Kuja Dosha: ಕುಜ ದೋಷದಿಂದ ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿರುವಿರಾ? ಇಲ್ಲಿದೆ ಪರಿಹಾರ
Kuja Dosham Effect On Marrital Life: ಮಂಗಳವು ಧೈರ್ಯ, ಸಾಹಸ ಮತ್ತು ಔದಾರ್ಯದ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಆದರೂ ಈ ಗ್ರಹದ ದೋಷವು ಸಂಭವಿಸಿದರೆ ವೈವಾಹಿಕ ಮತ್ತು ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ. ಅದನ್ನೇ ಕುಜ ದೋಷ ಎನ್ನುತ್ತಾರೆ.
ಜಾತಕದಲ್ಲಿ ಕುಜ ದೋಷವಿದ್ದರೆ ದಾಂಪತ್ಯ ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ಪಂಡಿತರು. ಅಲ್ಲದೆ ಗಂಡು ಮತ್ತು ಹೆಣ್ಣು ದಾಂಪತ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜಾತಕದಲ್ಲಿ ಮಂಗಳ ಎರಡನೇ ಮನೆಯಲ್ಲಿದ್ದರೆ ಕುಜ ದೋಷವಿದೆ ಎಂದು ಹೇಳಲಾಗುತ್ತದೆ.
2/ 7
ಆದರೆ, ಕುಜ ದೋಷದಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಣಿತರು ಕೆಲವು ಪರಿಹಾರಗಳನ್ನು ಸೂಚಿಸುತ್ತಾರೆ. ಅವುಗಳು ಯಾವುದೆಂದು ನೋಡೋಣ ಬನ್ನಿ.
3/ 7
ಮಂಗಳವು ಧೈರ್ಯ, ಸಾಹಸ ಮತ್ತು ಔದಾರ್ಯದ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಆದರೂ ಈ ಗ್ರಹದ ದೋಷವು ಸಂಭವಿಸಿದರೆ ವೈವಾಹಿಕ ಮತ್ತು ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ. ಅದನ್ನೇ ಕುಜ ದೋಷ ಎನ್ನುತ್ತಾರೆ.
4/ 7
ಕುಜ ದೋಷವಿದ್ದರೆ ಕುಟುಂಬದ ಮೇಲೂ ತೀವ್ರ ಪರಿಣಾಮ ಬೀರುತ್ತದೆ. ಕುಜಗ್ರಹ 2ನೇ ಮನೆ ನಿದ್ರೆಗೆ ಸಂಬಂಧಿಸಿದೆ. ಇದು ನಿದ್ರೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ. ಇದು ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
5/ 7
ಅದರಲ್ಲೂ ಈ ಕುಜ ದೋಷದಿಂದ ತೊಂದರೆ ಆಗುವವರಿಗೆ ಕೆಲವೊಂದು ಪರಿಹಾರಗಳು ಇಲ್ಲಿವೆ. ನಿಮ್ಮ ಜಾತಕದಲ್ಲಿ ಮಂಗಳ ಗ್ರಹ ಕಂಡುಬಂದರೆ ಮಂಗಳವಾರದಂದು ನವಗ್ರಹ ಮಂತ್ರವನ್ನು ಪಠಿಸಬೇಕು. ಆಂಜನೇಯ ಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡಬೇಕು.
6/ 7
ಹಾಗೆಯೇ ಕುಜ ದೋಷವಿರುವವರು ಗಾಯತ್ರಿ ಮಂತ್ರ ಅಥವಾ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಕುಜ ದೋಷದ ಪರಿಣಾಮಗಳನ್ನು ಕಡಿಮೆ ಮಾಡಬಹುದು.
7/ 7
ಕುಜ ದೋಷವಿರುವವರು ಮಂಗಳವಾರದಂದು ಕತ್ತಿ, ಕೆಂಪು ಕಾಳುಗಳು, ಗೋಧಿ ರೊಟ್ಟಿ, ಕೆಂಪು ರೇಷ್ಮೆ, ಕೆಂಪು ಹವಳಗಳನ್ನು ನಿರ್ಗತಿಕರಿಗೆ ದಾನ ಮಾಡುವ ಮೂಲಕ ದೋಷದಿಂದ ಮುಕ್ತರಾಗಬಹುದು. (ಹಕ್ಕುಸ್ವಾಮ್ಯ: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯನ್ನು ನ್ಯೂಸ್ 18 ಕನ್ನಡ ದೃಢೀಕರಿಸುವುದಿಲ್ಲ)