ಅಡುಗೆ ಮನೆ ವಾಸ್ತು: ಮನೆಯ ಅಡುಗೆ ಮನೆಯು ಪೂರ್ವ ಮತ್ತು ಆಗ್ನೇಯ ದಿಕ್ಕು ಆಗಿದ್ದರೆ ಅನುಕೂಲಕರ. ಅಡುಗೆ ಮಾಡುವಾಗ ಗ್ಯಾಸ್ ಸ್ಟವ್ ಅನ್ನು ಅಡುಗೆ ಮಾಡುವವರು ಪೂರ್ವ ದಿಕ್ಕಿಗೆ ಅಭಿಮುಖವಾಗಿ ನಿಂತು ಅಡುಗೆ ಮಾಡುವಂತೆ ಇಡಬೇಕು. ಉತ್ತರ ದಿಕ್ಕು ನೀರಿನ ದಿಕ್ಕು ಆದ್ದರಿಂದ ಕುಡಿಯುವ ನೀರನ್ನು ಉತ್ತರ ದಿಕ್ಕಿನಲ್ಲೇ ಇಡಬೇಕು, ಸಿಂಕ್ ಕೂಡಾ ಇದೇ ದಿಕ್ಕಿನಲ್ಲಿ ಇಡಬಹುದು. ಮೈಕ್ರೋವೇವ್ ಹಾಗೂ ಇತರ ಇಲೆಕ್ಟ್ರಾನಿಕ್ ವಸ್ತುಗಳನ್ನು ಅಡುಗೆ ಮನೆಯ ದಕ್ಷಿಣ ದಿಕ್ಕಿನಲ್ಲಿ ಇರಿಸಿ. ಇನ್ನೂ ಡೈನಿಂಗ್ ಟೇಬಲ್ ವಾಯುವ್ಯ ಸ್ಥಳದಲ್ಲಿಟ್ಟರೆ ಉತ್ತಮ.
ಮನೆಯಲ್ಲಿ ಆಹಾರದ ಕೊರತೆ ಉಂಟಾಗದೇ ಇರುವುದಕ್ಕೆ ಇರುವ ವಾಸ್ತು ಸಲಹೆಗಳೇನು?: ಮನೆ ಅಂದರೆ ಅಲ್ಲಿ ತಿನ್ನುವ ಆಹಾರ ಸುಭೀಕ್ಷವಾಗಿರಬೇಕು. ಆಹಾರವನ್ನು ಅನ್ನಪೂರ್ಣೆ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಅಡುಗೆ ಮನೆಯೇ ಮನೆಯಲ್ಲಿ ಪ್ರಮುಖ ಸ್ಥಾನ. ಹೀಗೆ ಆಹಾರದ ಯಾವುದೇ ಕೊರತೆ ಉಂಟಾಗದೇ ಇರುವುದಕ್ಕೂ ವಾಸ್ತು ಇದೆ. ಆಹಾರದ ಹರಿವಿಗೆ ವಾಸ್ತು ಒಂದು ಕಡೆಯಾದರೆ, ಕೆಲ ವಸ್ತುಗಳನ್ನು ಇಡುವುದು ಸಹ ಆಹಾರದ ಕೊರತೆಯನ್ನು ತಪ್ಪಿಸುತ್ತದೆ.