Horoscope Today 20 December 2022: ಈ ರಾಶಿಯವರು ಇಂದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ನಿಮ್ಮ ಜಾತಕದಲ್ಲಿ ಏನಿದೆ ನೋಡಿ
Horoscope Today 20 December 2022: ಇಂದು ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರ ಮಾಸ ಧನು ಚಂದ್ರಮಾಸ ಮಾರ್ಗಶಿರ ಕೃಷ್ಣ ಪಕ್ಷ ದ್ವಾದಶಿ ತಿಥಿ ಮಂಗಳವಾರ ಸ್ವಾತಿ ನಕ್ಷತ್ರ ಸುಖ ಕರ್ಮ ಯೋಗ ಕೌಲವ ಕರಣ ಮಂಗಳವಾರ ಆಗಿರುತ್ತದೆ. ಹಾಗೆಯೇ ರಾಹುಕಾಲ 3. 15pm ನಿಂದ 4. 40 pm ವರೆಗೆ, ಗುಳಿಕಕಾಲ 12. 24 pm ನಿಂದ 1.50 pm ವರೆಗೆ, ಯಮಗಂಡ ಕಾಲ 9. 34am ನಿಂದ 10.59 am ವರೆಗೆ ಇರುತ್ತದೆ. ಇಂದು ಸೂರ್ಯೋದಯ 6. 44 am ಸೂರ್ಯಾಸ್ತ6.05 pm, ಚಂದ್ರೋದಯ 4.18am, ಚಂದ್ರಾಸ್ತ 3.13pm ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮೇಷ ರಾಶಿ: ಈ ರಾಶಿಯವರು ಇಂದು ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನಹರಿಸಬೇಕು. ಅಲ್ಲದೇ, ಇಂದು ದೂರ ಪ್ರಯಾಣ ಮಾಡಬೇಡಿ. ಪ್ರೀತಿ ಪಾತ್ರರೊಂದಿಗೆ ಜಗಳವಾಗಬಹುದು
2/ 12
ವೃಷಭ ರಾಶಿ: ಇಂದು ಹೊಸ ಆದಾಯದ ಮೂಲಗಳನ್ನು ಸೃಷ್ಟಿ ಆಗಬಹುದು, ಹಾಗೆಯೇ ಆಸ್ತಿ ಸಿಗುವ ಸಾಧ್ಯತೆ ಇದೆ. ಇದರ ಜೊತೆಗೆ ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡುವುದು ಒಳ್ಳೆಯದು.
3/ 12
ಮಿಥುನ ರಾಶಿ: ಕೆಲಸದ ಸ್ಥಳದಲ್ಲಿ ನಿಮ್ಮ ಖ್ಯಾತಿ ಹೆಚ್ಚುತ್ತದೆ ನಿಮ್ಮ ಕೆಲಸದ ಗುಣಮಟ್ಟವನ್ನು ನೀವು ಸುಧಾರಿಸಬೇಕಾಗುತ್ತದೆ
4/ 12
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಕೆಲಸವನ್ನು ಬದಲಿಸುವ ಯೋಚನೆ ಇದ್ದರೆ ಇಂದು ತುಂಬಾ ಒಳ್ಳೆಯ ದಿನ. ಮೇಲಾಧಿಕಾರಿ ಮತ್ತು ನಿಮ್ಮೊಂದಿಗಿನ ಸಂಬಂಧ ಇನ್ನೂ ಉತ್ತಮವಾಗುತ್ತದೆ.
5/ 12
ಸಿಂಹ ರಾಶಿ: ಸಿಂಹ ರಾಶಿಯವರ ಆಲೋಚನೆಯೂ ಇಂದು ನಕಾರಾತ್ಮಕವಾಗಿ ಇರುತ್ತದೆ. ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಸಹ ಇದೆ
6/ 12
ಕನ್ಯಾ ರಾಶಿ: ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ವಿಶೇಷವಾಗಿ ಅನುಕೂಲ ಆಗುವುದು. ಹಲವು ದಿನಗಳಿಂದ ಇದ್ದ ಕೆಲಸವು ಇಂದು ಪೂರ್ಣಗೊಳ್ಳಲಿದೆ
7/ 12
ತುಲಾ ರಾಶಿ: ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಲಾಭ ಇರುತ್ತದೆ.ಈ ದಿನ ನೀವು ಹೊಸ ಉದ್ಯೋಗವನ್ನು ಪ್ರಾರಂಭಿಸಬಹುದು. ಅಲ್ಲದೇ ಸಂತೋಷದ ವಿಚಾರ ಎಂದರೆ ಶತ್ರುಗಳಿಂದ ಮುಕ್ತಿ ಪಡೆಯುವಿರಿ
8/ 12
ವೃಶ್ಚಿಕ ರಾಶಿ: ನೀವು ಸೃಜನಶೀಲ ಕೆಲಸದಲ್ಲಿ ಯಶಸ್ಸನ್ನು ಪಡೆಯುವುದು ಖಚಿತ. ಮಕ್ಕಳು ಪೋಷಕರ ಮಾತನ್ನು ಕೇಳುವುದರಿಂದ ಲಾಭವಿದೆ.
9/ 12
ಧನು ರಾಶಿ: ನಿಮ್ಮ ಯೋಜನೆಯಲ್ಲಿನ ಬದಲಾವಣೆಯು ಕೆಲಸವನ್ನು ಹಾಳು ಮಾಡಬಹುದು. ಆಸ್ಪತ್ರೆಗೆ ಹೋಗಬೇಕಾದ ಸಂದರ್ಭ ಬರಬಹುದು
10/ 12
ಮಕರ ರಾಶಿ: ವ್ಯವಹಾರದಲ್ಲಿ ದೊಡ್ಡ ಲಾಭವನ್ನು ಪಡೆಯುವ ದಿನ. ಅನಗತ್ಯ ವೆಚ್ಚದ ಮೇಲೆ ಹಿಡಿತ ಇರಲಿ ಸಂಗಾತಿಯೊಂದಿಗಿನ ಸಂಬಂಧ ಮಧುರವಾಗಿರುತ್ತದೆ
11/ 12
ಕುಂಭ ರಾಶಿ: ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಜನರು ನಿಮ್ಮ ಬೆನ್ನ ಹಿಂದೆ ನಿಮ್ಮನ್ನು ಟೀಕಿಸುತ್ತಾರೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಹುದು. ಆದರೆ ಹೆಚ್ಚು ಚಿಂತೆ ಮಾಡಬೇಡಿ
12/ 12
ಮೀನ ರಾಶಿ: ನಿಮ್ಮ ಕೆಲಸದ ಶೈಲಿಯಲ್ಲಿ ಉತ್ತಮ ಬದಲಾವಣೆಯನ್ನು ಮಾಡಬಹುದು. ಕಚೇರಿಯಲ್ಲಿ ಹಿರಿಯರ ಬೆಂಬಲವನ್ನು ಪಡೆಯುತ್ತೀರಿ. ಇದರಿಂದ ಯಶಸ್ಸು ಸಿಗುತ್ತದೆ.