ಈ ದಿನದ ನಿಮ್ಮ ಆಶಾವಾದ ಮತ್ತು ಧನಾತ್ಮಕ ವರ್ತನೆ, ಹೆಜ್ಜೆಗಳು ನಿಮ್ಮ ಸುತ್ತಮುತ್ತಲಿನ ಜನರ ಕಣ್ಣನ್ನು ಕೆಂಪಾಗಿಸುತ್ತದೆ. ಸ್ಥಾನ ಲಾಭವಾಗುವುದಲ್ಲದೆ, ದಾಂಪತ್ಯ ಜೀವನ ಸುಖಮಯವಾಗಿರುವುದು, ಹೊಸ ಹುದ್ದೆಯಲ್ಲಿ ಗೌರವ ದೊರೆಯುವುದು.
2/ 12
ಹೊಸ ವಾಹನ ಖರೀದಿ ಅಗತ್ಯವೆನಿಸುತ್ತದೆ. ನಿಮ್ಮ ಮಾನಸಿಕ ಶಕ್ತಿಗಳು ಬಲಯುತವಾಗಿ ಇಂದು ನಿಮ್ಮ ಯೋಚನೆಗಳನ್ನು ಶೀಘ್ರವೇ ಕಾರ್ಯರೂಪಕ್ಕೆ ಇಳಿಸುತ್ತೀರಿ. ಕುಟುಂಬದಲ್ಲಿ ಉತ್ತಮ ವಾತಾವರಣವಿದ್ದು ಸಂತಸ ಹಾಗೂ ಸಮಾಧಾನ ತರಲಿದೆ.
3/ 12
ನಿಮ್ಮ ಆರನೆಯ ಇಂದ್ರಿಯದ ಸಹಾಯ ಇಂದು ನಿಮಗೆ ಉಪಯುಕ್ತವಾಗಲಿದೆ. ವ್ಯಾಪಾರದಲ್ಲಿ ಅತೀವ ಆಸಕ್ತಿ ಮೂಡುತ್ತದೆ. ಅದರಿಂದ ಅಧಿಕ ಲಾಭಂಶ ಹೊಂದುವಿರಿ. ದೇಹಕ್ಕೆ ಆಯಾಸವಾದಲ್ಲಿ, ಸ್ವತಃ ಆರೈಕೆ ಮಾಡಿಕೊಳ್ಳುವುದು ಉತ್ತಮ.
4/ 12
ಮಗನ ವಿವಾಹ ಸಿದ್ಧತೆಗಳು ಭರದಿಂದ ಸಾಗಲಿದೆ. ಇಂದಿನ ನಿಮ್ಮ ಮೃದು ಧೋರಣೆ ಸಿಬ್ಬಂದಿ ವರ್ಗಕ್ಕೆ ಆಶ್ಚರ್ಯ ಹಾಗೂ ಸಂತೋಷವೆನಿಸುವುದು. ಕೆಲವರಿಗೆ ಸಂತಾನ ಭಾಗ್ಯವೂ ಇದೆ. ನಿಮ್ಮಗಿರುವ ಉತ್ತಮ ಹೆಸರಿನಿಂದ ಜನ ಮನ್ನಣೆ ಗಳಿಸಬಹುದು.
5/ 12
ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸುವುದು ಉತ್ತಮ. ಮನೆಯವರುಗಳ ಮಾತಿನಂತೆ ಕೆಲಸ ಕೈಗೊಳ್ಳುವಿರಿ. ಈ ದಿನ ಹೆಂಡತಿ ಆರೋಗ್ಯ ಸುಧಾರಿಸುತ್ತದೆ. ಹೊಸ ಕಾರ್ಯದ ಸಂಪೂರ್ಣ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ನಿಮ್ಮದಾಗಲಿದೆ.
6/ 12
ಇಂದು ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಪ್ರಯತ್ನ ಬಲಕ್ಕೆ ಉತ್ತಮ ಫಲ ದೊರೆಯುವುದು. ವೃತ್ತಿ ಬದಲಾವಣೆಯ ಸಮಸ್ಯೆ ನಿವಾರಣೆಯಾಗುವುದು. ಭೂಮಿ ಖರೀದಿ ವಿಚಾರ ಮುಂದಕ್ಕೆ ಹಾಕುವ ಪರಿಸ್ಥಿತಿ ಕಂಡುಬಂದೀತು
7/ 12
ಕಮಿಷನ್ ಏಜೆಂಟ್ಗಳಿಗೆ ಅಧಿಕ ಆದಾಯ ಉಂಟಾಗುವುದು. ಮನೆಯಲ್ಲಿ ಹಿತಕರ ವಾತಾವರಣ ಇರುತ್ತದೆ. ವಿದ್ಯಾರ್ಥಿಗಳು ಓದು ಮುಂದುವರೆಸುವುದನ್ನು ನಿರ್ಧರಿಸಿ. ನೀವು ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿದರೆ ಉತ್ತಮ.
8/ 12
ನಿಮ್ಮ ಪ್ರಯತ್ನಗಳು ವ್ಯರ್ಥವಲ್ಲ ಎಂಬುದು ನಿಮಗೆ ಈ ದಿನ ತಿಳಿಯುವುದು. ನಿಧಾನವಾಗಿಯಾದರೂ ಅದರ ಲಾಭ ಬಂದು ಕೈ ಸೇರಿದ ಸಂತಸ. ಅವಿವಾಹಿತರಿಗೆ ಕಂಕಣ ಭಾಗ್ಯ. ಸಾಫ್ಟವೇರ್ ಹಾಗೂ ತಾಂತ್ರಿಕ ವಿದ್ಯಾರ್ಥಿಗಳಿಗೆ ನೌಕರಿ ಸಿಗುವ ಲಕ್ಷಣವಿದೆ.
9/ 12
ಈ ದಿನ ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ. ಹಾಗೂ ವಾದ-ವಿವಾದಗಳಿಂದ ಇಂದು ದೂರವಿರಿ. ಕಟ್ಟಡ ಗುತ್ತಿಗೆದಾರರಿಗೆ ಆರ್ಥಿಕವಾಗಿ ನಷ್ಟ ಮತ್ತು ಕಾರ್ಮಿಕರ ಕೊರತೆಯು ಬಾರದಂತೆ ಎಚ್ಚರವಹಿಸಿ
10/ 12
ಇತರರು ನಿಮ್ಮ ಸಮಯವನ್ನು ಯಾಚಿಸುತ್ತಿರುವುದರಿಂದ ನಿಮ್ಮ ಸ್ವಂತ ಕೆಲಸಗಳು ನಿಧಾನ ಗತಿಯಲ್ಲಿ ಸಾಗಲಿದೆ. ಸಮಾಜದಲ್ಲಿ ಹೆಸರು ಸಂಪಾದಿಸಲು ಪೂರಕವಾದ ವಾತಾವರಣ ಮೂಡಿ ಬರಲಿದೆ. ಮಹಾಗಣಪತಿಯನ್ನು ಪೂಜಿಸಿ
11/ 12
ಹೊಸ ಯೋಜನೆಗಳ ತಯಾರಿಗೆ ಒಳ್ಳೆಯ ಸಮಯ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ವಿವಾಹ ಅಪೇಕ್ಷಿಗಳಿಗೆ ಶುಭವಿರುತ್ತದೆ. ಶತ್ರುಗಳ ಬಾಧೆ ದೂರಾಗಿ ನಿಮ್ಮ ಯೋಜನೆಗಳು ಈಡೇರಲಿದೆ. ರೈತಾಪಿ ವರ್ಗದವರ ಕ್ರಿಯಾಶೀಲತೆ ಶುಭದಾಯಕವಾಗುತ್ತದೆ.
12/ 12
ಈ ದಿನ ಯಾವುದೇ ಹೊಸ ವ್ಯಕ್ತಿಗಳಿಂದ ಪ್ರಚೋದನೆಗೆ ಒಳಗಾಗದಿರಿ. ಇಂದು ಶರೀರದಲ್ಲಿ ಉಲ್ಲಾಸ ಹಾಗೂ ಕಾರ್ಯಪ್ರವೃತ್ತಿಯನ್ನು ಹೊಂದುತ್ತೀರಿ. ಅದರಿಂದ ಮನಸ್ಸಿಗೆ ನೆಮ್ಮದಿ ಕಾಣುವಿರಿ. ಗೃಹದಲ್ಲಿ ಶುಭ ಸಮಾರಂಭಗಳು ನಡೆಯುವುದು.