ವಾಯುಪುತ್ರ ಆಂಜನೇಯನನ್ನು ಪೂಜಿಸಿದ್ರೆ ಎಲ್ಲ ದೋಷಗಳು ದೂರ ಆಗುತ್ತವೆ ಎಂಬ ಬಲವಾದ ನಂಬಿಕೆ ಇದೆ. ಅದರಲ್ಲಿ ಈ ಎರಡು ದಿನಗಳಲ್ಲಿ ಪೂಜೆ ಮಾಡೋದು ಶುಭಕರ ಅಂತ ಹಿರಿಯರು ಹೇಳುತ್ತಾರೆ. (ಸಾಂದರ್ಭಿಕ ಚಿತ್ರ)
2/ 7
ಪ್ರತಿ ಮಂಗಳವಾರ ಮತ್ತು ಶನಿವಾರ ಆಂಜನೇಯನನ್ನು ಪೂಜಿಸಬೇಕು. ಈ ದಿನ ಎಳ್ಳೆಣ್ಣೆಯಿಂದ ದೀಪ ಬೆಳಗಿದ್ರೆ ರೋಗ ಭಾದೆಗೆ ಸಂಬಂಧಿಸಿದ ದೋಷಗಳು ದೂರವಾಗುತ್ತವೆ ಎಂಬ ಬಲವಾದ ನಂಬಿಕೆ ಇದೆ. (ಸಾಂದರ್ಭಿಕ ಚಿತ್ರ)
3/ 7
ಆಂಜನೇಯನನ್ನು ಆರಾಧನೆ ಮಾಡೋದರಿಂದ ನೀವು ಕಾಣುತ್ತಿರುವ ಬಹು ವರ್ಷಗಳ ಕನಸುಗಳು ಈಡೇರುತ್ತವೆ. ಇದಕ್ಕೆ ಪ್ರತಿ ಮಂಗಳವಾರ ಮತ್ತು ಶನಿವಾರ ಪೂಜೆ ಸಲ್ಲಿಸೋದರ ಜೊತೆಗೆ ಹನುಮಾನ್ ಚಾಲೀಸಾ ಮತ್ತು ಅಂಜನೇಯ ಸ್ವಾಮಿ ದಂಡಕಂ ಪಠಿಸಬೇಕು. (ಸಾಂದರ್ಭಿಕ ಚಿತ್ರ)
4/ 7
ವಾಯು ಪುತ್ರನನ್ನು ಪೂಜೆ ಮಾಡೋದರಿಂದ ದೀರ್ಘಕಾಲದ ಕಾಯಿಲೆಗಳನ್ನು ತೊಡೆದುಹಾಕಲು, ಕೈಯಲ್ಲಿರುವ ಕಾರ್ಯದಲ್ಲಿ ಯಶಸ್ವಿಯಾಗಲು, ಶತ್ರುಗಳನ್ನು ಜಯಿಸಲು ಸಾಧ್ಯ ಅಗುತ್ತೆ ಅನ್ನೋ ನಂಬಿಕೆ ಇದೆ. (ಸಾಂದರ್ಭಿಕ ಚಿತ್ರ)
5/ 7
ಇನ್ನೂ ಕುಸ್ತಿ ಪಟುಗಳು ಆಂಜನೇಯಸ್ವಾಮಿಯನ್ನೇ ಗುರುವಾಗಿ ಸ್ವೀಕರಿಸಿ ಅಭ್ಯಾಸ ಮಾಡುತ್ತಾರೆ. ಯಾವುದೇ ಜಿಮ್ ಕೇಂದ್ರ, ಕುಸ್ತಿ ಕೇಂದ್ರಗಳಲ್ಲಿ ಆಂಜನೇಯ ಸ್ವಾಮಿ ಫೋಟೋ ಹಾಕಲಾಗುತ್ತದೆ. (ಸಾಂದರ್ಭಿಕ ಚಿತ್ರ)
6/ 7
ಆಂಜನೇಯ ದೇವರಿಗೆ ಪೂಜೆ ಸಲ್ಲಿಸುವಾ ವಿಶೇಷ ನೈವೇದ್ಯ ಇರಿಸಬೇಕು. ಹನುಮಂತನಿಗೆ ಪ್ರಿಯವಾದ ಜಹಾಂಗೀರ್, ಕೇಸರಿ ಅನ್ನ, ಲಡ್ಡು, ಬೆಲ್ಲ ಮತ್ತು ಬೇಳೆ, ಒಣ ಹಣ್ಣುಗಳು, ಬನಾರಸಿ ಪಾನ್ ಇರಿಸಬೇಕು ಎಂದು ಹೇಳುತ್ತಾರೆ. (ಸಾಂದರ್ಭಿಕ ಚಿತ್ರ)
7/ 7
ಹನುಮಂತನನ್ನು ಪೂಜಿಸಿದ್ರೆ ಕೆಟ್ಟ ದೃಷ್ಟಿಗಳಿಂದ ಭಕ್ತರನ್ನು ರಕ್ಷಿಸುತ್ತಾನೆ. ಶತ್ರುಗಳ ವಿರುದ್ಧ ಹೋರಾಡಲು ಶಕ್ತಿ ಮತ್ತು ಧೈರ್ಯ ಕರುಣಿಸುತ್ತಾನೆ ಎಂದು ಹೇಳುತ್ತಾರೆ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)