Health Horoscope 2023: ಹೊಸವರ್ಷದಲ್ಲಿ ಈ 3 ರಾಶಿಯವರಿಗೆ ಆರೋಗ್ಯ ಸಮಸ್ಯೆ ಪಕ್ಕ!
Health Horoscope 2023:
2023 ರಲ್ಲಿ ಕೆಲವು ರಾಶಿಯ ಜನರು ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ. ಮಿಥುನ, ಕನ್ಯಾ, ತುಲಾ, ಧನು, ಕುಂಭ ಮತ್ತು ಮೀನ ರಾಶಿಯವರ ಆರೋಗ್ಯ ಸುಧಾರಿಸುತ್ತದೆ. ಆದರೆ ಕೆಲವು ರಾಶಿಯ ಜನರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ನಿಮ್ಮ ರಾಶಿಯ ಅನುಗುಣವಾಗಿ ಹೊಸವರ್ಷದಲ್ಲಿ ಆರೋಗ್ಯ ಹೇಗಿರಲಿದೆ ಎಂಬುದು ಇಲ್ಲಿದೆ.
ಮೇಷ: 2023 ರಲ್ಲಿ ಮೂಳೆ ಮತ್ತು ಹೊಟ್ಟೆಯ ಸಮಸ್ಯೆಗಳಿಂದ ಈ ರಾಶಿಯವರು ಬಳಲಬಹುದು. ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರಿ. ರೋಗದ ಲಕ್ಷಣವನ್ನು ಹಾಗೂ ಚಿಕಿತ್ಸೆ ಪಡೆಯುವುದನ್ನ ನಿರ್ಲಕ್ಷಿಸಬಾರದು. ವೈದ್ಯರ ಸಲಹೆಯನ್ನು ಅನುಸರಿಸಿ. ಸೂರ್ಯ ದೇವರಿಗೆ ನಿಯಮಿತವಾಗಿ ನೀರನ್ನು ಅರ್ಪಿಸಬೇಕು.
2/ 13
ವೃಷಭ: ಈ ವರ್ಷ ಆರೋಗ್ಯದ ವಿಚಾರಕ್ಕೆ ಬಂದರೆ ಈ ರಾಶಿಯವರಿಗೆ ಮಿಶ್ರ ಫಲ ಇರುತ್ತದೆ. ಕಿವಿ, ಮೂಗು, ಗಂಟಲು ಮತ್ತು ಮೂಳೆಗಳ ಬಗ್ಗೆ ಜಾಗರೂಕರಾಗಿರಿ. ಆರೋಗ್ಯದ ಬಗ್ಗೆ ಚಿಂತಿಸಬೇಡಿ. ವಾಕಿಂಗ್ ಮತ್ತು ಯೋಗ ಮಾಡಿ. ಶನಿ ದೇವರ ಆರಾಧನೆ ಮಾಡಿ.
3/ 13
ಮಿಥುನ: ಈ ವರ್ಷ ಮಿಥುನ ರಾಶಿಯವರ ಆರೋಗ್ಯ ಉತ್ತಮವಾಗಿರುತ್ತದೆ. ಹಳೆಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಮಾನಸಿಕ ಸ್ಥಿತಿ ಸಹ ಸುಧಾರಿಸುತ್ತದೆ. ಈ ವರ್ಷದ ಕೊನೆಯಲ್ಲಿ ಗಾಯವಾಗುವ ಅಪಾಯವಿದೆ. ವಾಹನಗಳನ್ನು ಚಾಲನೆ ಮಾಡುವಾಗ ಜಾಗರೂಕರಾಗಿರಿ. ಓಂ ನಮ: ಶಿವಾಯ ಮಂತ್ರವನ್ನು ಜಪಿಸಬೇಕು.
4/ 13
ಕರ್ಕಾಟಕ: ಈ ವರ್ಷ ಕಟಕ ರಾಶಿಯವರಿಗೆ ಅನೇಕ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಥೈರಾಯ್ಡ್ ಮತ್ತು ಬೊಜ್ಜು ಕಾಡಬಹುದು. ಅನಗತ್ಯ ಒತ್ತಡವನ್ನು ತಪ್ಪಿಸಿ. ನಿಮ್ಮ ಆರೋಗ್ಯ ಸರಿಯಿಲ್ಲದಿದ್ದರೆ, ಯಾವುದನ್ನೂ ನಿರ್ಲಕ್ಷ್ಯ ಮಾಡಬೇಡಿ ತಕ್ಷಣ ಆಸ್ಪತ್ರೆಗೆ ಹೋಗಿ. ವೈದ್ಯರನ್ನು ಕಾಣಬೇಕು. ಶನಿ ದೇವರನ್ನು ಪೂಜಿಸಬೇಕು
5/ 13
ಸಿಂಹ: ಸಿಂಹ ರಾಶಿಯವರು ಈ ವರ್ಷ ಆರೋಗ್ಯದ ವಿಷಯದಲ್ಲಿ ಮಿಶ್ರ ಫಲಿತಾಂಶಗಳನ್ನು ಕಾಣುತ್ತಾರೆ. ಎದೆ, ಮೂಳೆ ಸಮಸ್ಯೆ ಹಾಗೂ ರಕ್ತದೊತ್ತಡದ ಇದ್ದಲ್ಲಿ ಎಚ್ಚರಿಕೆ ವಹಿಸಬೇಕು. ಮಧುಮೇಹದಂತಹ ಸಮಸ್ಯೆಗಳಿದ್ದರೆ, ಅದು ಮಾರಣಾಂತಿಕವಾಗಬಹುದು. ನಿಮ್ಮ ದೈನಂದಿನ ದಿನಚರಿಯ ಮೇಲೆ ಕೇಂದ್ರೀಕರಿಸಿ. ಸೂರ್ಯನ ಪೂಜೆ ಮಾಡಿ.
6/ 13
ಕನ್ಯಾ: ಈ ವರ್ಷ ಕನ್ಯಾ ರಾಶಿಯವರ ಆರೋಗ್ಯ ಸುಧಾರಿಸಲಿದೆ. ಕ್ರಮೇಣ ಪರಿಸ್ಥಿತಿಗಳು ಸುಧಾರಿಸುತ್ತವೆ. ಇವರು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ. ತಲೆನೋವಿನಂತಹ ಸಣ್ಣಪುಟ್ಟ ಸಮಸ್ಯೆಗಳು ಬರಬಹುದು. ಗುರು ಮಂತ್ರವನ್ನು ನಿಯಮಿತವಾಗಿ ಜಪಿಸಬೇಕು.
7/ 13
ತುಲಾ: ತುಲಾ ರಾಶಿಯವರ ಆರೋಗ್ಯ ಸುಧಾರಿಸಲಿದೆ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡರೆ ಪರಿಹಾರ ಸಿಗುತ್ತದೆ. ಆಹಾರದ ವಿಷಯದಲ್ಲಿ ಜಾಗರೂಕರಾಗಿರಿ. ಸಿಕ್ಕ ಸಿಕ್ಕ ಆಃಆರ ತಿನ್ನಬಾರದು. ಸುಮ್ಮನೆ ಕೂರಬಾರದು. ಸಮಯದ ಸದುಪಯೋಗ ಮಾಡಿಕೊಳ್ಳಿ. ಶಿವನ ಆರಾಧನೆ ಮಾಡಿ.
8/ 13
ವೃಶ್ಚಿಕ: ವೃಶ್ಚಿಕ ರಾಶಿಯವರು 2023ರಲ್ಲಿ ಎಚ್ಚರಿಕೆ ವಹಿಸಬೇಕು. ಜ್ವರದ ಜೊತೆಗೆ ಹೊಟ್ಟೆ ಮತ್ತು ಕರುಳಿನ ಸಮಸ್ಯೆಗಳು ಉಂಟಾಗಬಹುದು. ಸ್ಥೂಲಕಾಯತೆಯ ಮೇಲೆ ಕೇಂದ್ರೀಕರಿಸಿ. ಆಹಾರ ಮತ್ತು ಪಾನೀಯವನ್ನು ನಿಯಂತ್ರಿಸುವುದು ಪ್ರಯೋಜನಕಾರಿ ಅನಿಸುತ್ತದೆ. ಶನಿ ದೇವರನ್ನು ಆರಾಧಿಸಿ. ಕಪ್ಪು ವಸ್ತುಗಳನ್ನು ದಾನ ಮಾಡಿ
9/ 13
ಧನುಸ್ಸು: ಆರೋಗ್ಯ ಸ್ಥಿತಿಯಲ್ಲಿ ನಿರಂತರ ಬೆಳವಣಿಗೆ ಇರುತ್ತದೆ. ಮಾನಸಿಕ ಆತಂಕ ಮತ್ತು ಒತ್ತಡವನ್ನು ನಿವಾರಣೆ ಆಗುತ್ತದೆ. ಮೂಳೆಗಳು ಮತ್ತು ಕಣ್ಣಿನ ಸಮಸ್ಯೆಗಳು ಸುಧಾರಿಸುತ್ತವೆ. ವರ್ಷದ ಆರಂಭದಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಪ್ರತಿದಿನ ಸೂರ್ಯನಿಗೆ ನೀರನ್ನು ಅರ್ಪಿಸಿ
10/ 13
ಮಕರ: ಆರಂಭದಲ್ಲಿ ಉದರ ಸಂಬಂಧಿ ಸಮಸ್ಯೆಗಳಿರಬಹುದು. ಆದರೆ ನಂತರ ಕ್ರಮೇಣ ಸುಧಾರಿಸುತ್ತದೆ. ಮುಖ್ಯ ಗಮನವು ಮಾನಸಿಕ ಒತ್ತಡದ ಮೇಲೆ ಇರಬೇಕು. ಎಲ್ಲವೂ ಹೆಚ್ಚಾಗಬಾರದು ಮಂಗಳವಾರ ಮತ್ತು ಶನಿವಾರದಂದು ಸುಂದರಕಾಂಡವನ್ನು ಪಠಿಸಬೇಕು.
11/ 13
ಕುಂಭ: ಕಳೆದ ಬಾರಿಗಿಂತ ಈ ಬಾರಿ ಆರೋಗ್ಯ ಉತ್ತಮವಾಗಿರುತ್ತದೆ. ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಹುಣ್ಣುಗಳಂತಹ ಸಣ್ಣ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಔಷಧಿ ತೆಗೆದುಕೊಳ್ಳುವುದರಲ್ಲಿ, ನಡಿಗೆಯ ವಿಚಾರದಲ್ಲಿ ಸ್ವಲ್ಪವೂ ನಿರ್ಲಕ್ಷ್ಯ ಮಾಡಬಾರದು. ಸದಾಶಿವನನ್ನು ಆರಾಧಿಸಿ.
12/ 13
ಮೀನ:ಈ ವರ್ಷ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಹಳೆಯ ಕಾಯಿಲೆಗಳಿಂದ ಪರಿಹಾರ ಸಿಗುತ್ತದೆ. ಅತಿಯಾದ ಆತ್ಮವಿಶ್ವಾಸದಿಂದ ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಬೊಜ್ಜು, ರಕ್ತದೊತ್ತಡ, ಹೊಟ್ಟೆಯ ಬಗ್ಗೆ ಕಾಳಜಿ ವಹಿಸಬೇಕು. ಶನಿ ಮಂತ್ರವನ್ನು ಪಠಿಸುವುದು ಪ್ರಯೋಜನಕಾರಿ.
13/ 13
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)