ಉದಯಪುರ: ಇಲ್ಲಿ ಶ್ರೀಮಂತ ಹೋಳಿಯ ಸಂಭ್ರಮ ಆನಂದಿಸಬಹುದು. ಉದಯಪುರದಲ್ಲಿ, ರಾಜಮಹಲ್ನಿಂದ ಮಾಣೆಕ್ ಚೌಕ್ಗೆ ಮೆರವಣಿಗೆಯನ್ನು ನಡೆಸಲಾಗುತ್ತದೆ. ಈ ಮೆರವಣಿಗೆ ವೇಳೆ ರಾಜಸ್ಥಾನದ ಹೆಮ್ಮೆ, ಮತ್ತು ಘನತೆಯನ್ನು ಅನಾವರಣ ಮಾಡಲಾಗುವುದು ರಾಜಸ್ಥಾನಿ ಸಂಗೀತವು ಆಚರಣೆಯನ್ನು ಹೆಚ್ಚು ವರ್ಣರಂಜಿತಗೊಳಿಸುತ್ತದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹೋಳಿ ಆಚರಣೆ ಬೇರೆಲ್ಲೂ ಕಾಣಸಿಗುವುದಿಲ್ಲ
ಶಾಂತಿ-ನಿಕೇತನ್: ಬಂಗಾಳಿ-ಸಂಸ್ಕೃತಿಯ ನಗರವಾದ ಶಾಂತಿ-ನಿಕೇತನ್ನಲ್ಲಿ ವಿಭಿನ್ನ ರೀತಿಯ ಹೋಳಿ ಕಂಡುಬರುತ್ತದೆ. ಈ ಹೋಳಿಯನ್ನು ಗುರುದೇವ್ ರವೀಂದ್ರನಾಥ ಟ್ಯಾಗೋರ್ ಪ್ರಾರಂಭಿಸಿದರು. ಇಂದಿಗೂ ಈ ಹಬ್ಬವನ್ನು ಅದೇ ಸಾಂಪ್ರದಾಯಿಕ ಶೈಲಿಯಲ್ಲಿ ಆಚರಿಸಲಾಗುತ್ತದೆ. ಅಬಿಲ್-ಗುಲಾಲ್ನ ಸಾಂಪ್ರದಾಯಿಕ ಹೋಳಿ ಜೊತೆಗೆ, ಅನೇಕ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಇಲ್ಲಿ ಆಯೋಜಿಸಲಾಗುವುದು