ಓದು ಅಥವಾ ಉದ್ಯೋಗ ಆಯ್ಕೆ ವಿಚಾರದಲ್ಲಿ ಸ್ನೇಹಿತರಿಂದ ಸೂಕ್ತ ಸಲಹೆ ದೊರೆಯಲಿದೆ. ಷೇರುಗಳಲ್ಲಿ ಹೂಡಿಕೆ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಅತ್ಯಂತ ಲಾಭದಾಯಕವಾಗಿ ತೋರುವುದಿಲ್ಲ. ತೋಟದ ಕೆಲಸಗಳಿಗಾಗಿ ಹೆಚ್ಚಿನ ಶ್ರಮ ಪಡುವಂತಾಗಲಿದೆ.
3/ 13
ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳವಾಗುವುದು. ಖರ್ಚಿನ ವಿಚಾರದಲ್ಲಿ ಮಿತವ್ಯಯಿಗಳಾಗುವ ಪ್ರಯತ್ನದಿಂದಾಗಿ ಶ್ರೀಮಂತಿಗೆ ಗಳಿಸಬಹುದು. ಗುರುಗಳ ಮನಸ್ಸಿಗೆ ನೋವು ಉಂಟುಮಾಡುವಂತಹ ಕೆಲಸವನ್ನು ಮಾಡದಿರಿ.
4/ 13
ನೀವು ಹಿಂದೆ ಮಗನ ಒಳಿತಿಗಾಗಿ ತೆಗೆದುಕೊಂಡ ಕೆಲ ಕಠಿಣ ನಿರ್ಧಾರಗಳಿಂದಾಗಿ ಇಂದು ಉತ್ತಮ ಫಲ ನಿರೀಕ್ಷಿಸ ಬಹುದಾಗಿದೆ. ಊರಿನಿಂದ ಶುಭ ಸುದ್ದಿ ಕೇಳುವಿರಿ. ದಾಂಪತ್ಯದಲ್ಲಿ ಸಂಶಯದ ವಾತಾವರಣ ಸೃಷ್ಟಿಯಾಗದಂತೆ ಜೀವನವನ್ನು ನೆಡೆಸಿ.
5/ 13
ಮಗನಿಗೆ ಸಂಸ್ಥೆ ವತಿಯಿಂದ ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ನೆರವು ಸಿಗುವುದು. ಆಕಸ್ಮಿಕ ಧನಾಗಮನದಿಂದಾಗಿ ಬಾಕಿ ಇರಿಸಿದ ವ್ಯವಹಾರವು ಪೂರ್ಣಗೊಳ್ಳುವುದು. ದೇಹದಲ್ಲಿ ಪಿತ್ತಾಧಿಕ್ಯವಾಗಿರುವುದರಿಂದ ಅನಾರೋಗ್ಯ. ವಿದ್ಯಾಭ್ಯಾಸದಲ್ಲಿ ಯಶಸ್ಸಿದೆ.
6/ 13
ಮಗನೊಡನೆ ಗಹನವಾದ ಮಾತುಕತೆ ನಡೆಯುವ ಸಂಭವವಿದೆ. ತಾಳ್ಮೆ, ಸಮಾಧಾನ ಕಳೆದುಕೊಂಡಲ್ಲಿ ಅನಾವಶ್ಯಕವಾಗಿ ಕಲಹ ಉಂಟಾದೀತು. ಒಣಪ್ರತಿಷ್ಠೆಯಿಂದಾಗಿ ಸಂಬಂಧಗಳು ನುಚ್ಚುನೂರಾಗುವ ಪರಿಸ್ಥಿತಿಯನ್ನು ತಂದುಕೊಳ್ಳಬೇಡಿ
7/ 13
ವರಮಾನ ತೆರಿಗೆ ಸಿಬ್ಬಂದಿಗಳಿಗೆ ಕೆಲಸದಲ್ಲಿ ಸ್ವಲ್ಪ ಬಿಡುವು ಸಿಗುವುದು. ಕೋರ್ಟು ವ್ಯವಹಾರದಲ್ಲಿ ಬಹುನಿರೀಕ್ಷಿತವಾದ ಜಯದ ಸಿಹಿಯನ್ನು ಅನಿರೀಕ್ಷಿತವಾದ ಸೋಲಿನ ಕಹಿ ಕಸಿಯುವ ಸಾಧ್ಯತೆಗಳಿವೆ. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಸಾಧ್ಯತೆಯಿದೆ.
8/ 13
ನಿಮ್ಮ ದುಡುಕು ನಿರ್ಧಾರಗಳಿಂದ ಇತರರಿಗೆ ನೋವು ಉಂಟಾಗುವ ಲಕ್ಷಣಗಳಿವೆ. ಆಗಾಗ ಒಂಟಿತನದ ಚಿಂತೆಯು ಕಾಡಲಿದೆ ಆದರೆ ಹೆಂಡತಿಯ ಆರೋಗ್ಯದ ಬಗ್ಗೆ ಅನಗತ್ಯ ಭೀತಿ ಬೇಡ. ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳುವುದು ಸರಿ ಎನಿಸುವುದು
9/ 13
ಅಧಿಕಾರಿಗಳ ದಿಢೀರ್ ಭೇಟಿಯಿಂದ ಕೆಲಸ ಕಾರ್ಯಗಳು ಏರು-ಪೇರಾಗುವುದು. ಕಾರ್ಯರಂಗದಲ್ಲಿ ಅಪವಾದದ ಭೀತಿ ಕಳವಳ ಮೂಡಿಸಲಿದೆ. ವ್ಯಾಪಾರ-ವ್ಯವಹಾರದಲ್ಲಿ ಲಾಭಾಂಶ ಕಡಿಮೆಯಾದರೂ ಮೂಲಧನಕ್ಕೆ ಮೋಸವಾಗುವುದಿಲ್ಲ.
10/ 13
ವಿಮಾ ಕ್ಷೆತ್ರದಲ್ಲಿ ಹೆಚ್ಚಿನ ಸಾಧನೆ ತೋರಿದ್ದಕ್ಕೆ ಸಂಸ್ಥೆಯವರಿಂದ ನಿಮಗೆ ವಿಶೇಷ ಪುರಸ್ಕಾರಗಳು ದೊರೆಯಲಿದೆ. ಷೇರು ಬಂಡವಾಳದಲ್ಲಿ ಹೆಚ್ಚು ಲಾಭ ಸಿಗುವುದು. ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವಿರಿ. ಆರೋಗ್ಯದಲ್ಲಿ ಹೆಚ್ಚಿನ ಗಮನವಿರಲಿ
11/ 13
ರಾಸಾಯನಿಕ ವಸ್ತು ವ್ಯಾಪಾರದಿಂದ ಹೆಚ್ಚಿನ ಲಾಭಗಳಿಸುವಿರಿ. ಆಡಳಿತ ಕೆಲಸಗಳಿಗಾಗಿ ಸೂಕ್ತ ವ್ಯಕ್ತಿಯನ್ನು ತಿಳಿಸುವಂತೆ ಪರಿಚಿತರಲ್ಲಿ ಕೇಳಿಕೊಳ್ಳುವುದರಿಂದ ಸುಲಭವಾಗಿ ಫಲ ಸಿಗುವುದು. ಬಿಳಿ ಬಣ್ಣವು ಶುಭವನ್ನು ಉಂಟುಮಾಡುವುದು
12/ 13
ಮಕ್ಕಳ ವಿಚಾರದಲ್ಲಿ ಕಾಳಜಿ ತೋರುವ ಅನಿವಾರ್ಯತೆ ಹೆಚ್ಚಲಿದೆ. ನೃತ್ಯಾಭ್ಯಾಸ ಮುಂದುವರೆಸುವಂತೆ ಮನೆಯವರಿಂದ ಒತ್ತಾಯ ಹೆಚ್ಚುವುದು. ಓದಿನಲ್ಲಿ ಏಕಾಗ್ರತೆಯನ್ನು ಸಾಧಿಸಿ. ಶ್ರೀ ಶಾರದೆಯನ್ನು ಸ್ತುತಿಸುವುದರಿಂದ ಮೇಧಾಶಕ್ತಿ ಅಭಿವೃದ್ಧಿಯಾಗುವುದು
13/ 13
ವೈದ್ಯ ವಿದ್ಯಾರ್ಥಿಗಳಿಗೆ ಓದಿನತ್ತ ಗಮನ ಹೆಚ್ಚುವುದು. ತೆರೆ ಮರೆಯಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳನ್ನು ಆಪ್ತರೊಬ್ಬರಿಂದ ತಿಳಿದುಕೊಳ್ಳುವಿರಿ. ಅವಶ್ಯಕ ವಸ್ತುಗಳ ಗಳಿಕೆಯಿಂದ ಸಂತೋಷ ವೃದ್ಧಿಯಾಗುವುದು.