ನರಸಿಂಹ ಸ್ವಾಮಿಯ ಪೂಜಾ ವಿಧಾನ: ನರಸಿಂಹ ಸ್ವಾಮಿಯ ಪೂಜೆಗೆ ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ ಮಾಡಿ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಅರಿಶಿನ ಶ್ರೀಗಂಧ ಅಥವಾ ಕುಂಕುಮ ತಿಲಕವನ್ನು ಹಚ್ಚಿಕೊಳ್ಳಿ. ನಂತರ ಶುದ್ಧ ನೀರಿನ ಅಭಿಷೇಕ ಮಾಡಬೇಕು. ಹಾಗೆಯೇ ಅರಿಶಿನ ಅಥವಾ ಕುಂಕುಮವನ್ನು ಬೆರೆಸಿದ ಹಾಲಿನ ಅಭಿಷೇಕವನ್ನು ಸಹ ಮಾಡಬೇಕು. ಆ ನಂತರ ಅರಿಶಿನ ಶ್ರೀಗಂಧವನ್ನು ದೇವರಿಗೆ ತಿಲಕವಾಗಿ ಅರ್ಪಿಸಬೇಕು. ಬಳಿಕ ಕುಂಕುಮ, ಅಕ್ಷತೆ, ಹಳದಿ ಹೂವು, ಹಳದಿ ವಸ್ತ್ರಗಳನ್ನು ಅರ್ಪಿಸಬೇಕು. ಅದರ ನಂತರ, ಹಣ್ಣುಗಳನ್ನು ಅರ್ಪಿಸಬೇಕು.