದಿನಗಳಿಂದ ಪ್ರಯತ್ನ ಪಟ್ಟ ಕೆಲಸಗಳು ದಿನದ ಅಂತ್ಯಕ್ಕೆ ಫಲ ನೀಡಲಿವೆ
10/ 12
ಸ್ವಯಂ ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲವಿರುವುದು. ರಾಜಕೀಯ ವಿಷಯಗಳಲ್ಲಿ ಮೌನ ವಹಿಸುವುದು ಅತ್ಯಂತ ಲೇಸು. ಯಾವುದೇ ಕಾರಣಕ್ಕೂ ಉದ್ವೇಗಕ್ಕೆ ಒಳಗಾಗದಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುವುದು
11/ 12
ಅಣ್ಣ-ತಮ್ಮಂದಿರ ವರ್ಗದವರ ಮನೆಯಲ್ಲಿನ ಶುಭಕಾರ್ಯಗಳಲ್ಲಿ ಜವಾಬ್ದಾರಿ ವಹಿಸುವಿರಿ. ಸಮೀಪವರ್ತಿಗಳ ಆಶ್ವಾಸನೆ ಹಾಗು ಸಲಹೆ ದೊರೆತು ಶುಭಕಾರ್ಯಗಳತ್ತ ಗಮನ ಹರಿಸುವಿರಿ. ಅಗತ್ಯ ವಸ್ತುಗಳ ಖರೀದಿಗೆ ಹಣ ವಿನಿಯೋಗ ಆಗುವುದು.
12/ 12
ಬಿಡುವಿಲ್ಲದ ಕೆಲಸದಿಂದ ಬಳಲಿದೆ ನಿಮಗೆ ವಿಶ್ರಾಂತಿಗೆ ಸೂಕ್ತವಾದ ಸಮಯ ಸಿಗುವುದು. ಈ ದಿನದಂದು ದಿನಗೂಲಿ ನೌಕರರಿಗೆ ಅನುಕೂಲ ವಾತಾವರಣ ಸಿಗಲಿದೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಲಸ್ಯ ತೋರಿ ಬರುವುದು. ಹೊಸ ವಾಹನ ಖರೀದಿಸುವ ಯೋಗವಿದೆ