ನಿಮ್ಮ ಸಂಗಾತಿಯಿಂದ ನೀವು ಗೌರವವನ್ನು ಪಡೆಯುತ್ತೀರಿ, ಅದು ನಿಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ. ಕುಟುಂಬ ಸಂಬಂಧಗಳಲ್ಲಿ ಹೊಸ ತಾಜಾತನ ಇರುತ್ತದೆ.
2/ 12
ಪ್ರೀತಿಯ ಸಂಗಾತಿಯೊಂದಿಗೆ ಅಗತ್ಯವಾದ ಸಂಭಾಷಣೆಗಳನ್ನು ನಡೆಸುವಿರಿ, ಇದು ಸಂಬಂಧದಲ್ಲಿ ಹೊಸ ತಾಜಾತನವನ್ನು ತರುತ್ತದೆ.
3/ 12
ನಿಮ್ಮ ಹೊಸ ಆಸೆಗಳನ್ನು ಈಡೇರಿಸಿಕೊಳ್ಳುವಂತಹ ಉತ್ತಮ ಅವಕಾಶಗಳು ಎದುರಾಗುವುವು. ಹೊಸ ವ್ಯವಹಾರಗಳ ಚಾಲನೆಗೆಂದು ಉತ್ತಮ ಮಾರ್ಗದರ್ಶನವನ್ನು ಹೊಂದುವಿರಿ. ಈ ದಿನದಲ್ಲಿ ಗೃಹಿಣಿಯರು ಉತ್ತಮವಾದ ಹೊಗಳಿಕೆಯ ಮಾತುಗಳನ್ನು ಎದುರು ನೋಡಬಹುದು.
4/ 12
ಬದಲಾವಣೆ ಬಯಸಿದಲ್ಲಿ ಕಾಯುವುದು ಆವಶ್ಯ. ನಿಮ್ಮ ಉದ್ಯೋಗದಲ್ಲಿನ ಪ್ರಯತ್ನಗಳು ವ್ಯಕ್ತಿಯೊಬ್ಬರ ಬೆಂಬಲದಿAದ ನೆರವೇರುವುದು. ಮಕ್ಕಳಿಗೆ ಆರೋಗ್ಯ ಭಾಗ್ಯವಿರುವುದು. ಷೇರು ಪೇಟೆಯಿಂದ ಲಾಭ ಗಳಿಸುವಿರಿ. ಅದೃಷ್ಟದಾಯಕ ದಿನವಾಗಿರುತ್ತದೆ.
5/ 12
ಹೊಂದಾಣಿಕೆ ಈ ದಿನ ನಿಮಗೆ ಅಗತ್ಯ. ಧನಾಗಮನಕ್ಕೆ ಯಾವುದೇ ತೊಂದರೆಯಿಲ್ಲ. ಅಧಿಕ ಒತ್ತಡ ದೇಹಕ್ಕೆ ಆಯಾಸವನ್ನು ಮಾಡಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಹೊಸ ಯೋಜನೆಗಳ ತಯಾರಿಗೆ ಒಳ್ಳೆಯ ಸಮಯ. ವಿವಾಹ ಅಪೇಕ್ಷಿಗಳಿಗೆ ಶುಭವಿರುತ್ತದೆ.
6/ 12
ನಿಮ್ಮ ಯೋಜನೆ ಹಾಗೂ ಅವುಗಳ ಬೆಳವಣಿಗೆಯ ಬಗ್ಗೆ ಸಂಬAಧ ಪಟ್ಟವರಲ್ಲಿ ಅಗತ್ಯವಾಗಿ ಚರ್ಚೆ ನಡೆಸಿ ದಿನನಿತ್ಯದ ಆಗುಹೋಗುಗಳ ಬಗ್ಗೆ ಗಮನಹರಿಸಿ. ತೆರಿಗೆ ಇಲಾಖೆ ಸಿಬ್ಬಂದಿಗಳಿಗೆ ಹೆಚ್ಚಿನ ಕೆಲಸವಿರುವುದು. ದಿನಾಂತ್ಯದಲ್ಲಿ ನೆಮ್ಮದಿಯು ಪ್ರಾಪ್ತಿಯಾಗಲಿದೆ
7/ 12
ಆತ್ಮವಿಶ್ವಾಸದಿಂದ ಹೊಸದಾದ ಕೆಲಸವನ್ನು ಆರಂಭಿಸುವಿರಿ. ಕಿರಿಯ ಸೋದರ ನಿಮ್ಮ ನೆರವಿಗೆ ಬರಲಿದ್ದಾನೆ. ಸಂಶೋಧನಾ ಕ್ಷೇತ್ರದಲ್ಲಿನ ಕಾರ್ಯಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಿರಿ. ಮನೆಯ ಹಿರಿಯರೊಬ್ಬರ ಮಧ್ಯಸ್ಥಿಕೆಯಿಂದ ನೆಂಟಸ್ತಿಕೆಯಲ್ಲಿಯೇ ಉತ್ತಮ ಸಂಬಂಧ ಕೂಡಿ ಬರುವುದು
8/ 12
ನಿಮ್ಮ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯ ಸಮ್ಮತವಾಗಿ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಕಳೆದ ವಾರದ ನಿಮ್ಮ ಎಲ್ಲ ಕೆಲಸಗಳು ಸಂಪೂರ್ಣಗೊಂಡು ವಿಫುಲ ಆದಾಯ ಪಡೆದುಕೊಳ್ಳುವಿರಿ. ದಿನವಿಡೀ ಸಂತೋಷ ಸಮಾಧಾನವು ನಿಮಗಿರುವುದು
9/ 12
ಶತ್ರುಗಳ ಬಾಧೆ ದೂರಾಗಿ ನಿಮ್ಮ ಯೋಜನೆಗಳು ಈಡೇರಲಿದೆ. ಅನಿರೀಕ್ಷಿತ ವರ್ಗಾವಣೆಯಿಂದ ಅನುಕೂಲ ಪಡೆದುಕೊಳ್ಳುವಿರಿ ವ್ಯಾಪಾರಸ್ಥರಿಗೆ ಅಧಿಕ ಲಾಭ. ಕೃಷಿ ಕೆಲಸಗಳು ಸಮರ್ಪಕವಾಗಿ ನಡೆದು ಮನಸ್ಸಿಗೆ ನೆಮ್ಮದಿ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸೇವೆ ಮಾಡಿ.
10/ 12
ಆಸ್ತಿ ವಿಷಯಗಳನ್ನು ತ್ವರಿತ ಗತಿಯಲ್ಲಿ ಬಗೆ ಹರಿಸಿಕೊಳ್ಳಲು ಹಿತೈಷಿಯೊಬ್ಬರ ನೆರವು ಪಡೆಯುವಿರಿ. ಆಧ್ಯಾತ್ಮಿಕ ವಿಚಾರಗಳತ್ತ ಗಮನ ಹರಿಸುವಿರಿ. ಗುಪ್ತಚರ ಇಲಾಖೆ ಉದ್ಯೋಗಿಗಳಿಗೆ ಸರ್ಕಾರದಿಂದ ಪ್ರಶಸ್ತಿ ಮತ್ತು ಬಹುಮಾನ ದೊರೆಯಲಿದೆ.
11/ 12
ಮನೆಯಲ್ಲಿ ಪೂಜಾದಿ ಕಾರ್ಯಗಳನ್ನು ನಡೆಸಿ ಧರ್ಮಕಾರ್ಯಗಳಿಗೆ ಹಣ ವಿನಿಯೋಗಿಸುವಿರಿ. ಮಕ್ಕಳ ವಿದ್ಯಾಭ್ಯಾಸ ಉತ್ತಮ. ಕಛೇರಿಯಲ್ಲಿ ಸಹವರ್ತಿಗಳೊಂದಿಗೆ ಸ್ನೇಹ ಭಾವದಿಂದ ವರ್ತಿಸಿ. ಲೇವಾದೇವಿ ವ್ಯವಹಾರಗಳಿಂದ ಗಳಿಸಿದ ಹಣ ಒಳ್ಳೆಯ ಕಾರ್ಯಗಳಿಗೆ ಸಹಾಯವಾಗುವುದು
12/ 12
ಶ್ವಾಸಕೋಶಕ್ಕೆ ಸಂಬಂಧ ಪಟ್ಟ ಕಾಯಿಲೆಗಳ ಲಕ್ಷಣಗಳು ಗಮನಕ್ಕೆ ಬಂದಲ್ಲಿ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಿ ಮನಸ್ಸಿಗೆ ನೆಮ್ಮದಿ. ಆದಾಯ ವೆಚ್ಚಗಳು ಸರಿ ಸಮವಾಗಿರುವುದು. ದೂರ ಪ್ರಯಾಣ ಮಾಡಬೇಕಾದ ಸಂದರ್ಭ ಬರಲಿದೆ