Astrology: ಭಾವನಾತ್ಮಕವಾಗಿ ಕುಗ್ಗುತ್ತಾರೆ ಈ ರಾಶಿಯವರು; ಇಲ್ಲಿದೆ ದಿನಭವಿಷ್ಯ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಮಾರ್ಚ್ 21-ಏಪ್ರಿಲ್ 19: ಉಳಿದಿರುವ ಕೆಲಸಗಳನ್ನು ಮುಂದುವರಿಸಲು ಮತ್ತು ಹಿಂದಿನ ಬಾಕಿಗಳನ್ನು ಪಾವತಿಸಲು ಉತ್ತಮ ದಿನ| ಸೋಂಕುಗಳು ಅಥವಾ ತಲೆನೋವುಗಳ ಬಗ್ಗೆ ಎಚ್ಚರವಹಿಸಿ. ಜಗಳದ ಸಂದರ್ಭದಲ್ಲಿ ಶಾಂತವಾಗಿರಲು ಪ್ರಯತ್ನಿಸಿ. ಅದೃಷ್ಟದ ಚಿಹ್ನೆ - ಉದ್ಯಾನ
2/ 12
ವೃಷಭ : ಏಪ್ರಿಲ್ 20-ಮೇ 20: ಇದು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸುವಂತೆ ಮನಸ್ಸು ಪ್ರೇರೆಪಿಸುತ್ತದೆ. ಯಾರಾದರೂ ಸಾಲವನ್ನು ಕೇಳಿದರೆ ನಿರಾಕರಿಸಬಹುದು. ಅದೃಷ್ಟದ ಚಿಹ್ನೆ - ಎರಡು ಗರಿಗಳು
3/ 12
ಮಿಥುನ: ಮೇ 21- ಜೂನ್ 21: ಬಲಶಾಲಿಯಾಗುವಂತೆ ಕಂಡರು ಭಾವನಾತ್ಮಕವಾಗಿ ಮೃದುವಾಗುತ್ತೀರ. ಸಮತೋಲನವನ್ನು ಸಾಧಿಸಲು ಕೆಲವು ಸಂಧಾನ ತಂತ್ರಗಳು ಬೇಕಾಗುತ್ತವೆ. ಸಹೋದ್ಯೋಗಿ ಸಹಾಯ ಕೇಳಬಹುದು. ಅದೃಷ್ಟದ ಚಿಹ್ನೆ - ಬೆಣಚುಕಲ್ಲುಗಳು
4/ 12
ಕಟಕ: ಜೂನ್ 22- ಜುಲೈ 22: ಹಳೆಯ ಪರಿಚಯಸ್ಥರನ್ನು ಭೇಟಿಯಾಗುವ ಸಾಧ್ಯತೆಯಿದೆ. ಹೊಸ ವಿಚಾರಗಳನ್ನು ಬೆಂಬಲಿಸಲು ಯೋಜಿಸುತ್ತಿದ್ದರೆ, ನೀವು ಈಗ ಅವಕಾಶವನ್ನು ನೋಡಬಹುದು. ಅದೃಷ್ಟದ ಚಿಹ್ನೆ - ಕೈಯಿಂದ ಮಾಡಿದ ಕಾಗದ
5/ 12
ಸಿಂಹ : ಜುಲೈ 23- ಆಗಸ್ಟ್ 22: ದಿಢೀರ್ ಅತಿಥಿಗಳು ಆಗಮಿಸಬಹುದು. ಕೆಲವು ಬಾಕಿ ಪೂರ್ಣಗೊಳಿಸಬಹುದು. ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿ. ಅದೃಷ್ಟದ ಚಿಹ್ನೆ - ಮುತ್ತುಗಳು
6/ 12
ಕನ್ಯಾ : ಆಗಸ್ಟ್ 23-ಸೆಪ್ಟೆಂಬರ್ 22: ಕೆಲಸದ ವಾತಾವರಣವು ಅನುಕೂಲಕರವಾಗಿ ಕಾಣುತ್ತದೆ, ದೀರ್ಘಾವಧಿಯ ಸಂಭಾಷಣೆಯನ್ನು ನೀವು ಆಯ್ಕೆ ಮಾಡಬಹುದು. ನಿದ್ರೆ ಕೊರತೆ ಕಾಡಲಿದೆ. ಅದೃಷ್ಟದ ಚಿಹ್ನೆ - ಮನೆ ಬಾಗಿಲು
7/ 12
ತುಲಾ : ಸೆಪ್ಟೆಂಬರ್ 23- ಅಕ್ಟೋಬರ್ 23: ಆರೋಗ್ಯ ಸ್ಥಿತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಕೆಲವು ವಿಚಾರಗಳ ಬಗ್ಗೆ ಕಾಳಜಿವಹಿಸ. ಅದೃಷ್ಟದ ಚಿಹ್ನೆ - ಕೆಂಪು ಸ್ಕ್ರ್ಯಾಫ್
8/ 12
ವೃಶ್ಚಿಕ: ಅಕ್ಟೋಬರ್ 24 - ನವೆಂಬರ್ 21: ಕೆಟ್ಟ ಕನಸುಗಳು ಮನಸ್ಸಿನಲ್ಲಿ ಭಯ ಮೂಡಿಸುತ್ತದೆ. ಅವುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಹಳೆಯ ಸ್ನೇಹಿತನನ್ನು ಭೇಟಿಯಾಗಬಹುದು. ಅದೃಷ್ಟದ ಚಿಹ್ನೆ - ಇಟ್ಟಿಗೆ ಗೋಡೆ
9/ 12
ಧನುಸ್ಸು: ನವೆಂಬರ್ 22 - ಡಿಸೆಂಬರ್ 21: ಹತ್ತಿರದ ಯಾರೋ ಒಬ್ಬರು ನಿಮ್ಮಿಂದ ಮರೆಯಾಗುತ್ತಿದದಾರೆ. ನಿಮ್ಮ ಪ್ರೀತಿಪಾತ್ರರಿಗಾಗಿ ಸಮಯ ಮೀಸಲಿಡಿ. ಸಂಜೆಯ ಪ್ರವಾಸದ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ- ನಿಯಾನ್ ಚಿಹ್ನೆ
10/ 12
ಮಕರ: ಡಿಸೆಂಬರ್ 22 - ಜನವರಿ 19: ಹಳೆಯ ನೆನಪುಗಳು ದಿನವನ್ನು ಆಳುವ ಸಾಧ್ಯತೆಯಿದೆ. ಕೆಲವು ವಿಚಾರದಲ್ಲಿ ಹಳೆಯ ವಿಧಾನಕ್ಕಾಗಿ ಹೊಸ ಯೋಜನೆಯನ್ನು ರಚಿಸಿ. ತಾಯಿ ಆರೋಗ್ಯದ ಬಗ್ಗೆ ಇರಲಿ ಕಾಳಜಿ. ಅದೃಷ್ಟದ ಚಿಹ್ನೆ - ಗಾಜಿನ ಬಾಟಲಿ
11/ 12
ಕುಂಭ : ಜನವರಿ 20- ಫೆಬ್ರವರಿ 18: ನಿಮ್ಮ ಭಯ ಈಗ ನಿಯಂತ್ರಣದಲ್ಲಿದೆ. ಇನ್ನು ಕೆಟ್ಟ ಕನಸುಗಳಿಲ್ಲ, ಕಾಲ ಬದಲಾಗಿದೆ. ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯುವ ಸಾಧ್ಯತೆಯಿದೆ. ಅದೃಷ್ಟದ ಚಿಹ್ನೆ - ಒಂದು ಆಲದ ಮರ
12/ 12
ಮೀನ : ಫೆಬ್ರವರಿ 19 - ಮಾರ್ಚ್ 20: ನೀವು ನಿಮ್ಮ ಕುಟುಂಬದ ಭಾವನಾತ್ಮಕ ಬೆಂಬಲ ಪಡೆಯುತ್ತಿರ. ವೈದ್ಯಕೀಯ ವೃತ್ತಿಪರರು ಸಾಮಾನ್ಯಕ್ಕಿಂತ ಹೆಚ್ಚು ಕಾರ್ಯನಿರತ ದಿನವನ್ನು ಹೊಂದಿರುತ್ತಾರೆ. ಸರ್ಕಾರಿ ಅಧಿಕಾರಿಗಳು ಅಡೆತಡೆಗಳನ್ನು ಅನುಭವಿಸುತ್ತಾರೆ. ಅದೃಷ್ಟದ ಚಿಹ್ನೆ - ಪಕ್ಷಿಗಳು ಒಟ್ಟಿಗೆ