Astrology: ಈ ದಿನ ನೀವು ಆಫೀಸಿಗೆ ರಜೆ ಹಾಕಿದ್ರೆ, ಗುಡ್ ನ್ಯೂಸ್ ಸಿಗುತ್ತೆ!
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ ರಾಶಿ: ಹೊಸ ವರ್ಷದಿಂದ ನಿಮ್ಮ ಹಣ ಹೆಚ್ಚಾಗಿ ಖರ್ಚು ಆಗುತ್ತದೆ, ಹುಷಾರಾಗಿರಿ. ನಿಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನವಹಿಸಿ. ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ - ಹಳದಿ ನೀಲಮಣಿ.
2/ 12
ವೃಷಭ ರಾಶಿ: ಕೆಲಸ ಮತ್ತು ವೈಯಕ್ತಿಕ ಜೀವನಕ್ಕೆ ಪ್ರತ್ಯೇಕ ಸಮಯವನ್ನು ನೀಡಿ. ನೀವು ಬಡವರಿಗೆ ಆಹಾರ ದಾನವನ್ನು ಮಾಡಿ. ಇನ್ನೊಬ್ಬರಿಗೆ ಆರ್ಡರ್ ಮಾಡುವುದನ್ನು ಮೊದಲು ನಿಲ್ಲಿಸಿ. ಅದೃಷ್ಟದ ಚಿಹ್ನೆ - ಒಂದು ಸ್ಮಾರಕ.
3/ 12
ಮಿಥುನ ರಾಶಿ: ಕೆಲವೊಮ್ಮೆ ನೀವು ಏಕಾಂತವನ್ನು ಬಯಸುತ್ತೀರ. ಆದರೆ ನಿಮ್ಮ ಸ್ನೇಹಿತರು ಇದನ್ನು ತಪ್ಪಿಸುತ್ತಾರೆ. ನೀವು ಹೊಸತನವನ್ನು ಕಲಿಯಲು ಇಚ್ಛಿಸುತ್ತಿದ್ದರೆ ಅದನ್ನು ಟ್ರೈ ಮಾಡಿ. ಉತ್ತಮ ಫಲಿತಾಂಶ ಖಂಡಿತ ದೊರೆಯುತ್ತದೆ. ಅದೃಷ್ಟದ ಚಿಹ್ನೆ - ಕಪ್ಪು ಮಣಿ.
4/ 12
ಕರ್ಕಾಟಕ ರಾಶಿ: ಏನೇ ತೊಂದರೆಯಲ್ಲಿ ನೀವು ಸಿಲುಕಿಕೊಂಡಿದ್ದರೆ ಅದರಿಂದ ಇನ್ನು ಒಂದು ವಾರದಲ್ಲಿ ಹೊರಗೆ ಬರುತ್ತೀರ. ನಿಶ್ಚಿಂತೆಯಿಂದ ಇರಿ. ಹೊಸ ಕೆಲಸವು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಅದೃಷ್ಟದ ಚಿಹ್ನೆ - ಕಿತ್ತಳೆ ಹಣ್ಣು.
5/ 12
ಸಿಂಹ ರಾಶಿ: ನಿಮ್ಮ ಪ್ರೀತಿಪಾತ್ರರಿಂದ ಗುಡ್ನ್ಯೂಸ್ ಸಿಗುತ್ತೆ. ಏನು ಅಂತ ಕಾಯುತ್ತಾ ಇರಿ. ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸಲು ಇಂದು ಉತ್ತಮ ದಿನವಾಗಿದೆ. ಅದೃಷ್ಟದ ಚಿಹ್ನೆ - ಹಸಿರು ಮಣಿ.
6/ 12
ಕನ್ಯಾ ರಾಶಿ: ಕುಟುಂಬದಿಂದ ನೀವು ತುಂಬಾ ನೊಂದಿದ್ದೀರ. ಈ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಕೆಲವೇ ದಿನಗಳಲ್ಲಿ ಸರಿ ಆಗುತ್ತದೆ. ಹಸಿರು ತರಕಾರಿಗಳನ್ನು ಬಡವರಿಗೆ ದಾನ ಮಾಡಿ. ಅದೃಷ್ಟದ ಚಿಹ್ನೆ - ಸ್ಫಟಿಕ ಶಿಲೆ.
7/ 12
ತುಲಾ ರಾಶಿ: ಅದೆಷ್ಟೋ ದಿನಗಳಿಂದ ನೀವು ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡಬೇಕೆಂದು ಕಾಯುತ್ತಾ ಇದ್ದೀರ. ಇಂದು ಅದಕ್ಕೆ ಉತ್ತಮ ದಿನವಾಗಿದೆ. ಆರೋಗ್ಯದ ವಿಷಯದಲ್ಲಿ ಹುಷಾರಾಗಿರಬೇಕು. ಅದೃಷ್ಟದ ಚಿಹ್ನೆ - ಡ್ರೀಮ್ಕ್ಯಾಚರ್.
8/ 12
ವೃಶ್ಚಿಕ ರಾಶಿ: ನೀವು ಇನ್ನೊಬ್ಬರಿಗೆ ಸ್ಫೂರ್ತಿ ಆಗುತ್ತೀರ. ನಿಮ್ಮ ಮಾತಿನಲ್ಲಿ ಎಂದಿಗೂ ಸತ್ಯವಿರುತ್ತದೆ. ಎಂದಿಗೂ ಬದಲಾಗಬೇಡಿ. ಮದುವೆ ಆಗುವ ಯೋಗ ಸದ್ಯದಲ್ಲೇ ಇದೆ. ಅದೃಷ್ಟದ ಚಿಹ್ನೆ - ಗುಲಾಬಿ ಸ್ಫಟಿಕ ಶಿಲೆ.
9/ 12
ಧನುಸ್ಸು ರಾಶಿ: ನೀವು ಯಾರನ್ನು ತುಂಬಾ ನಂಬಿದ್ದೀರೋ ಅವರನ್ನು ಈ ಸಮಯದಲ್ಲಿ ಪರಿಶೀಲಿಸಬೇಕು. ಯಾಕೆಂದರೆ ನಿಮ್ಮ ಬಗ್ಗೆ ಅಪಪ್ರಚಾರಗಳನ್ನು ಮಾಡುತ್ತಾ ಇದ್ದಾರೆ. ವ್ಯಾಯಾಮ ಮತ್ತು ಧ್ಯಾನವನ್ನು ಹೆಚ್ಚಾಗಿ ಮಾಡಿ. ಅದೃಷ್ಟದ ಚಿಹ್ನೆ - ಬೆಳ್ಳಿ ಉಂಗುರ.
10/ 12
ಮಕರ ರಾಶಿ: ನೀವಿಂದು ಪ್ರವಾಸಕ್ಕೆ ಹೋಗಬಹುದು. ನೀವು ಇಂದು ಆಫೀಸಿಗೆ ರಜೆ ಹಾಕಿದರೆ ಒಳಿತು. ನಿಮ್ಮ ಮನೆಯಲ್ಲಿ ವಾಸ್ತು ದೋಷ ಇದೆ. ಆದಷ್ಟು ಬೇಗ ಪರಿಹರಿಸಿಕೊಳ್ಳಿ. ಅದೃಷ್ಟದ ಚಿಹ್ನೆ - ಉದ್ಯಾನವನ.
11/ 12
ಕುಂಭ ರಾಶಿ: ಬೆಳಗ್ಗೆ ಎದ್ದ ಕೂಡಲೇ ಯೋಗಾಸನ ಮತ್ತು ಧ್ಯಾನ ಮಾಡಿ. ಇಂದಿನ ದಿನ ತುಂಬಾ ಚೆನ್ನಾಗಿ ಇರುತ್ತದೆ. ಯಾವುದೇ ಘಟನೆಗಳು ನಡೆದರೂ ನೀವು ಕುಗ್ಗಬೇಡಿ. ಅದೃಷ್ಟದ ಚಿಹ್ನೆ - ಗುಲಾಬಿ ಚಿನ್ನದ ಉಂಗುರ.
12/ 12
ಮೀನ ರಾಶಿ: ನಿಮ್ಮ ಮನಸ್ಸಿಗೆ ಇಂದು ಸಂತೋಷಸಿಗುತ್ತದೆ. ಈ ತಿಂಗಳು ನಿಮಗೆ ಸ್ಯಾಲರಿ ಹೈಕ್ ಆಗುವ ಸಾಧ್ಯತೆ ಹೆಚ್ಚು. ನಿಮ್ಮ ಕೆಲಸದ ಶೈಲಿಯನ್ನು ಆಫೀಸಿನಲ್ಲಿ ನಿಮ್ಮ ಬಾಸ್ ಇಷ್ಟ ಪಡುತ್ತಾರೆ. ಅದೃಷ್ಟದ ಚಿಹ್ನೆ - ನವಿಲು ಗರಿ.