ಕೆಲಸದಲ್ಲಿ ಬಹಳ ದಿನಗಳಿಂದ ಇರುವ ತೊಡಕು ಸುಲಭವಾಗಿ ನಿವಾರಣೆಯಾಗಲಿದೆ. ಬಂಗಾರದ ಆಭರಣ ಅಥವಾ ಬೆಲೆ ಬಾಳುವ ವಸ್ತು ಕಳೆದುಹೋಗುವ ಸಂಭವವಿದೆ. ಜಾಗ್ರತೆವಹಿಸಿ. ಅನಾವಶ್ಯಕವಾಗಿ ಖರ್ಚು ಮಾಡುವುದನ್ನು ಕಡಿಮೆ ಮಾಡಿ.
2/ 12
ಸಾರ್ವಜನಿಕ ರಂಗದಲ್ಲಿ ಮನ್ನಣೆ, ಪೂಜ್ಯ ಗೌರವ ದೊರಕಲಿದೆ. ನಿಮ್ಮ ಮನಸ್ಸಿನ ಅಶಾಂತಿಗೆ ನಿಮ್ಮ ಕೆಟ್ಟ ಆಲೋಚನೆಯು ಮುಖ್ಯ ಕಾರಣವಾಗಿದೆ. ಜೀವನದ ಬಗ್ಗೆ ಸಕಾರಾತ್ಮಕ ರೀತಿಯಲ್ಲಿ ಯೋಚಿಸುವುದನ್ನು ಅಭ್ಯಾಸಿಸಿಕೊಳ್ಳುವುದರಿಂದ ಮನಸ್ಸು ನಿರಾಳವಾಗಲಿದೆ.
3/ 12
ಇಂದಿನ ದಿನ ನಿಮ್ಮ ದೈಹಿಕ ಶ್ರಮಕ್ಕೆ ಸರಿಯಾದ ಫಲಗಳು ಲಭಿಸದೇ ಇರುವ ಕಾರಣದಿಂದಾಗಿ ನಿರಾಸೆ. ಹೊಟ್ಟೆಗೆ ಸಂಬಂಧಿಸಿದಂತೆ ಅನಾರೋಗ್ಯ ಸಮಸ್ಯೆಯು ಎದುರಾಗಬಹುದು. ಆಹಾರ ಸೇವಿಸುವಾಗ ಶುಚಿತ್ವದ ಬಗ್ಗೆ ಹಾಗು ಸಮಯದ ಬಗ್ಗೆ ಗಮನನೀಡಿ
4/ 12
ಅನಿರೀಕ್ಷಿತ ಧನ ಲಾಭದಿಂದಾಗಿ ಸಂತೋಷವಾಗುವುದು. ದೇವರ ಅನುಗ್ರಹದಿಂದ ಉದ್ಯೋಗದಲ್ಲಿ ಯಶಸ್ಸು ಪ್ರಾಪ್ತಿಯಾಗುವುದು. ನಿಮಗೆ ತೊಂದರೆ ಮಾಡುವವರಲ್ಲಿಯೂ ಸಹ ಮಿತ್ರತ್ವವನ್ನು ತೋರಿಸಿ. ಪ್ರಯಾಣದಿಂದಾಗಿ ದೇಹಾಯಾಸವಾಗಲಿದೆ.
5/ 12
ಹಣಕಾಸಿನ ಪರಿಸ್ಥಿತಿಯು ಏರುಪೇರಾಗಬಹುದು, ಎಚ್ಚರಿಕೆಯಿಂದಿರಿ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಎದುರಾಗಲಿದೆ ಹಾಗು ಅವರ ಕೆಲವೊಂದು ಮಾತು ಅಥವಾ ಘಟನೆಗಳು ನಿಮ್ಮ ಅಸಹನೆಗೆ ಕಾರಣವಾಗಲೂಬಹುದು.
6/ 12
ವ್ಯಾಪಾರಸ್ಥರಿಕೆ ತಮ್ಮ ವೃತ್ತಿಯಲ್ಲಿ ಬಿಡುವಿಲ್ಲದಂತೆ ಆಗಲಿದೆ. ನಿಮ್ಮ ಅಧಿಕಾರಿಗಳು ನಿಮ್ಮ ಗುಣಗಾನವನ್ನು ಮಾಡುವಂತಾಗಲಿದೆ. ವಿದ್ಯಾರ್ಥಿಗಳ ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುವ ಕನಸು ಈಡೇರುವ ಲಕ್ಷಣಗಳು ಗೋಚರವಾಗುವುದು
7/ 12
ಪಾಲುದಾರಿಕೆ ವ್ಯವಹಾರದಲ್ಲಿ ಮೋಸ ಹೋಗುವಂತಾಗಲಿದೆ. ಹಣಕಾಸಿನ ವಿಚಾರದಲ್ಲಿ ವಂಚನಾ ಪ್ರಸಂಗಗಳು ನೆಡೆಯುವುದು. ಹೊಸ ಮನೆಯ ಅಥವಾ ಕೃಷಿ ಭೂಮಿಯ ಖರೀದಿಯ ನಿರ್ಧಾರವನ್ನು ಹಿರಿಯರ ಸಲಹೆಯನ್ನು ಪಡೆದು ತೀರ್ಮಾನಿಸುವುದು ಒಳ್ಳೆಯದು.
8/ 12
ಬಹಳ ವರ್ಷದ ನಂತರದ ಸಹೋದರರ ಆಗಮನವು ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಹೆಚ್ಚಿಸಲಿದೆ. ಕೌಟುಂಬಿಕ ವಿಚಾರದಲ್ಲಿನ ಮಹತ್ವದ ನಿರ್ಧಾರವನ್ನು ಸ್ವೀಕರಿಸುವ ಮುನ್ನ ಮನೆ ದೇವರ ದರ್ಶನ ಮತ್ತು ಹಿರಿಯರ ಸಲಹೆಯನ್ನು ಸ್ವೀಕರಿಸಿ.
9/ 12
ನೂತನವಾದ ಯಂತ್ರೋಪಕರಣಗಳ ಅಥವಾ ವಾಹನದ ಖರೀದಿಗೆ ಈ ದಿನ ಹಣ ವ್ಯವವಾಗಲಿದೆ. ವ್ಯವಹಾರದಲ್ಲಿನ ನಿಮ್ಮ ಬುದ್ಧಿವಂತಿಕೆಯು ಅಧಿಕ ಲಾಭವನ್ನು ತಂದು ಕೊಡಲಿದೆ. ಲೇಖನ ಬರಹಗಾರರಿಗೆ ವಿಶಿಷ್ಟವಾದ ವಿಚಾರ ದೊರೆತು ಬರವಣಿಗೆಯ ಹುಚ್ಚು ಹೆಚ್ಚಾಗುವುದು
10/ 12
ಬಾಲ್ಯ ಸ್ನೇಹಿತರ ಬೇಟಿಯಿಂದಾಗಿ ಸಂತಸದ ವಾತಾವರಣ ಸೃಷ್ಟಿಯಾಗಲಿದೆ. ಆಸ್ತಿ ಖರೀದಿಯ ಬಗೆಗಿನ ದೃಢ ನಿರ್ಧಾರದಲ್ಲಿ ಇನ್ನೊಮ್ಮೆ ಯೋಚಿಸುವುದು ಉತ್ತಮವಾಗಿರುವುದು. ಮಕ್ಕಳ ಆರೋಗ್ಯದಲ್ಲಿ ಹಲ್ಲು ನೋವಿನಂತಹ ಸಣ್ಣ ಪುಟ್ಟ ತೊಂದರೆಯು ಬಾಧಿಸಲಿದೆ.
11/ 12
ನಿಮ್ಮ ಮನಸ್ಸಿನ ಚಂಚಲತೆಯು ಗೊಂದಲಕ್ಕೆ ಕಾರಣವನ್ನು ಮಾಡಲಿದೆ. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯವನ್ನು ದೂರಮಾಡಿ ಪುನಃ ನೂತನ ದಾಂಪತ್ಯವನ್ನು ಪ್ರಾರಂಭಿಸಿ. ಸಹೋದರ ವರ್ಗದವರಿಂದ ಉಡುಗೊರೆಯ ರೂಪದಲ್ಲಿ ಆರ್ಥಿಕ ಸಹಾಯ ಸಿಗಲಿದೆ.
12/ 12
ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇಮ್ಮಡಿಗೊಳ್ಳಲಿದೆ. ಉದ್ಯೋಗದಲ್ಲಿ ಬೇಜವಾಬ್ದಾರಿತನದಿಂದ ಮಾಡಿದ ತಪ್ಪು ಎಲ್ಲರೆದುರು ತಲೆ ತಗ್ಗಿಸುವಂತೆ ಮಾಡುವುದು. ಆದ್ದರಿಂದ ವಿಘ್ನನಿವಾರಕ ಗಣಪತಿಯನ್ನು ಅನನ್ಯ ಭಾವದಿಂದ ಆರಾಧಿಸಿ.