Hair Wash Day: ಈ ದಿನ ತಲೆಸ್ನಾನ ಮಾಡಿದ್ರೆ ಹಣ ಕಳೆದುಕೊಳ್ಳೋದು ಗ್ಯಾರಂಟಿ, ವಾರ ನೋಡಿ ಸ್ನಾನ ಮಾಡಿ!
Hair Wash Day: ಮಹಿಳೆಯರಿಗೆ ತಲೆಸ್ನಾನ ಮಾಡುವುದು ನಿಜಕ್ಕೂ ದೊಡ್ಡ ಕೆಲಸ ಎಂದರೆ ತಪ್ಪಲ್ಲ. ಇದಕ್ಕೆ ಹೆಚ್ಚಿನ ಸಮಯ ಹಾಗೂ ಕಾಳಜಿಯ ಅವಶ್ಯಕತೆ ಇರುತ್ತದೆ. ಹಾಗಾಗಿ ಸಮಯ ಸಿಕ್ಕಾಗ ತಲೆಸ್ನಾನ ಮಾಡುತ್ತಾರೆ. ವಾರ ಯಾವುದು ಎಂಬುದನ್ನ ನೋಡುವುದಿಲ್ಲ. ಆದರೆ ಜ್ಯೋತಿಷ್ಯದ ಪ್ರಕಾರ ಮಹಿಳೆಯರು ತಲೆಸ್ನಾನ ಮಾಡಲು ಸಹ ಒಂದು ದಿನವಿದೆ. ನಿರ್ದಿಷ್ಟವಾಗಿ ಆ ದಿನವೇ ತಲೆಸ್ನಾನ ಮಾಡಿದರೆ ಸಂಪತ್ತು ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಜ್ಯೋತಿಷ್ಯದ ಪ್ರಕಾರ ಯಾವ ದಿನ ತಲೆಸ್ನಾನ ಮಾಡಬೇಕು ಎಂಬುದು ಇಲ್ಲಿದೆ.
ಮಹಿಳೆಯರು ಕೂದಲ ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. 2 ದಿನಕ್ಕೆ ಒಮ್ಮೆ ತಲೆಸ್ನಾನ ಮಾಡುವುದು, ಎಣ್ಣೆ ಹಚ್ಚುವುದು ಹೀಗೆ ಅನೇಕ ರೀತಿಯಲ್ಲಿ ಅದರ ಆರೈಕೆ ಮಾಡುತ್ತಾರೆ. ಆದರೆ ಈ ಕೂದಲ ಆರೈಕೆಗೂ ನಮ್ಮ ಆರ್ಥಿಕ ಸ್ಥಿತಿಗೂ ಸಂಬಂಧವಿದೆ ಎನ್ನುವುದು ಮಾತ್ರ ಹಲವಾರು ಜನರಿಗೆ ಗೊತ್ತಿಲ್ಲ.
2/ 8
ಹೌದು, ಮಹಿಳೆಯರು ಕೂದಲು ಕಟ್ ಮಾಡುವ ದಿನ ಹಾಗೂ ತಲೆಸ್ನಾನ ಮಾಡುವ ದಿನದಿಂದ ನಮ್ಮ ಆರ್ಥಿಕ ಪರಿಸ್ಥಿತಿ ನಿರ್ಧಾರವಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಹಾಗಾಗಿ ಬಹಳ ಎಚ್ಚರಿಕೆಯಿಂದ ತಲೆಸ್ನಾನ ಮಾಡುವ ದಿನವನ್ನು ಆಯ್ಕೆ ಮಾಡಬೇಕು, ಇಲ್ಲದಿದ್ದರೆ ನಷ್ಟ ಅನುಭವಿಸುವುದು ಗ್ಯಾರಂಟಿ.
3/ 8
ಬುಧವಾರ: ಮದುವೆಯಾಗದ ಹುಡುಗಿಯರು ಬುಧವಾರ ತಲೆಸ್ನಾನ ಮಾಡಬಾರದು. ಈ ದಿನ ತಲೆಸ್ನಾನ ಮಾಡುವುದರಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗೆಯೇ ಈ ದಿನ ತಲೆಗೆ ಎಣ್ಣೆ ಹಚ್ಚುವುದು ಸಹ ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತದೆ.
4/ 8
ಶುಕ್ರವಾರ: ಶುಕ್ರವಾರವನ್ನು ಲಕ್ಷ್ಮೀಯ ದಿನ ಎಂದು ಪರಿಗಣಿಸಲಾಗುತ್ತದೆ, ಹಾಗಾಗಿ ಈ ದಿನ ಮಹಿಳೆಯರು ತಲೆಸ್ನಾನ ಮಾಡುವುದು ಬಹಳ ಶುಭ ಎನ್ನಲಾಗುತ್ತದೆ. ಶುಕ್ರವಾರ ತಲೆಸ್ನಾನ ಮಾಡುವುದರಿಂದ ಆರ್ಥಿಕ ಸಮಸ್ಯೆಗಳೆಲ್ಲಾ ಮಾಯವಾಗಿ, ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.
5/ 8
ಉಪವಾಸ ಮಾಡುವ ದಿನ: ನೀವು ಉಪವಾಸ ಮಾಡುವ ದಿನ ಸಹ ತಲೆಸ್ನಾನ ಮಾಡಬಾರದು. ಉಪವಾಸಕ್ಕೂ ಒಂದು ದಿನ ಮೊದಲು ನೀವು ತಲೆಸ್ನಾನ ಮಾಡಿದರೆ ಒಳ್ಳೆಯದಾಗುತ್ತದೆ. ಅನಿವಾರ್ಯ ಕಾರಣದಿಂದ ಉಪವಾಸ ಮಾಡುತ್ತಿರುವ ದಿನವೇ ತಲೆಸ್ನಾನ ಮಾಡಬೇಕಾದರೆ ಹಸಿ ಹಾಲನ್ನು ನೀರಿಗೆ ಮಿಶ್ರಣ ಮಾಡಿ, ಆ ನೀರಿನಿಂದ ಮಾತ್ರ ಮಾಡಿ.
6/ 8
ಗುರುವಾರ: ಗುರುವಾರ ಸಹ ಮಹಿಳೆಯರು ತಲೆಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಅಲ್ಲದೇ, ಈ ದಿನ ತಲೆಸ್ನಾನ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆ ಉಂಟಾಗುತ್ತದೆ ಎನ್ನಲಾಗುತ್ತದೆ.
7/ 8
ಶನಿವಾರ: ಇನ್ನು ಶನಿವಾರ ಮಹಿಳೆಯರು ತಲೆಗೆ ಎಣ್ಣೆ ಹಚ್ಚುವುದನ್ನ ಅಶುಭ ಎನ್ನಲಾಗುತ್ತದೆ. ಇದರಿಂದ ಸಹ ಆರ್ಥಿಕವಾಗಿ ನಷ್ಟವಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಮುಖ್ಯವಾಗಿ ಮದುವೆಯಾಗಿರುವ ಹೆಣ್ಣು ಮಕ್ಕಳು ಎಣ್ಣೆ ಹಚ್ಚಲೇಬಾರದು.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)